ಅಬ್ಬಾ..! ಇಷ್ಟೊಂದು ಸಂಭಾವನೆ ಏರಿಸಿಕೊಂಡ್ರಾ ಪ್ರಿನ್ಸ್ ಮಹೇಶ್ ಬಾಬು?

ದಕ್ಷಿಣ ಭಾರತದ ಅನೇಕ ಸ್ಟಾರ್ ಕಲಾವಿದರು ಸಂಭಾವನೆಯನ್ನು ದುಪ್ಪಟ್ಟು ಏರಿಸಿಕೊಂಡಿದ್ದಾರೆ. ಕೊರೊನಾ ಕಾಲದಲ್ಲಿ ಚಿತ್ರರಂಗ ಸಂಕಷ್ಟದಲ್ಲಿದೆ ಎನ್ನುವ ಮಾತು ಒಂದೆಡೆ ಕೇಳಿಬರುತ್ತಿದ್ರೆ, ಮತ್ತೊಂದೆಡೆ ಸ್ಟಾರ್ ಕಲಾವಿದರ ಸಂಭಾವನೆ ಏರಿಕೆ ಸುದ್ದಿ ಕೂಡ ವೈರಲ್ ಆಗುತ್ತಿದೆ.

ಇತ್ತೀಚಿಗಷ್ಟೆ ತಮಿಳು ಸ್ಟಾರ್ ನಟ ಧನುಷ್ ತನ್ನ ಸಂಭಾವನೆಯನ್ನು ಬರೋಬ್ಬರಿ 50 ಕೋಟಿ ರೂ.ಗೆ ಏರಿಸಿ ಕೊಂಡರು ಎನ್ನುವ ಸುದ್ದಿ ಹರಿದಾಡಿತ್ತು. ಇದರ ಬೆನ್ನಲ್ಲೇ ಈಗ ಮಹೇಶ್ ಬಾಬು ಸಂಭಾವನೆ ಏರಿಕೆ ಸುದ್ದಿ ಕೂಡ ಸದ್ದು ಮಾಡುತ್ತಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ಮಹೇಶ್ ಬಾಬು ಮುಂದಿನ ಸಿನಿಮಾಗೆ ತನ್ನ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದ ಕೇಳಿಬರುತ್ತಿದೆ.

ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಮತ್ತೆ ಸಿನಿಮಾ ಮಾಡುತ್ತಿದ್ದು, 11 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ. ತ್ರಿವಿಕ್ರಮ್ ಸಿನಿಮಾದಲ್ಲಿ ನಟಿಸಲು ಮಹೇಶ್ ಬಾಬು ಬರೋಬ್ಬರಿ 55 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

Mahesh Babu Charges Rs 55 Cr Remuneration for his Next Movie with Trivikram Srinivas

ತ್ರಿವಿಕ್ರಮ್ ಮತ್ತು ಮಹೇಶ್ ಕಾಂಬಿನೇಷನ್ ನ 3ನೇ ಸಿನಿಮಾ ಇದಾಗಿದೆ. ಈಗಾಗಲೇ 'ಅತಡು' ಮತ್ತು 'ಖಲೇಜಾ' ಸಿನಿಮಾಗಳನ್ನು ನಿರ್ದೇಶ ಮಾಡಿದ್ದ ತ್ರಿವಿಕ್ರಮ್ ಮತ್ತೆ ಮಹೇಶ್ ಬಾಬುಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಇಬ್ಬರ ಕಾಂಬಿನೇಷನ್ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಅಂದಹಾಗೆ ಮಹೇಶ್ ಬಾಬು ಸದ್ಯ 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಕೊರೊನಾ ಕಾರಣದಿಂದ ಸದ್ಯ ಸ್ಥಗಿತಗೊಳಿಸಲಾಗಿದೆ. ಮತ್ತೆ ಚಿತ್ರೀಕರಣಕ್ಕೆ ಹೊರಡಲು ಸಿನಿಮಾತಂಡ ಸಿದ್ಧರಾಗಿದೆ. ಚಿತ್ರದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳುತ್ತಿದ್ದಾರೆ.

Recommended Video

ಅಪಘಾತ ಎಲ್ಲಿ ? ಯಾವಾಗ ? ಹೇಗಾಯ್ತು? | Filmibeat Kannada

More from Filmibeat

English summary
Mahesh Babu Charges Rs 55 Cr Remuneration for his Next Movie with Trivikram Srinivas.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X