ಪ್ರೀತಿಯ ತಂದೆ ಕೃಷ್ಣ ಹುಟ್ಟುಹಬ್ಬಕ್ಕೆ ಮಹೇಶ್ ಬಾಬು ಹೃದಯಸ್ಪರ್ಶಿ ಸಂದೇಶ

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ತಂದೆ, ಟಾಲಿವುಡ್ ನ ಎವರ್ ಗ್ರೀನ್ ಸೂಪರ್ ಸ್ಟಾರ್ ಶಿವ ರಾಮ ಕೃಷ್ಣ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 77ನೇ ವರ್ಷದ ಹುಟ್ಟುಹಬ್ಬ ಆಚರಿಸಕೊಳ್ಳುತ್ತಿರುವ ಕೃಷ್ಣ ಅವರಿಗೆ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಹಾರೈಸುತ್ತಿದ್ದಾರೆ.

Recommended Video

ಲವ್ ಮಾಕ್‍ಟೇಲ್-2 ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ ಡಾರ್ಲಿಂಗ್ ಕೃಷ್ಣ | Darling Krishna |FILMIBEAT KANNADA

ಟಾಲಿವುಡ್ ಸ್ಟಾರ್ ನಟ ಮತ್ತು ನಿರ್ಮಾಪಕ ಕೃಷ್ಣ ಸುಮಾರು 350ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಲೆಜೆಂಡರಿ ಸ್ಟಾರ್ ಗೆ ಪುತ್ರ ಮಹೇಶ್ ಬಾಬು ಮತ್ತು ಪತ್ನಿ ನಮ್ರತಾ ಇಬ್ಬರು ಹೃದಯಸ್ಪರ್ಶಿ ಸಂದೇಶ ಕಳುಹಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಪ್ಪನಿಗೆ ಹುಟ್ಟುಹಬ್ಬದ ಶುಭಾಶಯತಿಳಿಸಿದ್ದಾರೆ. ಅಪ್ಪನ ಜೊತೆ ಇರುವ ಹಳೆಯ ಫೋಟೋವೊಂದನ್ನು ಶೇರ್ ಮಾಡಿ "ನಾನು ಪ್ರಯತ್ನಿಸುತ್ತಿದ್ದೀನಿ. ನಾನು ನಿಮಗೆ ಎಲ್ಲದಕ್ಕೂ ಋಣಿಯಾಗಿದ್ದೀನಿ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪ ನನ್ನ ಎವರ್ ಗ್ರೀನ್ ಸೂಪರ್ ಸ್ಟಾರ್" ಎಂದು ವಿಶ್ ಮಾಡಿದ್ದಾರೆ.

Mahesh Babu Birthday Wishes To His Father Krishna

ಇನ್ನೂ ಮಹೇಶ್ ಪತ್ನಿ ನಮ್ರತಾ ಕೂಡ ಮಾವನ ಹುಟ್ಟುಹಬ್ಬಕ್ಕೆ ಪ್ರೀತಿಯ ಸಂದೇಶ ಕಳುಹಿಸಿದ್ದಾರೆ. ಸೂಪರ್ ಸ್ಟಾರ್, ಐಕಾನ್, ಲೆಜೆಂಡ್ ಮತ್ತು ಲಕ್ಷಾಂತರ ಜನರ ಸ್ಫೂರ್ತಿ..ಎಲ್ಲರಿಗೂ. ಆದರೆ ನನಗೆ ಅವರೊಬ್ಬರು ಪ್ರೀತಿಯ ತಂದೆ. ಯಾರು ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಮಾತನಾಡುತ್ತಾರೊ. ಆಗ ನನಗೆ ಸಲಹೆ ಮತ್ತು ಪ್ರೀತಿ ತೋರಿಸಿ ನನ್ನ ಪರ ನಿಲ್ಲುವ ವ್ಯಕ್ತಿ. ಯಾವಾಗಲು ನನ್ನ ಪರ ಇರುವುದಕ್ಕೆ ನಾನು ಯಾವಾಗಲು ಕೃತಜ್ಞನಾಗಿದ್ದೇನೆ. ಹುಟ್ಟುಹಬ್ಬದ ಶುಭಾಶಗಳು ಮಾವಯ್ಯಗಾರು. ನಿಮ್ಮನ್ನು ಮಾವನಾಗಿ ಪಡೆಯಲು ನಾನು ನಿಜಕ್ಕು ಪುಣ್ಯ ಮಾಡಿದ್ದೀನಿ" ಎಂದು ಬರೆದುಕೊಂಡಿದ್ದಾರೆ.

Mahesh Babu Birthday Wishes To His Father Krishna

ಮಹೇಶ್ ಬಾಬು ಮಕ್ಕಳು ಸಹ ತಾತನಿಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. 2009ರಲ್ಲಿ ಭಾರತ ಸರ್ಕಾರ ಕೃಷ್ಣ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಅಪ್ಪನ ಹುಟ್ಟುಹಬ್ಬದ ಸಂಭ್ರಮದಲ್ಲಿಯೆ ಮಹೇಶ್ ಅಭಿನಯದ ಮುಂದಿನ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ರಿಲೀಸ್ ಮಾಡಲಾಗಿದೆ. ಚಿತ್ರಕ್ಕೆ ಸರ್ಕಾರ ವಾರಿ ಪಾಟ ಎಂದು ಟೈಟಲ್ ಇಡಲಾಗಿದೆ.

More from Filmibeat

English summary
Tollywood Actor Prince Mahesh Babu's father krishna celebrating his 77th birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X