For Quick Alerts
  ALLOW NOTIFICATIONS  
  For Daily Alerts

  'ಲೇಡಿ ಬಾಸ್' ಹುಟ್ಟುಹಬ್ಬದ ಸಂಭ್ರಮದಲ್ಲಿ ಮಹೇಶ್ ಬಾಬು: ನಿನ್ನೊಂದಿಗೆ ಇರುವ ಪ್ರತಿಕ್ಷಣವು ವಿಶೇಷ ಎಂದ ಪ್ರಿನ್ಸ್

  |

  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಇಂದು (ಜನವರಿ 22) ಅವರ ಲೇಡಿ ಬಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಂದಹಾಗೆ ಮಹೇಶ್ ಬಾಬು ಅವರ ಲೇಡಿ ಬಾಸ್ ಮತ್ಯಾರು ಅಲ್ಲ ಪ್ರೀತಿಯ ಮಡದಿ ನಮ್ರತಾ ಶಿರೋಡ್ಕರ್. ಹೌದು, ಇಂದು ನಟಿ ಮತ್ತು ಮಹೇಶ್ ಬಾಬು ಪತ್ನಿ ನಮ್ರತಾ ಅವರ ಹುಟ್ಟುಹಬ್ಬ. ಈ ವಿಶೇಷ ದಿನವನ್ನು ವಿಶೇಷವಾಗಿ ಆಚರಣೆ ಮಾಡಲು ಮಹೇಶ್ ಬಾಬು ದಂಪತಿ ಇಬ್ಬರು ಮುದ್ದಿನ ಮಕ್ಕಳೊಂದಿಗೆ ವಿದೇಶ ಪಯಣ ಬೆಳೆಸಿದ್ದಾರೆ.

  ಮಹೇಶ್ ಬಾಬು ಕುಟುಂಬ ಸದ್ಯ ದುಬೈನಲ್ಲಿ ಬೀಡು ಬಿಟ್ಟಿದೆ. ಅಂದಹಾಗೆ ಮಹೇಶ್ ದಂಪತಿ ಆಗಾಗ ದುಬೈ ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ರಜಾ ದಿನಗಳನ್ನು ಹೆಚ್ಚಾಗಿ ದುಬೈನಲ್ಲಿ ಕಳೆಯುತ್ತಾರೆ. ಇದೀಗ ಪತ್ನಿಯ ಹುಟ್ಟುಹಬ್ಬ ಆಚರಿಸಲು ಸಹ ಮಹೇಶ್ ಬಾಬು ಆಯ್ದು ಕೊಂಡ ಸ್ಥಳ ದುಬೈ. ಮುಂದೆ ಓದಿ.

  ಪತ್ನಿಗೆ ಮಹೇಶ್ ಬಾಬು ವಿಶ್ ಮಾಡಿದ್ದು ಹೀಗೆ

  ಪತ್ನಿಗೆ ಮಹೇಶ್ ಬಾಬು ವಿಶ್ ಮಾಡಿದ್ದು ಹೀಗೆ

  ಕುಟುಂಬದ ಜೊತೆ ದುಬೈನಲ್ಲಿ ಜನ್ಮದಿನ ಆಚರಣೆ ಮಾಡಿ, ಮಡದಿ ಬಗ್ಗೆ ಮಹೇಶ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಪ್ರೀತಿಯ ಸಾಲುಗಳನ್ನು ಬರೆದುಕೊಂಡಿದ್ದಾರೆ. 'ನಾನು ತುಂಬಾ ಪ್ರೀತಿಸುವ ವ್ಯಕ್ತಿ ಹುಟ್ಟಿದದಿನ. ನಿನ್ನೊಂದಿಗೆ ಇರುವ ಪ್ರತಿಕ್ಷಣ ವಿಶೇಷವಾಗಿರುತ್ತೆ, ಆದರೆ ಅವತ್ತು ಇನ್ನು ಸ್ವಲ್ಪ ಜಾಸ್ತಿ. ನನ್ನ ಜೀವನದ ಅದ್ಭುತ ಮಹಿಳೆಯ ಹುಟ್ಟುಹಬ್ಬದ ಆಚರಣೆ. ಜನ್ಮ ದಿನದ ಶುಭಾಶಯಗಳು ಲೇಡಿ ಬಾಸ್' ಎಂದು ಬರೆದುಕೊಂಡಿದ್ದಾರೆ.

  2005ರಲ್ಲಿ ನಮ್ರತಾ ಜೊತೆ ಹಸಮಣೆ ಏರಿದ ಮಹೇಶ್

  2005ರಲ್ಲಿ ನಮ್ರತಾ ಜೊತೆ ಹಸಮಣೆ ಏರಿದ ಮಹೇಶ್

  ಅಂದಹಾಗೆ ಮಹೇಶ್ ಬಾಬು ಮತ್ತು ನಮ್ರತಾ ಅವರದ್ದು ಪ್ರೇಮ ವಿವಾಹ. 2000ರಲ್ಲಿ ಸಿನಿಮಾ ಸೆಟ್ ನಲ್ಲಿ ಭೇಟಿಯಾದ ಮಹೇಶ್ ಬಾಬು ಮತ್ತು ನಮ್ರತಾ ಇಬ್ಬರು ಉತ್ತಮ ಸ್ನೇಹಿತರಾಗಿದ್ದರು. ನಂತರ ಇಬ್ಬರ ಸ್ನೇಹ ಪ್ರೀತಿಗೆ ತಿರುಗೆ 2005ರಲ್ಲಿ ಹಸೆಮಣೆ ಏರಿದ್ದಾರೆ. ಇಬ್ಬರು ಹಿಂದೂ ಸಂಪ್ರದಾಯದಂತೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಸುಂದರ ಜೋಡಿಗೆ ಇಬ್ಬರು ಮದ್ದಾದ ಮಕ್ಕಳು

  ಸುಂದರ ಜೋಡಿಗೆ ಇಬ್ಬರು ಮದ್ದಾದ ಮಕ್ಕಳು

  ಮಹೇಶ್ ಬಾಬು ಮತ್ತು ನಮ್ರತಾ ಇಬ್ಬರು ಸಂತೋಷದ ಜೀವನ ಸಾಗಿಸುತ್ತಿದ್ದಾರೆ. ಟಾಲಿವುಡ್ ನ ಮುದ್ದಾದ ದಂಪತಿಗೆ ಸಿತಾರಾ ಮತ್ತು ಗೌತಮ್ ಇಬ್ಬರು ಮಕ್ಕಳಿದ್ದಾರೆ. ಮದುವೆ ಬಳಿಕ ನಮ್ರತಾ ಸಿನಿಮಾದಿಂದ ದೂರ ಉಳಿದಿದ್ದರು ಸಹ ಪತಿ ಮಹೇಶ್ ಬಾಬು ಸಿನಿಮಾ ಜೀವನವನ್ನು ನಿಭಾಯಿಸಿಕೊಂಡು ಬರುತ್ತಿದ್ದಾರೆ.

  ಪ್ರಭಾಸ್ ಹೆಸರು ಹೇಳಿ ಭಾರಿ ಮೋಸ ಮಾಡಿದ ಖದೀಮರು | Filmibeat Kannada
  ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಮಹೇಶ್ ಬಾಬು

  ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಮಹೇಶ್ ಬಾಬು

  ಮಹೇಶ್ ಬಾಬು ಸದ್ಯ ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಗೆ ನಾಯಕಿಯಾಗಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಫಸ್ಟ್ ಲುಕ್ ರಿಲೀಸ್ ಆಗಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಮಹೇಶ್ ಬಾಬು ಕೊನೆಯದಾಗಿ ಸರಿಲೇರು ನಿಕೆವ್ವರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

  English summary
  Tollywood Actor Mahesh Babu celebrates his wife Namratha shirodkar's birthday in Dubai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X