ಮಹೇಶ್‌ ಬಾಬು, ವಿಜಯ್ ಅಭಿಮಾನಿಗಳ ವಾರ್: ನೆಪವಾಯ್ತು ಸಾಂಗ್ ರಿಲೀಸ್!

ಸಿನಿಮಾರಂಗದಲ್ಲಿ ದೊಡ್ಡ ಸ್ಟಾರ್ ನಟರಿಗೆ ಅವರದ್ದೇ ಆದ ಅಭಿಮಾನಿ ಬಳಗ ಇರುತ್ತೆ. ಹಾಗಾಗಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ಆಗಾಗ ಫ್ಯಾನ್‌ ವಾರ್ ನಡೆಯುತ್ತಲೇ ಇರುತ್ತದೆ. ಕನ್ನಡ ಚಿತ್ರರಂಗದಲ್ಲೂ ಕೂಡ ಆಗಾಗ ಫ್ಯಾನ್ ವಾರ್ ನಡೆಯುತ್ತಿರುತ್ತದೆ. ಯಾವುದೋ ಒಂದು ವಿಚಾರಕ್ಕೆ ಸ್ಟಾರ್ ನಟರ ಅಭಿಮಾನಿಗಳು ಜಗಳಕ್ಕೆ ಇಳಿದು ಬಿಡುತ್ತಾರೆ.

ಈಗ ಫ್ಯಾನ್ಸ್ ವಾರ್ ಮೂಲಕ ಸದ್ದು ಮಾಡುತ್ತಿರುವ ನಟರು ಎಂದರೆ ಅದು ತಮಿಳು ನಟ ವಿಜಯ್ ಮತ್ತು ತೆಲುಗು ನಟ ಮಹೇಶ್‌ ಬಾಬು. ಹೌದು ಸದ್ಯ ಮಹೇಶ್ ಬಾಬು ಮತ್ತು ವಿಜಯ್ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ವಾರ್‌ಗೆ ಇಳಿದು ಬಿಟ್ಟಿದ್ದಾರೆ. ನಮ್ಮ ಹೀರೋ ಹೆಚ್ಚು, ನಮ್ಮ ಹೀರೋನೆ ಮೇಲು ಅಂತ ವಾದ ನಡೆಸಿದ್ದಾರೆ.

Recommended Video

ಧಿಡೀರ್ ಅಂತ ಕೋಟಿ ಸಂಭಾವನೆ ಕೇಳಿದ ಶ್ರೀಲೀಲಾಗೆ ಏನಾಗ್ತಿದೆ?

ಮಹೇಶ್ ಬಾಬು ಮತ್ತು ವಿಜಯ್ ತಮ್ಮ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇಬ್ಬರೂ ಸಹ ಪರಸ್ಪರ ಉತ್ತಮ ಬಾಂಧವ್ಯವನ್ನು ಹಂಚಿಕೊಳ್ಳುತ್ತಾರೆ. ವಿಜಯ್ ಅವರು ಮಹೇಶ್ ಅವರ ಕೆಲವು ಚಿತ್ರಗಳನ್ನು ತಮಿಳಿನಲ್ಲೂ ರೀಮೇಕ್ ಮಾಡಿದರು. ಆದರೂ ಕೂ ಅವರ ಅಭಿಮಾನಿಗಳು ಪರಸ್ಪರ ಸೌಹಾರ್ದ ಸಂಬಂಧವನ್ನು ಕಾಪಾಡಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಹೀಗಾಗಿ, ಅವರು ಸಾಮಾಜಿಕ ಜಾಲತಾಣಗಳಲ್ಲಿ ವಾರ್ ಶುರು ಮಾಡಿ ಬಿಡುತ್ತಾರೆ.

ಮಹೇಶ್ ಬಾಬು v/s ವಿಜಯ್ ಅಭಿಮಾನಿಗಳು!

ಮಹೇಶ್ ಬಾಬು v/s ವಿಜಯ್ ಅಭಿಮಾನಿಗಳು!

ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳ ಕೋಳಿ ಜಗಳ ಹೊಸ ರೂಢಿಯಲ್ಲ. ನಾವು ಒಮ್ಮೊಮ್ಮೆ ಅವರಿಗೆ ಸಾಕ್ಷಿಯಾಗುತ್ತೇವೆ. ಈಗ ವಿಜಯ್ ಮತ್ತು ಮಹೇಶ್ ಅಭಿಮಾನಿಗಳ ಸರದಿ. ಇಬ್ಬರೂ ನಟರ ಅಭಿಮಾನಿಗಳು ಈಗ ಸಿನಿಮಾ ಕಾರಣಕ್ಕೆ ಟ್ವಿಟ್ಟರ್‌ನಲ್ಲಿ ವಾರ್ ಶುರು ಮಾಡಿದ್ದಾರೆ. ಇವರ ಜಗಳಕ್ಕೆ ಯಾರೋ ಇನ್ಯಾರನ್ನೂ ಬೈದಿದ್ದು ಅಲ್ಲ. ಒಂದೇ ದಿನ ಇಬ್ಬರು ನಟರ ಸಿನಿಮಾದ ಹಾಡುಗಳು ರಿಲೀಸ್ ಆಗುತ್ತಿವೆ ಎನ್ನುವುದು.

ಮಹೇಶ್ ಬಾಬು, ವಿಜಯ್ ಚಿತ್ರದ ಹಾಡು ಒಂದೇ ದಿನ ರಿಲೀಸ್!

ಮಹೇಶ್ ಬಾಬು, ವಿಜಯ್ ಚಿತ್ರದ ಹಾಡು ಒಂದೇ ದಿನ ರಿಲೀಸ್!

ಹೌದು ನಟ ಮಹೇಶ್ ಬಾಬು ಮತ್ತು ವಿಜಯ್ ಅಭಿನಯದ ಮುಂದಿನ ಚಿತ್ರದ ಹಾಡುಗಳು ಒಂದೇ ದಿನಕ್ಕೆ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿಕೊಂಡಿವೆ. ಮಹೇಶ್ ಬಾಬು ಅವರ ಸರ್ಕಾರು ವಾರಿ ಪಾಠ ಚಿತ್ರದ ಮೊದಲ ಹಾಡು ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ. ಅದೇ ದಿನ, ವಿಜಯ್ ಅವರ ಮುಂದಿನ ಚಿತ್ರ 'ಬೀಸ್ಟ್' ಮೊದಲ ಹಾಡು ಕೂಡ ಅಂದೆ ರಿಲೀಸ್ ಅಗುತ್ತಿದೆ. ಈ ವಿಚಾರವನ್ನು ಚಿತ್ರ ತಂಡಗಳು ಈಗಾಗಲೇ ಪ್ರಕಟ ಮಾಡಿವೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಅಭಿಮಾನಿಗಳು ಕಿತ್ತಾಟ ಶುರು ಮಾಡಿದ್ದಾರೆ.

ಬಾಯ್‌ಕಾಟ್ ಹ್ಯಾಶ್‌ಟ್ಯಾಗ್ ಬಳಸುತ್ತಿರುವ ನಟ ವಿಜಯ್ ಅಭಿಮಾನಿಗಳು!

ಬಾಯ್‌ಕಾಟ್ ಹ್ಯಾಶ್‌ಟ್ಯಾಗ್ ಬಳಸುತ್ತಿರುವ ನಟ ವಿಜಯ್ ಅಭಿಮಾನಿಗಳು!

ಇಲ್ಲಿ ಒಂದೇ ದಿನ ಎರಡೂ ಚಿತ್ರದ ಹಾಡುಗಳು ರಿಲೀಸ್ ಆಗುತ್ತವೆ ಎನ್ನುವುದು ಮುಖ್ಯ ಕಾರಣ ಅಲ್ಲ. ಬದಲಿಗೆ ಎರಡು ಹಾಡುಗಳಲ್ಲಿ ಯಾವುದು ಹೆಚ್ಚು ಲೈಕ್ಸ್ ಪಡೆದು ಟ್ರೆಂಡ್ ಸೃಷ್ಟಿ ಮಾಡುತ್ತದೆ ಎನ್ನುವುದು. ಹಾಗಾಗಿಯೇ ನಟ ವಿಜಯ್ ಅಭಿಮಾನಿಗಳು ಈಗ ಬಾಯ್‌ಕಾಟ್ ಟ್ಯಾಗ್ ಬಳಸುತ್ತಿದ್ದಾರೆ ಎಂದು ಮಹೇಶ್‌ ಬಾಬು ಬಾಬು ಅಭಿಮಾನಿಗಳು ಆರೋಪ ಮಾಡಿದ್ದಾರೆ. ಹಾಗಾಗಿ ಇಲ್ಲಿಂದಲೇ ಇಬ್ಬರು ಅಭಿಮಾನಿಗಳ ನಡುವೆ ಟ್ವಿಟ್ಟರ್ ವಾರ್ ಶುರುವಾಗಿದೆ.

ಎರಡೂ ಚಿತ್ರದ ಮೇಲೆ ಹೆಚ್ಚಿರುವ ನಿರೀಕ್ಷೆ!

ಎರಡೂ ಚಿತ್ರದ ಮೇಲೆ ಹೆಚ್ಚಿರುವ ನಿರೀಕ್ಷೆ!

ಎರಡು ಚಿತ್ರದ ಹಾಡುಗಳ ಮೇಲೆ ನಿರೀಕ್ಷೆ ಹೆಚ್ಚಾಗಿ ಇದೆ. ಸಿನಿಮಾದ ಮೇಲು ನಿರೀಕ್ಷೆ ಇದ್ದೇ ಇದೆ. ಆದರೆ ಅಭಿಮಾನಿಗಳು ಹಾಡುಗಳನ್ನು ನೋಡಿ ಎಂಜಾಯ್ ಮಾಡುವ ಬದಲು, ಜಗಳ ಆರಂಭಿಸಿದ್ದಾರೆ. ಈ ಹಿಂದೆ ಹಲವು ಬಾರಿ ಇಬ್ಬರು ನಟರು ಕೂಡ ಹಲವು ಬಾರಿ ಜಗಳ ಮಾಡದಂತೆ, ಫ್ಯಾನ್ ವಾರ್ ನಿಲ್ಲಿಸಲು ಸಂದೇಶ ಕೊಟ್ಟಿದ್ದಾರೆ. ಅದರೆ ಅದರಿಂದ ಪ್ರಯೋಜನ ಆಗಿಲ್ಲ. ಅಭಿಮಾನಿಗಳು ಇಂಥ ವಿಚಾರಕ್ಕೂ ಜಗಳಕ್ಕಿಯುತ್ತಾರಲ್ಲ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Mahesh Babu And Vijay Fan War Start For Silly Reason Here Is The Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X