For Quick Alerts
  ALLOW NOTIFICATIONS  
  For Daily Alerts

  ವಿಶ್ವದಾಖಲೆ ನಿರ್ಮಿಸಿದ ಮಹೇಶ್ ಬಾಬು ಅಭಿಮಾನಿಗಳು

  |

  ನಟ ಮಹೇಶ್ ಬಾಬು ಅಭಿಮಾನಿಗಳು ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಹೌದು, ಈ ವಿಶ್ವದಾಖಲೆಯು ಮಹೇಶ್ ಬಾಬು ಅವರ ಮುಂಬರಲಿರುವ ಸಿನಿಮಾ 'ಸರ್ಕಾರು ವಾರಿ ಪಾಟ' ಸಿನಿಮಾಕ್ಕೆ ಸಂಬಂಧಿಸಿದೆ.

  'ಸರ್ಕಾರು ವಾರಿ ಪಾಟ' ಸಿನಿಮಾದ ಚಿತ್ರೀಕರಣ ಇದೀಗ ದುಬೈ ನಲ್ಲಿ ಪ್ರಾರಂಭವಾಗಿದ್ದು. ಸಿನಿಮಾದ ಚಿತ್ರೀಕರಣ ಪ್ರಾರಂಭವಾದ ಬಗ್ಗೆ ಚಿತ್ರತಂಡವು 15 ಸೆಕೆಂಡ್‌ಗಳ ವಿಡಿಯೋ ಪ್ರಕಟಿಸುವ ಮೂಲಕ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿತ್ತು.

  ತಮ್ಮ ಮೆಚ್ಚಿನ ಹೀರೋ ಚಿತ್ರೀಕರಣ ಪ್ರಾರಂಭಿಸಿದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಹೇಶ್ ಅಭಿಮಾನಿಗಳು, #sarkaruvaaripaata ಹ್ಯಾಷ್‌ಟ್ಯಾಗ್ ಅನ್ನು ಸಖತ್ ಟ್ರೆಂಡ್ ಮಾಡಿದ್ದಾರೆ.

  ಕಡಿಮೆ ಅವಧಿಯಲ್ಲಿ #sarkaruvaaripaata ಹ್ಯಾಷ್‌ಟ್ಯಾಗ್ ಬಳಸಿ 10 ಕೋಟಿಗೂ ಹೆಚ್ಚು ಟ್ವೀಟ್ ಮಾಡಿದ್ದಾರೆ. ಒಂದು ಹ್ಯಾಷ್‌ಟ್ಯಾಗ್‌ನಲ್ಲಿ ಈವರೆಗೆ ಇಷ್ಟೋಂದು ಟ್ವೀಟ್ ಈ ಹಿಂದೆ ಎಂದೂ ಆಗಿಲ್ಲವಂತೆ.

  'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಮಹೇಶ್ ಬಾಬು ಜೊತೆಗೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಸಹ ನಟಿಸುತ್ತಿದ್ದಾರೆ. ಇದೊಂದು ರಾಜಕೀಯ ಹಿನ್ನೆಲೆಯ ಕತೆ ಉಳ್ಳ ಸಿನಿಮಾ ಎನ್ನಲಾಗುತ್ತಿದೆ.

  ಸ್ನೇಹಿತರ ಮಾತು ಕೇಳದೆ ಇದ್ದಿದ್ರೆ ಜಯಶ್ರೀ ಬದುಕಿರ್ತಾ ಇದ್ರು | Oneindia Kannada

  ಸಾಮಾಜಿಕ ಜಾಲತಾಣದಲ್ಲಿ ದಾಖಲೆಗಳನ್ನು ನಿರ್ಮಾಣ ಮಾಡುವ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೆ ಕೆಜಿಎಫ್ 2 ಟೀಸರ್ ಸಹ ವಿಶ್ವದಾಖಲೆ ಮಾಡಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ 150 ಮಿಲಿಯನ್‌ಗೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ.

  English summary
  actor Mahesh Babu fans create record by making more than 10 crore tweets about the movie Sarkaru Vaari Paata.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X