For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ ಕಿಂತ ದುಬಾರಿ ಬೆಲೆಯ ಕ್ಯಾರವಾನ್ ಖರೀದಿಸಿದ ನಟ ಮಹೇಶ್ ಬಾಬು

  |

  ತೆಲುಗಿನಲ್ಲಿ ಅತೀ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಸ್ಟಾರ್ ಕಲಾವಿದರಲ್ಲಿ ಮಹೇಶ್ ಬಾಬು ಕೂಡ ಒಬ್ಬರು. ವರ್ಷಕ್ಕೊಂದು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುವ ಮಹೇಶ್ ಬಾಬು ಸದ್ಯ ಸರ್ಕಾರು ವಾರಿ ಪಾಠ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  ಸದಾ ಸಿನಿಮಾ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿರುವ ನಟ ಮಹೇಶ್ ಬಾಬು ಸದ್ಯ ಕ್ಯಾರವಾನ್ ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ. ಟಾಲಿವುಡ್ ಪ್ರಿನ್ಸ್ ಇತ್ತೀಚಿಗೆ ಖರೀದಿಸಿರುವ ದುಬಾರಿ ಬೆಲೆಯ ಕ್ಯಾರವಾನ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.

  ಮತ್ತೆ ಮಹೇಶ್ ಬಾಬುಗೆ ಜೋಡಿಯಾದ ತಮನ್ನಾ: ಆದರೆ ಸಿನಿಮಾಗಾಗಿ ಅಲ್ಲ

  ಮಹೇಶ್ ಬಾಬು ಖರೀದಿಸಿರುವ ಕ್ಯಾರವಾನ್ ಬೆಲೆ ಬರೋಬ್ಬರಿ 8 ಕೋಟಿ ರೂ. ಕಲಾವಿದರು ಬಳಸುತ್ತಿರುವ ಕ್ಯಾರವಾನ್ ನಲ್ಲೇ ಇದು ಅತ್ಯಂತ ದುಬಾರಿ ಬೆಲೆಯ ಕ್ಯಾರವಾನ್ ಆಗಿದೆ. ಅಂದಹಾಗೆ ಈ ಮೊದಲು ನಟ ಅಲ್ಲು ಅರ್ಜುನ್ ಅತೀ ದುಬಾರಿ ಬೆಲೆಯ ಕ್ಯಾರವಾನ್ ಖರೀದಿಸಿ ಸುದ್ದಿಯಾಗಿದ್ದರು. ಅಲ್ಲು ಅರ್ಜುನ್ ಬಳಿ ಇರುವ ಕ್ಯಾರವಾನ್ ಬೆಲೆ 7 ಕೋಟಿ ರೂ.

  ಅಲ್ಲು ಅರ್ಜುನ್ ಕ್ಯಾರವಾನ್ ಎಲ್ಲಾ ರೀತಿಯ ವಿಶೇಷತೆಗಳನ್ನು ಹೊಂದಿದೆ ಮತ್ತು ನೋಡಲು ಅಷ್ಟೆ ಆಕರ್ಷಕವಾಗಿದೆ. ಅಲ್ಲು ಅರ್ಜುನ್ ಕ್ಯಾರವಾನ್ ತೆಲುಗು ಚಿತ್ರರಂಗಮಾತ್ರವಲ್ಲದೇ ಬಾಲಿವುಡ್ ಕಲಾವಿದರ ಗಮನ ಸೆಳೆದಿತ್ತು. ಇದೀಗ ಮಹೇಶ್ ಬಾಬು ಕ್ಯಾರವಾನ್ ಕೂಡ ಬೆಲೆ ಕೂಡ ಅಚ್ಚರಿ ಮೂಡಿಸುತ್ತಿದೆ.

  ಆಟೋದಲ್ಲಿ ಓಡಾಡುತ್ತಿರುವ ನಟ ಅಜಿತ್ ಸರಳತೆಗೆ ಅಭಿಮಾನಿಗಳು ಫಿದಾ | Filmibeat Kannada

  ಬಾಲಿವುಡ್ ಕಲಾವಿದರಿಗಿಂತ ದುಬಾರಿ ಬೆಲೆಯ ಕ್ಯಾರವಾನ್‌ಗಳನ್ನು ತೆಲುಗು ಕಲಾವಿದರು ಬಳಸುತ್ತಿದ್ದಾರೆ. ಅಲ್ಲು ಅರ್ಜುನ್, ಮಹೇಶ್ ಬಾಬು ಬಳಿಕ ಮತ್ಯಾವ ತೆಲುಗು ನಟ ದುಬಾರಿ ಬೆಲೆಯ ಕ್ಯಾರವಾನ್ ಖರೀದಿಸುತ್ತಾರೆ ಎನ್ನುವುದು ಅಭಿಮಾನಿಗಳ ಕುತೂಹಲ.

  English summary
  Telugu Superstar Mahesh Babu buys new caravan cost around Rs 8 crores.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X