twitter
    For Quick Alerts
    ALLOW NOTIFICATIONS  
    For Daily Alerts

    ಆ ನಟ ನಿರಾಕರಿಸಿದ, ಸಿನಿಮಾ ಮಾಡಿ ಕೈ ಸುಟ್ಟುಕೊಂಡ ಮಹೇಶ್ ಬಾಬು

    |

    ಮಹೇಶ್ ಬಾಬು ಹಿಟ್ ಸಿನಿಮಾಗಳಷ್ಟೇ ಫ್ಲಾಪ್ ಚಿತ್ರಗಳು ಇವೆ. ಅದರಲ್ಲಿ ಬ್ರಹ್ಮೋತ್ಸವಂ ಚಿತ್ರವನ್ನು ಯಾರೂ ಮರೆಯಲ್ಲ. ಶ್ರೀಮಂತಡು ಚಿತ್ರದ ನಂತರ ಭಾರಿ ನಿರೀಕ್ಷೆಗಳೊಂದಿಗೆ ಸೆಟ್ಟೇರಿದ್ದ ಬ್ರಹ್ಮೋತ್ಸವಂ ಪ್ರಿನ್ಸ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಗಳಿಕೆ ಕಂಡಿಲ್ಲ. ನಿರ್ಮಾಪಕರು ಖುಷಿಯಾಗಿಲಿಲ್ಲ.

    ಈ ಚಿತ್ರ ತೆರೆಕಂಡು 5 ವರ್ಷ ಆಗಿದೆ. 2016ರ ಮೇ ತಿಂಗಳಲ್ಲಿ ಬ್ರಹ್ಮೋತ್ಸವಂ ರಿಲೀಸ್ ಆಗಿತ್ತು. ಅಂದ್ಹಾಗೆ, ಈ ಚಿತ್ರದ ಕಥೆ ಮಹೇಶ್ ಬಾಬುಗು ಮೊದಲು ಮತ್ತೊಬ್ಬ ಸ್ಟಾರ್ ಹೀರೋ ಬಳಿ ಹೋಗಿತ್ತು. ಆ ಹೀರೋ ಚಿತ್ರವನ್ನು ನಿರಾಕರಿಸಿದರು. ಆ ನಂತರವೇ ಭರವಸೆಯಿಂದ ಪ್ರಿನ್ಸ್ ಶುರು ಮಾಡಿದ್ದರು. ಮುಂದೆ ಓದಿ...

    ಪೂರ್ತಿ ಕಥೆ ಕೇಳಿರಲಿಲ್ಲ

    ಪೂರ್ತಿ ಕಥೆ ಕೇಳಿರಲಿಲ್ಲ

    ಶ್ರೀಕಾಂತ್ ಅಡ್ಡಾಲ ಬ್ರಹ್ಮೋತ್ಸವಂ ಸಿನಿಮಾ ನಿರ್ದೇಶಿಸಿದ್ದರು. ಮಹೇಶ್ ಬಾಬು ಬಳಿ ಸ್ಕ್ರಿಪ್ಟ್ ಹೇಳುವಾಗ ಪೂರ್ತಿ ಚಿತ್ರಕಥೆ ಆಗಿರಲಿಲ್ಲ. ಒನ್ ಲೈನ್ ಸ್ಟೋರಿಯೊಂದಿಗೆ ಪ್ರಿನ್ಸ್ ಭೇಟಿ ಮಾಡಿದ್ದರು. ಈ ವೇಳೆ ಚಿತ್ರದಲ್ಲಿ ಭಾವನಾತ್ಮಕ ಅಂಶಗಳ ಮೇಳೆ ಹೆಚ್ಚು ಫೋಕಸ್ ಮಾಡಲಾಗುತ್ತದೆ ಎಂದು ವಿವರಿಸಿದರು. ಅದಕ್ಕೂ ಮುಂಚೆ ಶ್ರೀಕಾಂತ್ ಅಡ್ಡಾಲ 'ಸೀತಮ್ಮ ವಾಕಿಟ್ಲು ಸಿರೆಮಲ್ಲು ಚೆಟ್ಟು' ಸಿನಿಮಾ ಚೆನ್ನಾಗಿ ಮಾಡಿದ್ದರು ಎಂಬ ನಂಬಿಕೆಯಿಂದ ಮಹೇಶ್ ಬಾಬು ಕಾಲ್‌ಶೀಟ್ ಕೊಟ್ಟರು.

    'ಅಲ್ಲು ಅರ್ಜುನ್ ಚಿತ್ರಕ್ಕೆ 80% ನಷ್ಟ, ಮಹೇಶ್ ಬಾಬು ಒಬ್ಬರೇ ದುಡ್ಡು ಹಿಂತಿರುಗಿಸಿದ್ದು''ಅಲ್ಲು ಅರ್ಜುನ್ ಚಿತ್ರಕ್ಕೆ 80% ನಷ್ಟ, ಮಹೇಶ್ ಬಾಬು ಒಬ್ಬರೇ ದುಡ್ಡು ಹಿಂತಿರುಗಿಸಿದ್ದು'

    ಎನ್‌ಟಿಆರ್ ಮಾಡಬೇಕಿತ್ತು

    ಎನ್‌ಟಿಆರ್ ಮಾಡಬೇಕಿತ್ತು

    ಶ್ರೀಕಾಂತ್ ಅಡ್ಡಾಲ ಬ್ರಹ್ಮೋತ್ಸವಂ ಸಿನಿಮಾವನ್ನು ಮೊದಲು ಎನ್‌ ಟಿ ಆರ್ ಜೊತೆ ಮಾಡಲು ನಿರ್ಧರಿಸಿದ್ದರು. ಆದರೆ, ಕಥೆ ಕೇಳಿದ ಯಂಗ್ ಟೈಗರ್ ಪೂರ್ತಿ ಸ್ಕ್ರಿಪ್ಟ್ ಮಾಡಿದ್ಮೇಲೆ ಹೇಳಿ ಅಂದ್ರು. ಆದರೆ, ಶ್ರೀಕಾಂತ್ ಎನ್‌ಟಿಆರ್ ಬಿಟ್ಟು ಮಹೇಶ್ ಬಾಬು ಕಡೆ ಹೆಜ್ಜೆಯಿಟ್ಟರು. ಆದರೆ, ಶ್ರೀಕಾಂತ್ ಅಡ್ಡಾಲ ಯೋಜನೆ ಸಂಪೂರ್ಣವಾಗಿ ವಿಫಲವಾಯಿತು.

    ಬ್ರಹ್ಮೋತ್ಸವಂ ಗಳಿಸಿದ್ದೆಷ್ಟು?

    ಬ್ರಹ್ಮೋತ್ಸವಂ ಗಳಿಸಿದ್ದೆಷ್ಟು?

    ಪಿಪಿಕೆ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಪ್ರಿ-ರಿಲೀಸ್ ಕಾರ್ಯಕ್ರಮದವರೆಗೂ ಸುಮಾರು 75 ಕೋಟಿ ಖರ್ಚು ಮಾಡಿದ್ದರಂತೆ. ಆದ್ರೆ, ಸಿನಿಮಾ ರಿಲೀಸ್ ಆದ್ಮೇಲೆ ಅದರಲ್ಲಿ ಅರ್ಧದಷ್ಟು ಸಹ ನಿರ್ಮಾಪಕನ ಕೈ ಸೇರಿಲ್ಲ ಎನ್ನುವುದು ವರದಿ.

    Recommended Video

    Protima Bediಯ ಜೀವನ ಚರಿತ್ರೆ ವೆಬ್ ಸಿರೀಸ್ ನಲ್ಲಿ | Filmibeat Kannada
    ಮೂವರು ನಾಯಕಿಯರು

    ಮೂವರು ನಾಯಕಿಯರು

    ಮಹೇಶ್ ಬಾಬು ಜೊತೆ ಕಾಜಲ್ ಅಗರ್‌ವಾಲ್, ಸಮಂತಾ, ಪ್ರಣಿತಾ ಸುಭಾಷ್ ಮೂವರು ನಾಯಕಿಯರು ನಟಿಸಿದರು. ಸತ್ಯರಾಜ್, ರೇವತಿ, ರಾವ್ ರಮೇಶ್, ಜಯಸುಧಾ, ಈಶ್ವರಿ ರಾವ್, ನಾಸರ್, ನರೇಶ್, ಶಿವಾಜಿ ಶಿಂಧೆ ಸೇರಿದಂತೆ ಹಲವರು ಕಾಣಿಸಿಕೊಂಡರು. ಗೋಪಿ ಸುಂದರ್ ಹಾಗೂ ಮಿಕ್ಕಿ ಜೆ ಮೇಯರ್ ಸಂಗೀತ ಒದಗಿಸಿದರು.

    English summary
    Brahmotsavam movie completes 5 years. interesting thing is Mahesh babu not first choice for Brahmotsavam movie.
    Friday, May 28, 2021, 9:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X