ಕ್ರಿಸ್‌ಮಸ್ ಹಬ್ಬವನ್ನು ಸಾರ್ಥಕಗೊಳಿಸಿದ ಮಹೇಶ್ ಬಾಬು-ನಮ್ರತಾ ದಂಪತಿ
ಕ್ರಿಸ್‌ಮಸ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಕೆಲವು ಸಿನಿಮಾ ಕಲಾವಿದರು ಸಜ್ಜಾಗಿದ್ದಾರೆ. ಈಗಾಗಲೇ ಮನೆಯನ್ನು ಶೃಂಗಾರಗೊಳಿಸಿ, ಕ್ರಿಸ್‌ಮಸ್ ಸೆಲೆಬ್ರೆಟ್ ಮಾಡಲು ತಯಾರಿ ನಡೆಸಿದ್ದಾರೆ. ಆದ್ರೆ, ತೆಲುಗು ನಟ ಮಹೇಶ್ ಬಾಬು ಮತ್ತು ಪತ್ನಿ ನಮ್ರತಾ ದಂಪತಿ ಈ ವರ್ಷ ಕ್ರಿಸ್‌ಮಸ್ ಹಬ್ಬ ಬಹಳ ಅರ್ಥಪೂರ್ಣವಾಗಿಸಿಕೊಂಡಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸಣ್ಣ ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವ ಮೂಲಕ ಆ ಮಗುವಿಗೆ ಮರುಜನ್ಮ ನೀಡಿದ್ದಾರೆ. ಮಗುವಿಗೆ ಆಪರೇಷನ್ ಮಾಡಿರುವ ಬಗ್ಗೆ ಸ್ವತಃ ನಮ್ರತಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಆ ಕುಟುಂಬದ ಸಂತೋಷ ಬಯಸಿದ್ದಾರೆ. ಮುಂದೆ ಓದಿ...

ಆಸ್ಪತ್ರೆಯಿಂದ ಮಗು ಡಿಸ್ಚಾರ್ಜ್
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಉಮಾ ಎಂಬ ಪುಟ್ಟ ಮಗುವಿಗೆ ಮಹೇಶ್ ಬಾಬು ಮತ್ತು ನಮ್ರತಾ ದಂಪತಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದು, ಇಂದು ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ. ಆರೋಗ್ಯವಾಗಿ ಮಗು ಆಸ್ಪತ್ರೆಯಿಂದ ಮನೆಗೆ ಹಿಂತಿರುಗಿದ ಕುರಿತು ನಮ್ರತಾ ಸಂತಸ ಹಂಚಿಕೊಂಡಿದ್ದು, ''ಇದು ಕ್ರಿಸ್‌ಮಸ್ ಹಬ್ಬದ ಸಂತಸ ಹೆಚ್ಚಿಸಿದೆ. ಇದು ತುಂಬಾ ವಿಶೇಷ ಸಂದರ್ಭ'' ಎಂದು ಪೋಸ್ಟ್ ಮಾಡಿದ್ದಾರೆ.

ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡುವ ದಂಪತಿ
ಶಸ್ತ್ರ ಚಿಕಿತ್ಸೆ ಮಾಡಿಸಲು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮಹೇಶ್ ಬಾಬು ಮತ್ತು ನಮ್ರತಾ ದಂಪತಿ ಸಹಾಯ ಮಾಡಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಹಲವು ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಆಂಧ್ರ ಆಸ್ಪತ್ರೆ ಜೊತೆ ಟೈ ಅಪ್ ಆಗಿರುವ ಮಹೇಶ್ ಬಾಬು, ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ನರವು ನೀಡಿದ್ದಾರೆ.

ಕ್ರಿಸ್‌ಮಸ್‌ಗೆ ಗಿಫ್ಟ್ ನೀಡಿದ ಪವನ್ ಕಲ್ಯಾಣ್
ಕ್ರಿಸ್‌ಮಸ್ ಹಬ್ಬದ ವಿಶೇಷವಾಗಿ ಮಹೇಶ್ ಬಾಬು ದಂಪತಿಗೆ ಪವನ್ ಕಲ್ಯಾಣ್ ಮತ್ತು ಪತ್ನಿ anna lezhneva ಗ್ರೀಟಿಂಗ್ಸ್ ಉಡುಗೊರೆಯಾಗಿ ಕಳುಹಿಸಿ ಶುಭಕೋರಿದ್ದಾರೆ. ಪವನ್ ದಂಪತಿಯ ಈ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Recommended Video

ಸರ್ಕಾರಿ ವಾರು ಪಾಟ
ಅಂದ್ಹಾಗೆ, ಮಹೇಶ್ ಬಾಬು 'ಸರ್ಕಾರಿ ವಾರ ಪಾಟ' ಸಿನಿಮಾದ ಚಿತ್ರೀಕರಣ ಆರಂಭಿಸಬೇಕಿದೆ. ಮತ್ತೊಂದೆಡೆ ಪವರ್ ಸ್ಟಾರ್ ಪವನ್ ಕಲ್ಯಾಣ್ 'ವಕೀಲ್ ಸಾಬ್' ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಇದು ಹಿಂದಿಯ ಪಿಂಕ್ ಚಿತ್ರದ ರೀಮೇಕ್.


Click it and Unblock the Notifications











