For Quick Alerts
  ALLOW NOTIFICATIONS  
  For Daily Alerts

  ಸಮಂತಾ ಅಥವಾ ರಶ್ಮಿಕಾ ಇಬ್ಬರಲ್ಲಿ ಯಾರು ಬೆಸ್ಟ್?: ಮಹೇಶ್ ಬಾಬು ಆಯ್ಕೆ ಇದು

  By Avani Malnad
  |

  ತಂದೆ, ಖ್ಯಾತ ನಟ ಕೃಷ್ಣ ಅವರ ಜನ್ಮದಿನವಾದ ಭಾನುವಾರ ಇನ್‌ಸ್ಟಾಗ್ರಾಂನಲ್ಲಿ ನಟ ಮಹೇಶ್ ಬಾಬು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. 'ಆಸ್ಕ್ ಮಿ ಎನಿಥಿಂಗ್' ಸೆಷನ್ ಆಯೋಜಿಸಿದ್ದ ಆಕ್ಷನ್ ಪ್ರಿನ್ಸ್ ಅಭಿಮಾನಿಗಳ ಕುತೂಹಲ ತಣಿಸಿದರು.

  Hardik Pandya soon to be father , trolls and wishes rain over him | Hardik Pandya &Natasha Stankovic

  ತಮ್ಮ ನಟನೆಯ ಮುಂದಿನ ಚಿತ್ರ, ಪರಶುರಾಮ್ ನಿರ್ದೇಶನದ 'ಸರ್ಕಾರು ವಾರಿ ಪಾಟಾ'ದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಅವರು, ಸಿನಿಮಾರಂಗ, ತಂದೆ, ಲಾಕ್ ಡೌನ್ ಹಾಗೂ ಇತರೆ ಸಂಗತಿಗಳ ಬಗ್ಗೆ ಮಾತನಾಡಿದರು.

  ಪ್ರೀತಿಯ ತಂದೆ ಕೃಷ್ಣ ಹುಟ್ಟುಹಬ್ಬಕ್ಕೆ ಮಹೇಶ್ ಬಾಬು ಹೃದಯಸ್ಪರ್ಶಿ ಸಂದೇಶ

  'ಸರ್ಕಾರು ವಾರಿ ಪಾಟ' ಚಿತ್ರವು ಪರಿಪೂರ್ಣ ಮನರಂಜನಾ ಚಿತ್ರ. ಜತೆಗೆ ಗಟ್ಟಿಯಾದ ಸಂದೇಶ ಕೂಡ ಇರಲಿದೆ. ಈ ಚಿತ್ರದ ಬಗ್ಗೆ ಬಹಳ ಕಾತರನಾಗಿದ್ದೇನೆ ಎಂದು ಹೇಳಿದರು. ಮುಂದೆ ಓದಿ...

  ಈ ಅನುಭವ ಒಮ್ಮೆ ಮಾತ್ರ

  ಈ ಅನುಭವ ಒಮ್ಮೆ ಮಾತ್ರ

  ಮನೆಯವರೊಂದಿಗೆ ಲಾಕ್ ಡೌನ್ ಸಮಯ ಕಳೆದ ಅನುಭವವು ಜೀವನಕ್ಕೆ ಒಮ್ಮೆ ಮಾತ್ರ ಸಿಗುವಂಥಹದ್ದು ಎಂದು ಹೇಳಿದರು. ಅವರ ಜತೆಯಲ್ಲಿ ಅನೇಕ ಕೆಲಸಗಳನ್ನು ಮಾಡಿದೆ. ಇದನ್ನೆಲ್ಲ ಈ ಮೊದಲು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈಗ ಅದಕ್ಕೆಲ್ಲ ಸಮಯ ಸಿಕ್ಕಿತು ಎಂದರು.

  ಈ ಜೀವನ ಸಹಜ ಎನಿಸಲಿದೆ

  ಈ ಜೀವನ ಸಹಜ ಎನಿಸಲಿದೆ

  ಲಾಕ್ ಡೌನ್ ನಂತರದ ಬದುಕು ಬಹಳ ವಿಭಿನ್ನವಾಗಿರಲಿದೆ. ಸುರಕ್ಷಿತರಾಗಿರಿ, ಮಾಸ್ಕ್ ಧರಿಸಿ ಮತ್ತು ಎಚ್ಚರಿಕೆಯಿಂದಿರಿ. ಈ ಹೊಸ ಸನ್ನಿವೇಶವನ್ನು ಸಹಜ ಎಂಬಂತೆ ನಾವು ಒಪ್ಪಿಕೊಳ್ಳಬೇಕಾಗಿದೆ. ಹೀಗಾಗಿ ಸುರಕ್ಷಿತರಾಗಿರಿ ಎಂದು ಸಲಹೆ ನೀಡಿದರು.

  ಫೋಟೋ ವೈರಲ್: ರಾಜಮೌಳಿ 'ರಾಮಾಯಣ'ದಲ್ಲಿ ಮಹೇಶ್ ಬಾಬು ರಾಮ

  ಇಬ್ಬರೂ ಇಷ್ಟ

  ಇಬ್ಬರೂ ಇಷ್ಟ

  ರಶ್ಮಿಕಾ ಮಂದಣ್ಣ ಮತ್ತು ಸಮಂತಾ ಅಕ್ಕಿನೇನಿ ಇಬ್ಬರಲ್ಲಿ ನಿಮಗೆ ಯಾರು ಇಷ್ಟ ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದರು. ಅದಕ್ಕೆ ಮಹೇಶ್ ಬಾಬು, 'ನನಗೆ ಇಬ್ಬರೂ ಬಹಳ ಇಷ್ಟ. ಇಬ್ಬರೂ ವಿಸ್ಮಯ ಮೂಡಿಸುವ ಸಹ ನಟಿಯರು' ಎಂದು ಪ್ರತಿಕ್ರಿಯಿಸಿದರು.

  ರಾಜಮೌಳಿ ಜತೆ ಸಿನಿಮಾ

  ರಾಜಮೌಳಿ ಜತೆ ಸಿನಿಮಾ

  ಪುರಿ ಜಗನ್ನಾಥ್ ಜತೆ ಸಿನಿಮಾ ಮಾಡಲು ಕಾಯುತ್ತಿದ್ದೇನೆ. ನನ್ನ ಮೆಚ್ಚಿನ ನಿರ್ದೇಶಕರಲ್ಲಿ ಅವರೂ ಒಬ್ಬರು. ನನ್ನ ಬಳಿ ಬಂದು ಯಾವಾಗ ಕಥೆ ಹೇಳಿ ಸಿನಿಮಾ ಮಾಡುತ್ತಾರೋ ಎಂದು ಕಾದಿದ್ದೇನೆ. ರಾಜಮೌಳಿ ಅವರೊಂದಿಗೆ ಸಿನಿಮಾ ಮಾಡುವುದನ್ನು ಖಂಡಿತಾ ನೀವು ನಿರೀಕ್ಷಿಸಬಹುದು. ಆ ಗಳಿಗೆಯನ್ನೇ ನಾನು ಬಹಳ ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದರು.

  ಅಲ್ಲು ಅರ್ಜುನ್ ಹಾದಿ ಹಿಡಿದ ಮಹೇಶ್ ಬಾಬು: ಹೊಸ ಸಾಹಸಕ್ಕೆ ಕೈ ಹಾಕಿದ ಸೂಪರ್ ಸ್ಟಾರ್

  ಮಗ ಹೀರೋ ಆಗುತ್ತಾನಾ?

  ಮಗ ಹೀರೋ ಆಗುತ್ತಾನಾ?

  ಮಗ ಗೌತಮ್ ಭವಿಷ್ಯದಲ್ಲಿ ಹೀರೋ ಆಗುತ್ತಾನೆಯೇ? ಎಂಬ ಪ್ರಶ್ನೆಗೆ, ನನ್ನ ಊಹೆ ಪ್ರಕಾರ ಅವನು ಹೀರೋ ಆಗಲು ಬಯಸುತ್ತಾನೆ. ಕಾಲ ಮಾತ್ರವೇ ಅದಕ್ಕೆ ಉತ್ತರ ನೀಡಲಿದೆ ಎಂದರು. ನಾನು ಎಂದಿಗೂ ಮಹಾನ್ ನಟ, ನನ್ನ ಮಕ್ಕಳಿಗೆ ಅದ್ಭುತ ತಂದೆ ಹಾಗೂ ಹೆಂಡತಿಗೆ ಉತ್ತಮ ಗಂಡ ಎಂದು ಜನರು ನೆನಪಿಸಿಕೊಳ್ಳುವಂತೆ ಬಯಸಿದ್ದೇನೆ ಎಂದರು.

  ಕರ್ನಾಟಕದ ಫ್ಯಾನ್ಸ್ ಕೂಲ್

  ಕರ್ನಾಟಕದ ಫ್ಯಾನ್ಸ್ ಕೂಲ್

  ಕರ್ನಾಟಕದ ಅಭಿಮಾನಿಗಳು ಸೂಪರ್ ಕೂಲ್ ಎಂದ ಅವರು, ತಮಗೆ ನೀಲಿ ಬಣ್ಣ ಹಾಗೂ ಹೈದರಾಬಾದಿ ಬಿರಿಯಾನಿ ಎಂದರೆ ಬಹಳ ಇಷ್ಟ ಎಂದರು. ನಿಮ್ಮ ಮೊದಲ ಕ್ರಶ್ ಯಾರು ಎಂಬುದಕ್ಕೆ, 26ನೇ ವಯಸ್ಸಲ್ಲಿ ಆಗಿದ್ದು, ನಮ್ರತಾ ಶಿರೋಡ್ಕರ್ ಮೇಲೆ. ಬಳಿಕ ಆಕೆಯನ್ನೇ ಮದುವೆಯಾದೆ. ನನ್ನ ಬೆಸ್ಟ್ ಫ್ರೆಂಡ್ ಕೂಡ ಆಕೆಯೇ ಎಂದು ತಿಳಿಸಿದರು.

  English summary
  Telugu actor Mahesh Babu in an Ask Me Anything session on Instagram said, both Rashmika and Samantha are amazing co actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X