twitter
    For Quick Alerts
    ALLOW NOTIFICATIONS  
    For Daily Alerts

    ಟಾಲಿವುಡ್ ಸೂಪರ್‌ಸ್ಟಾರ್ ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ: ಮಹೇಶ್ ಬಾಬು ಸಹೋದರ ನಿಧನ

    |

    ತೆಲುಗು ಚಿತ್ರರಂಗ ಮತ್ತೆ ಶೋಕ ಸಾಗರದಲ್ಲಿ ಮುಳುಗಿದೆ. ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಸಹೋದರ ರಮೇಶ್ ಬಾಬು ದಿಢೀರನೇ ನಿಧನರಾಗಿದ್ದಾರೆ. ತೆಲುಗಿನ ಲೆಜೆಂಡ್ ಕೃಷ್ಣ ಅವರ ಮೊದಲ ಮಗ ರಮೇಶ್ ಬಾಬು. ಈ ಸುದ್ದಿ ತಿಳಿಯುತ್ತಿದ್ದಂತೆ ಮಹೇಶ್ ಬಾಬು ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಪ್ರಿನ್ಸ್ ಕುಟುಂಬದಲ್ಲಿ ಏನಾಗುತ್ತಿದೆ ಅನ್ನುವುದು ಗೊತ್ತಾಗದೆ ಪರದಾಡುತ್ತಿದ್ದಾರೆ.

    ರಮೇಶ್ ಬಾಬು ಬಾಲ್ಯದಿಂದಲೇ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದರು. ಆದರೆ, ನಾಯಕನಾಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಅದರಲ್ಲೂ ಯಶಸ್ಸು ಕೂಡ ಕಂಡಿದ್ದರು. ಆದರೆ, ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಮೇಶ್ ಬಾಬು, ನಿನ್ನೆ(ಜನವರಿ 8) ರಾತ್ರಿ ದಿಢೀರನೇ ಕೊನೆಯುಸಿರಳೆದಿದ್ದಾರೆ.

    ಪ್ರಿನ್ಸ್ ಸಹೋದರ ರಮೇಶ್ ಬಾಬು ನಿಧನ

    ಪ್ರಿನ್ಸ್ ಸಹೋದರ ರಮೇಶ್ ಬಾಬು ನಿಧನ

    ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಸಹೋದರ ರಮೇಶ್ ಬಾಬು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ರಮೇಶ್ ಬಾಬು ದೀರ್ಘಕಾಲದಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ನಿನ್ನೆ (ಜನವರಿ 08) ರಮೇಶ್ ಆರೋಗ್ಯದಲ್ಲಿ ತೀರಾ ಏರು-ಪೇರಾಗಿತ್ತು. ತಕ್ಷಣವೇ ಅವರನ್ನು ಗಚ್ಚಿಬೌಲಿಯ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟಮಾಲಜಿ (AIG) ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆ ತಲುಪುವ ಮುನ್ನವೇ ರಮೇಶ್ ನಿಧನರಾಗಿದ್ದರು ಎಂದು ಆಸ್ಪತ್ರೆ ವೈದ್ಯರು ಕುಟುಂಬಕ್ಕೆ ತಿಳಿಸಿದ್ದವು.

    ಮಹೇಶ್ ಬಾಬುಗೆ ಕೊರೊನಾ

    ಮಹೇಶ್ ಬಾಬುಗೆ ಕೊರೊನಾ

    ಇನ್ನೊಂದು ಕಡೆ ಮಹೇಶ್ ಬಾಬುಗೆ ಕೊರೊನಾ ಸೋಂಕು ತಗುಲಿದೆ. ಇತ್ತೀಚೆಗೆ ದುಬೈಗೆ ಪಯಣ ಬೆಳೆಸಿದ್ದ ಮಹೇಶ್ ಬಾಬುಗೆ ಹಿಂತಿರುಗುತ್ತಿದ್ದಂತೆ ಸೋಂಕು ತಗುಲಿತ್ತು. ಹೀಗಾಗಿ ಟಾಲಿವುಡ್ ಸೂಪರ್‌ಸ್ಟಾರ್ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮಹೇಶ್ ಬಾಬು ಕುಟುಂಬಕ್ಕೆ ಏನಾಗುತ್ತಿದೆ ಎಂಬುವುದು ಪ್ರಿನ್ಸ್ ಫ್ಯಾನ್ಸ್‌ಗೆ ತಿಳಿಯುತ್ತಿಲ್ಲ. ಇದರಿಂದ ಸಹಜವಾಗಿಯೇ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದಾರೆ.

    ಪ್ರಿನ್ಸ್ ಸಿನಿಮಾ ನಿರ್ಮಿಸಿದ್ದ ರಮೇಶ್ ಬಾಬು

    ಪ್ರಿನ್ಸ್ ಸಿನಿಮಾ ನಿರ್ಮಿಸಿದ್ದ ರಮೇಶ್ ಬಾಬು

    ನಟನೆಯಲ್ಲಿ ಗೆಲ್ಲದೆ ಹೋದರೂ ಸಿನಿಮಾ ನಿರ್ಮಾಣದಲ್ಲಿ ಗೆದ್ದಿದ್ದರು. ರಮೇಶ್ ಬಾಬು ಸಹೋದರ ಮಹೇಶ್ ಬಾಬು ನಟನೆಯಲ್ಲಿ ಸಿನಿಮಾಗಳನ್ನು ನಿರ್ಮಿಸಿದ್ದರು. 'ಅರ್ಜುನ್' ಹಾಗೂ 'ಅತಿಥಿ' ಸೇರಿದಂತೆ 'ದೂಕುಡು' ಹಾಗೂ 'ಆಗಡು' ಚಿತ್ರಗಳಿಗೆ ಸಹ ನಿರ್ಮಾಣ ಮಾಡಿದ್ದರು. ಇಷ್ಟೇ ಅಲ್ಲದೆ, ಬಾಲಿವುಡ್‌ನ ಸಿನಿಮಾಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. 2004ರಿಂದ ರಮೇಶ್ ಬಾಬು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು.

    ನಟನಾಗಿ ರಮೇಶ್‌ ಬಾಬುಗೆ ಸೋಲು

    ನಟನಾಗಿ ರಮೇಶ್‌ ಬಾಬುಗೆ ಸೋಲು

    ರಮೇಶ್ ಬಾಬು ಸಹೋದರ ಮಹೇಶ್ ಬಾಬು ಜೊತೆ ತೆರೆ ಮೇಲೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಮೇಶ್ ಬಾಬು 1977ರಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು. 'ಮನುಷುಲು ಚೇಸಿನಾ ದೊಂಗಲು' ಮೊದಲ ಸಿನಿಮಾ ಆಗಿತ್ತು. ರಮೇಶ್ ಬಾಬು ಸುಮಾರು 17 ಸಿನಿಮಾಗಳಲ್ಲಿ ನಟಿಸಿದ್ದರು. ಚಿನ್ನಿ ಕೃಷ್ಣುಡು, ಬಜಾರ್ ರೌಡಿ, ಕೃಷ್ಣ ಗಾರಿ ಅಬ್ಬಾಯಿ ಅಂತಹ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ರಮೇಶ ಬಾಬುಗೆ ನಟನೆ ಕೈ ಹಿಡಿಯಲಿಲ್ಲ. ಹೀಗಾಗಿ ಸಿನಿಮಾ ನಿರ್ಮಾಣದ ಕಡೆ ಕೈ ಹಾಕಿದ್ದರು. ಅವರಿಗೆ ಸಿನಿಮಾ ನಿರ್ಮಾಣದಲ್ಲಿ ಯಶಸ್ಸು ಸಿಕ್ಕಿತ್ತು. ರಮೇಶ್ ಬಾಬು ನಿಧನದಿಂದ ಟಾಲಿವುಡ್‌ನಲ್ಲಿ ಮತ್ತೊಂದು ಕೊಂಡಿ ಕಳಸಿಕೊಂಡಿದ್ದು, ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ.

    English summary
    Telugu Superstar Mahesh babu brother producer Ramesh Babu passed away at the age of 56. Mahesh Babu got corona and his brother died for liver problem fans worried.
    Monday, January 10, 2022, 10:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X