'ಮಹೇಶ್ ಬಾಬು 28' ಚಿತ್ರದ ಗ್ಲಿಂಪ್ಸ್ ಇಂದೇ ಥಿಯೇಟರ್‌ನಲ್ಲಿ ಬಿಡುಗಡೆ; ಯುಟ್ಯೂಬ್‌ನಲ್ಲಿ ಯಾವಾಗ?

ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಮುಂದಿನ ಚಿತ್ರವನ್ನು ಪ್ರಸಿದ್ಧ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜತೆ ಮಾಡುತ್ತಿದ್ದಾರೆ. ಇದು ಮಹೇಶ್ ಬಾಬು ನಟನೆಯ 28ನೇ ಚಿತ್ರವಾಗಿದ್ದು, ದಿನದಿಂದ ದಿನಕ್ಕೆ ಈ ಚಿತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಇನ್ನು ಈ ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗದ ಕಾರಣ 'SSMB 28' ( ಸೂಪರ್ ಸ್ಟಾರ್ ಮಹೇಶ್ ಬಾಬು 28 ) ಎಂಬ ತಾತ್ಕಾಲಿಕ ಹೆಸರಿನಿಂದ ಕರೆಯಲಾಗುತ್ತಿದ್ದು, ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ಈ ಚಿತ್ರ ಕಳೆದ ವರ್ಷವೇ ಘೋಷಿಸಲ್ಪಟ್ಟಿತ್ತು.

Mahesh Babu and Trivikram Srinivas combos SSMB 28 glimpse releasing today

ಚಿತ್ರತಂಡ ಚಿತ್ರೀಕರಣ ಆರಂಭಕ್ಕಾಗಿ ವಿಶೇಷ ಟೀಸರ್ ಅನ್ನೂ ಸಹ ಬಿಡುಗಡೆ ಮಾಡಿತ್ತು. ತದನಂತರ ಹೆಚ್ಚೇನೂ ಅಪ್‌ಡೇಟ್ ನೀಡದ ಚಿತ್ರತಂಡ ಪೋಸ್ಟರ್ ಒಂದನ್ನು ಹಂಚಿಕೊಂಡಿತ್ತು. ಕಳೆದ ಐದಾರು ಚಿತ್ರಗಳಲ್ಲಿ ಸಮಾಜಕ್ಕೆ ಸಂದೇಶ ನೀಡುವಂತಹ ಸಾಲು ಸಾಲು ಸ್ಕ್ರಿಪ್ಟ್‌ಗಳನ್ನು ಆರಿಸಿಕೊಂಡಿದ್ದ ಮಹೇಶ್ ಬಾಬು ಈ ಬಾರಿ ಚಿತ್ರದ ಮೊದಲ ಪೋಸ್ಟರ್‌ನಲ್ಲಿಯೇ ಸಿಗರೇಟ್ ಸೇದುತ್ತಾ ದರ್ಶನ ಕೊಟ್ಟಿದ್ದರು. ಇದನ್ನು ಕಂಡ ಮಹೇಶ್ ಅಭಿಮಾನಿಗಳು ಅಬ್ಬಾ.. ವಿಂಟೇಜ್ ಮಹೇಶ್ ಬಾಬು ಈಸ್ ಬ್ಯಾಕ್ ಎಂದಿದ್ದರು.

ಹೀಗೆ ಹೆಚ್ಚೇನೂ ಅಪ್‌ಡೇಟ್ ಬಿಟ್ಟುಕೊಡದ SSMB 28 ಚಿತ್ರತಂಡ ಇದೀಗ ಚಿತ್ರದ ಗ್ಲಿಂಪ್ಸ್ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಲು ಮುಂದಾಗಿದೆ. ಹೌದು, ಇಂದು ( ಮೇ 31 ) ಮಹೇಶ್ ಬಾಬು ತಂದೆ ತೆಲುಗಿನ ಸೂಪರ್ ಸ್ಟಾರ್ ಕೃಷ್ಣ ಅವರ ಜನ್ಮದಿನದ ಪ್ರಯುಕ್ತ ವಿವಿಧ ಚಿತ್ರಮಂದಿರಗಳಲ್ಲಿ 'ಮೋಸಗಾಳ್ಳಕು ಮೋಸಗಾಡು' ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಈ ಚಿತ್ರ ಪ್ರದರ್ಶನವಾಗಲಿರುವ ಚಿತ್ರಮಂದಿರಗಳಲ್ಲಿ ಈ SSMB 28 ಚಿತ್ರದ ಗ್ಲಿಂಪ್ಸ್ ಅನ್ನು ಪ್ರದರ್ಶಿಸಲು ಚಿತ್ರತಂಡ ತಯಾರಿ ನಡೆಸಿಕೊಂಡಿದೆ. ಇನ್ನು ಈ ಗ್ಲಿಂಪ್ಸ್ ವಿಡಿಯೊವನ್ನು ಮಹೇಶ್ ಅಭಿಮಾನಿಗಳೇ ಬಿಡುಗಡೆ ಮಾಡಲಿದ್ದು, ಚಿತ್ರಮಂದಿರಗಳಲ್ಲಿ ಸಂಜೆ ಆರು ಗಂಟೆಗೆ ಪ್ರದರ್ಶನವಾಗಲಿದ್ದು, ಯುಟ್ಯೂಬ್‌ನಲ್ಲಿ ಸಂಜೆ 6.39ಗೆ ಬಿಡುಗಡೆಯಾಗಲಿದೆ.

Mahesh Babu and Trivikram Srinivas combos SSMB 28 glimpse releasing today

ಸದ್ಯ ಮಹೇಶ್ ಬಾಬು ಫೈಟಿಂಗ್ ದೃಶ್ಯವೊಂದರಲ್ಲಿ ಸೆಣಸಾಡುತ್ತಿರುವ ಚಿತ್ರಗಳನ್ನು ಚಿತ್ರತಂಡ ಹಂಚಿಕೊಳ್ಳುತ್ತಿದ್ದು ಈ ದೃಶ್ಯವನ್ನೇ ಗ್ಲಿಂಪ್ಸ್ ಅನ್ನಾಗಿ ಬಿಡುಗಡೆ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಈ ಹಿಂದೆ ಅತಡು ಹಾಗೂ ಖಲೇಜಾ ರೀತಿಯ ಮಾಸ್ಟರ್‌ಪೀಸ್ ಚಿತ್ರಗಳನ್ನು ನೀಡಿದ್ದ ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಮೂರನೇ ಚಿತ್ರವಾಗಿದ್ದು ದಶಕದ ಬಳಿಕ ಕೈ ಜೋಡಿಸಿರುವ ಈ ಜೋಡಿ ಈ ಬಾರಿ ಯಾವ ದೊಡ್ಡ ಮಟ್ಟದಲ್ಲಿಯೇ ಮೋಡಿ ಮಾಡಲಿದೆ ಎಂಬ ನಿರೀಕ್ಷೆ ಇದೆ.

ಚಿತ್ರಕ್ಕೆ ಹಾರಿಕಾ & ಹಾಸಿನಿ ಕ್ರಿಯೇಷನ್ಸ್ ಬಂಡವಾಳ ಹೂಡಿದ್ದು, ಮಹೇಶ್ ಬಾಬು ಸರ್ಕಾರಿ ವಾರು ಪಾಟ ಚಿತ್ರದ ಸಾಮಾನ್ಯ ಯಶಸ್ಸಿನ ಬಳಿಕ ಈ ಚಿತ್ರದ ಮೂಲಕ ದೊಡ್ಡ ಹಿಟ್ ಬಾರಿಸುವ ನಿರೀಕ್ಷೆಯಲ್ಲಿದ್ದರೆ, ಬಿಗ್ಗೆಸ್ಟ್ ಬ್ಲಾಕ್‌ಬಸ್ಟರ್ ಅಲಾ ವೈಕುಂಠಪುರಮುಲೋ ಚಿತ್ರದ ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. ಚಿತ್ರ ಮುಂದಿನ ವರ್ಷದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 13ರಂದು ಬಿಡುಗಡೆಯಾಗಲಿದೆ.

More from Filmibeat

English summary
Mahesh Babu and Trivikram Srinivas combo's SSMB 28 glimpse releasing today. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X