For Quick Alerts
  ALLOW NOTIFICATIONS  
  For Daily Alerts

  ಮೊದಲ ಕೊರೊನಾ ಪರೀಕ್ಷೆಯ ಅನುಭವ ಬಿಚ್ಚಿಟ್ಟ ನಟ ಮಹೇಶ್ ಬಾಬು ಪುತ್ರಿ

  |

  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಕುಟುಂಬ ಇತ್ತೀಚಿಗಷ್ಟೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಮಹೇಶ್ ಬಾಬು, ಪತ್ನಿ ನಮ್ರತಾ ಮತ್ತು ಇಬ್ಬರು ಮಕ್ಕಳು ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

  ಮೊದಲ ಬಾರಿಗೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡ ಅನುಭವವನ್ನು ನಟ ಮಹೇಶ್ ಬಾಬು ಪುತ್ರಿ ಸಿತಾರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪರೀಕ್ಷೆ ವೇಳೆ ಭಯವಾಗಿತ್ತು, ಆದರೆ ಪಕ್ಕದಲ್ಲಿ ಅಮ್ಮನ ಕೊಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದೆ, ನನ್ನ ವಯಸ್ಸಿನ ಮಕ್ಕಳಿಗೆ ಹೇಳುವುದೇನೆಂದರೆ ಎಲ್ಲರೂ ಪರೀಕ್ಷೆಗೆ ಒಳಗಾಗಿ, ಸುರಕ್ಷಿತವಾಗಿರಿ ಎಂದು ಹೇಳಿದ್ದಾರೆ.

  ಮಹೇಶ್‌ ಬಾಬು ಅನ್ನು ಹೊಗಳಿದ ರಣ್ವೀರ್ ಸಿಂಗ್: ಒಟ್ಟಿಗೆ ನಟನೆ

  ಕೊರೊನಾ ಪರೀಕ್ಷೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 'ನನ್ನ ಮೊದಲ ಕೋವಿಡ್ ಪರೀಕ್ಷೆ. ನನ್ನ ವಯಸ್ಸಿನ ಎಲ್ಲಾ ಮಕ್ಕಳಿಗೆ ಸ್ವಲ್ಪ ಮಾಹಿತಿ. ಪರೀಕ್ಷೆ ಮಾಡುವ ಮೊದಲು ನಾನು ತುಂಬಾ ಹಿಂಜರಿಯುತ್ತಿದ್ದೆ. ಆದರೆ ನನ್ನ ಪಕ್ಕದಲ್ಲಿ ಅಮ್ಮ ಇದ್ದರು. ನನ್ನ ಕೈ ಗಟ್ಟಿಯಾಗಿ ಹಿಡಿದುಕೊಂಡಿದ್ದರು. ನೀವು ಸ್ನೇಹಿತರು ಮತ್ತು ಕುಟುಂಬವನ್ನು ಭೇಟಿಯಾಗುತ್ತಿರುತ್ತೀರಿ. ಹಾಗಾಗಿ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಸುರಿಕ್ಷತರಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನಾನು ಪರೀಕ್ಷೆ ಮಾಡಿಸಿಕೊಂಡೆ. ಸುರಕ್ಷಿತ ಸಮಾಜವನ್ನು ರೂಪಿಸೋಣ. ಹೊಸ ವರ್ಷದ ಶುಭಾಶಯಗಳು' ಎಂದಿದ್ದಾರೆ.

  ಮಹೇಶ್ ಬಾಬು ಪುತ್ರಿ ಸಿತಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಅಲ್ಲದೆ ತನ್ನದೆ ಆದ ಯೂಟ್ಯೂಬ್ ಚಾನೆಲ್ ಸಹ ಹೊಂದಿದ್ದಾರೆ. ಈ ಚಾನೆಲ್ ನಲ್ಲಿ ಸೆಲೆಬ್ರಿಟಿಗಳ ಸಂದರ್ಶನ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಪುಟ್ಟ ವಯಸ್ಸಿನಲ್ಲೇ ಇಷ್ಟು ಆಕ್ಟೀವ್ ಆಗಿರುವ ಸಿತಾರಾಗೆ ನೆಟ್ಟಿಗರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಹರಿದುಬರುತ್ತಿದೆ.

  ನಟ ಮಹೇಶ್ ಬಾಬು ಕೊನೆಯದಾಗಿ ಸರಿಲೇರು ನೀಕೆವ್ವರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಕೀರ್ತಿ ಮತ್ತು ಮಹೇಶ್ ಬಾಬು ಇಬ್ಬರು ತೆರೆಹಂಚಿಕೊಳ್ಳುತ್ತಿದ್ದು, ಇಬ್ಬರನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

  English summary
  Telugu actor Mahesh Babu Daughter Sitara shares experience of her first corona test.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X