For Quick Alerts
  ALLOW NOTIFICATIONS  
  For Daily Alerts

  ವಿಜಯ್ ದೇವರಕೊಂಡಗೆ ಟ್ರೋಲ್ ಮಾಡಿದ ಮಹೇಶ್ ಬಾಬು ಫ್ಯಾನ್ಸ್

  |

  ತೆಲುಗು ಸ್ಟಾರ್ ಮಹೇಶ್ ಬಾಬು ಅವರು ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆಗಸ್ಟ್ 9ರಂದು ಪ್ರಿನ್ಸ್ ಬರ್ತಡೇಯನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಸೆಲೆಬ್ರೆಟ್ ಮಾಡಿದ್ದರು.

  Upendra ಕ್ರಿಕೆಟ್ ಆಗಿದ್ದು ಹೀಗೆ | I love you behind the scenes

  24 ಗಂಟೆಯಲ್ಲಿ #HBDMaheshBabu ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ 60.2 ಮಿಲಿಯನ್ ಸಲ ಟ್ವೀಟ್ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು. 45ನೇ ಜನುಮದಿನವನ್ನು ಆಚರಿಸಿಕೊಂಡ ಮಹೇಶ್ ಬಾಬುಗೆ ತೆಲುಗು ನಟ ವಿಜಯ್ ದೇವರಕೊಂಡ ವಿಶ್ ಮಾಡಿಲ್ಲ ಎಂಬ ಕಾರಣಕ್ಕೆ ಪ್ರಿನ್ಸ್ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.

  ಸಾರ್ವಜನಿಕ ಕಾರ್ಯಕ್ರಮಗಳಲ್ಲಿ 'ನಾನು ಮಹೇಶ್ ಬಾಬು ಫ್ಯಾನ್' ಎಂದು ಹೇಳಿಕೊಂಡಿದ್ದ ದೇವರಕೊಂಡ ಬರ್ತಡೇ ದಿನ ಅವರಿಗೆ ವಿಶ್ ಮಾಡಲೇ ಇಲ್ಲ ಎಂದು ಅಭಿಮಾನಿಗಳು ಕಾಲೆಳೆದಿದ್ದಾರೆ. ಮಹೇಶ್ ಬಾಬು ವಾರ ಬರ್ತಡೇಗೆ ಶುಭ ಕೋರಿಲ್ಲ, ಆದರೆ, ಹಿಂದಿ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ ಎಂದು ಪ್ರಿನ್ಸ್ ಅಭಿಮಾನಿಗಳು ಟೀಕಿಸಿದ್ದಾರೆ.

  ಸದ್ಯ, ಪೂರಿ ಜಗನ್ನಾಥ್ ನಿರ್ದೇಶನ ಮಾಡುತ್ತಿರುವ ಪ್ಯಾನ್ ಇಂಡಿಯಾ ಚಿತ್ರದಲ್ಲಿ ವಿಜಯ್ ದೇವರಕೊಂಡ ನಟಿಸುತ್ತಿದ್ದಾರೆ. ಪರಶುರಾಮ್ ನಿರ್ದೇಶನದ ಸರ್ಕಾರು ವಾರಿ ಪಾಟಾ ಚಿತ್ರದಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಲಿದ್ದಾರೆ. ಇದು ಬಿಗ್-ಬಜೆಟ್ ಚಿತ್ರ ಇದಾಗಿದ್ದು ಕೀರ್ತಿ ಸುರೇಶ್ ನಾಯಕಿಯಾಗಿದ್ದಾರೆ.

  English summary
  Telugu actor Mahesh babu fans has trolled Vijay devarakonda for not wishing birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X