For Quick Alerts
  ALLOW NOTIFICATIONS  
  For Daily Alerts

  ಹೃದಯ ಗೆಲ್ಲುತ್ತಿದೆ ಮಹೇಶ್ ಬಾಬು ಮಾಡಿದ ಈ ಕಾರ್ಯ

  |

  ತೆಲುಗು ಸಿನಿಮಾ ಇಂಡಸ್ಟ್ರಿಯ ನಟ ಮಹೇಶ್ ಬಾಬು ತಮ್ಮ ಅಂದದಿಂದ ಮಾತ್ರವಲ್ಲ ತಮ್ಮ ಒಳ್ಳೆ ತನದಿಂದಲೂ ಉದ್ಯಮದಲ್ಲಿ ಸಾಕಷ್ಟು ಖ್ಯಾತರು.

  BIGG BOSS‌ ನಿರೂಪಣೆಗೆ ಸಲ್ಮಾನ್ ಬೇಡಿಕೆ ಇರಿಸಿರುವ ಸಂಭಾವನೆ ಇಷ್ಟೊಂದಾ? | Filmibeat kannada

  ಈ ಸುರಸುಂದರ ನಟ ಇತ್ತೀಚೆಗೆ ಮಾಡಿರುವ ಕಾರ್ಯ ಸಾಕಷ್ಟು ಸುದ್ದಿ ಮಾಡುತ್ತಿದೆ. ಅಷ್ಟೆ ಅಲ್ಲ ಮಹೇಶ್ ಬಾಬು ಮೇಲಿದ್ದ ಗೌರವವನ್ನು ಇನ್ನಷ್ಟು ಹೆಚ್ಚು ಮಾಡಿದೆ.

  ಮಹೇಶ್ ಬಾಬು ಮೇಲೆ ಪ್ರೀತಿ ಮೊಳೆತ ಸಂದರ್ಭ ವರ್ಣಿಸಿದ ನಮ್ರತಾಮಹೇಶ್ ಬಾಬು ಮೇಲೆ ಪ್ರೀತಿ ಮೊಳೆತ ಸಂದರ್ಭ ವರ್ಣಿಸಿದ ನಮ್ರತಾ

  ಒಂದು ದಿನದ ಹಿಂದೆ ಮಹೇಶ್ ಬಾಬು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ತಮ್ಮ ಮೇಕಪ್‌ ಅಪ್ ಮ್ಯಾನ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಮಹೇಶ್ ಬಾಬು ಈ ಪೋಸ್ಟ್ ಅನ್ನು ಹಾಕಿದ್ದಾರೆ. ಇದು ವೈರಲ್ ಆಗಿದೆ.

  ಮಹೇಶ್ ಬಾಬು ಪ್ರಸಾದನ ಕಲಾವಿದರ ಹೆಸರು ಪಟ್ಟಾಭಿ

  ಮಹೇಶ್ ಬಾಬು ಪ್ರಸಾದನ ಕಲಾವಿದರ ಹೆಸರು ಪಟ್ಟಾಭಿ

  ಮಹೇಶ್ ಬಾಬು ಪ್ರಸಾದನ ಕಲಾವಿದರ ಹೆಸರು ಪಟ್ಟಾಭಿ ಎಂದು. ಜುಲೈ 8 ರಂದು ಅವರ ಹುಟ್ಟುಹಬ್ಬ. ಪಟ್ಟಾಭಿ ಅವರೊಂದಿಗೆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಹೇಶ್ ಪಟ್ಟಾಭಿಯನ್ನು ಹೊಗಳಿ ವಿಶ್ ಮಾಡಿದ್ದಾರೆ.

  ಎಲ್ಲದಕ್ಕೂ ತಯಾರಾಗಿರುತ್ತಾರೆ ಪಟ್ಟಾಭಿ: ಮಹೇಶ್

  ಎಲ್ಲದಕ್ಕೂ ತಯಾರಾಗಿರುತ್ತಾರೆ ಪಟ್ಟಾಭಿ: ಮಹೇಶ್

  ಉದ್ದನೆಯ ಚಿತ್ರೀಕರಣದ ಅವಧಿ ಇರಲಿ ಅಥವಾ ಕೊನೆಯ ಕ್ಷಣದ ಮೇಕಪ್‌ ಅಪ್ ಟಚಪ್‌ ಇರಲಿ ಪಟ್ಟಾಭಿ ಎಲ್ಲದಕ್ಕೂ ತಯಾರಿರುತ್ತಾರೆ. ನಿಮಗೆ ದೇವರ ಆಶೀರ್ವಾದ ಇರಲಿ, ಜೀವನ ಸಂತೋಷದಾಯಕವಾಗಿರಲಿ ಎಂದು ಮಹೇಶ್ ಬಾಬು ವಿಶ್ ಮಾಡಿದ್ದಾರೆ.

  ಮಹೇಶ್ ಬಾಬು ಮತ್ತು ರಾಜಮೌಳಿ ಅಭಿಮಾನಿಗಳಿಗೆ ಬೇಸರದ ಸುದ್ದಿಮಹೇಶ್ ಬಾಬು ಮತ್ತು ರಾಜಮೌಳಿ ಅಭಿಮಾನಿಗಳಿಗೆ ಬೇಸರದ ಸುದ್ದಿ

  ಮಹೇಶ್ ಬಾಬು ಪತ್ನಿಯಿಂದಲೂ ಶುಭಾಶಯ

  ಮಹೇಶ್ ಬಾಬು ಪತ್ನಿಯಿಂದಲೂ ಶುಭಾಶಯ

  ಮಹೇಶ್ ಬಾಬು ಅವರ ಇನ್‌ಸ್ಟಾಗ್ರಾಂ ಪೋಸ್ಟ್ ಗೆ ಕಮೆಂಟ್‌ ಮಾಡಿರುವ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್, 'ಹುಟ್ಟುಹಬ್ಬದ ಶುಭಾಶಯ ಪಟ್ಟಾಭಿ ಅವರೇ, ಈಗಲೂ ಯಾವಾಗಲೂ ನಮ್ಮ ಹಾರೈಕೆ ನಿಮ್ಮೊಂದಿಗೆ ಇರುತ್ತದೆ' ಎಂದು ಹೇಳಿದ್ದಾರೆ.

  ಸರ್ಕಾರು ವಾರಿ ಪಾಠ ಸಿನಿಮಾ

  ಸರ್ಕಾರು ವಾರಿ ಪಾಠ ಸಿನಿಮಾ

  ಮಹೇಶ್ ಬಾಬು ಅವರು 'ಸರ್ಕಾರು ವಾರಿ ಪಾಠ' ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. ಗೋವಾ, ಆಂಧ್ರಪ್ರದೇಶಗಳಲ್ಲಿ ಸಿನಿಮಾ ಚಿತ್ರೀಕರಣ ಆಗಲಿದೆ. ಸಿನಿಮಾವನ್ನು ಪರಶುರಾಮ್ ನಿರ್ದೇಶಿಸಲಿದ್ದಾರೆ.

  ಮಹೇಶ್ ಬಾಬು ಪತ್ನಿ ನಮ್ರತಾ ಹಾಕಿಸಿಕೊಂಡಿರುವ ಟ್ಯಾಟೂ ವಿಷಯ ಬಹಿರಂಗಮಹೇಶ್ ಬಾಬು ಪತ್ನಿ ನಮ್ರತಾ ಹಾಕಿಸಿಕೊಂಡಿರುವ ಟ್ಯಾಟೂ ವಿಷಯ ಬಹಿರಂಗ

  English summary
  Mahesh Babu wrote birthday wish to his make up man on Instagram. His make up artist Pattabi's birthday on July 08.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X