ಹೈದರಾಬಾದ್‌ ಪ್ರವಾಹ: ನೆರವಿಗೆ ನಿಂತ ಮಹೇಶ್ ಬಾಬು, ಜೂ ಎನ್‌ಟಿಆರ್, ದೇವರಕೊಂಡ

ಹೈದರಾಬಾದ್‌ನಲ್ಲಿ ತೀವ್ರ ಮಳೆ ಆಗಿರುವ ಪರಿಣಾಮ ಪ್ರವಾಹ ಸ್ಥಿತಿ ಉಂಟಾಗಿದೆ. ಜನ ಜೀವನ ಸಂಪೂರ್ಣವಾಗಿ ಸಂಕಷ್ಟಕ್ಕೆ ಸಿಲುಕಿದೆ. ಆಸ್ತಿ-ಪಾಸ್ತಿ, ಮನೆ-ಮಠ ಎಲ್ಲವನ್ನು ಕಳೆದುಕೊಂಡಿದ್ದಾರೆ. ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ.

ಹೈದರಾಬಾದ್ ಹಾಗೂ ಇನ್ನಿತರ ಪ್ರವಾಹ ಪೀಡಿತ ಸ್ಥಳಗಳಲ್ಲಿ ಸಿಲುಕಿಕೊಂಡಿರುವವರ ಸಹಾಯಕ್ಕೆ ಟಾಲಿವುಡ್ ಇಂಡಸ್ಟ್ರಿ ಮುಂದಾಗಿದೆ. ತೆಲುಗು ಸ್ಟಾರ್ ನಟರಾದ ಜೂನಿಯರ್ ಎನ್ ಟಿ ಆರ್, ಮಹೇಶ್ ಬಾಬು, ವಿಜಯ್ ದೇವರಕೊಂಡ ಸೇರಿದಂತೆ ಹಲವರು ಧನಸಹಾಯ ಮಾಡಿದ್ದಾರೆ. ಮುಂದೆ ಓದಿ...

50 ಲಕ್ಷ ಘೋಷಿಸಿದ ಎನ್ ಟಿ ಆರ್

50 ಲಕ್ಷ ಘೋಷಿಸಿದ ಎನ್ ಟಿ ಆರ್

''ಮಳೆ ಮತ್ತು ಪ್ರವಾಹದಿಂದ ಹೈದರಾಬಾದ್‌ನ ಅನೇಕ ಜೀವಗಳು ನಾಶವಾಗಿವೆ. ನಮ್ಮ ನಗರದ ಪುನರ್ವಸತಿಗಾಗಿ ತೆಲಂಗಾಣ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದೇನೆ. ನಾವೆಲ್ಲರೂ ಕೈ ಜೋಡಿಸಿ ನಮ್ಮ ಹೈದರಾಬಾದ್‌ನ್ನು ಪುನರ್ ನಿರ್ಮಿಸೋಣ'' ಎಂದು ನಟ ಜೂನಿಯರ್ ಎನ್ ಟಿ ಆರ್ ಟ್ವೀಟ್ ಮಾಡಿದ್ದಾರೆ.

ಹೈದರಾಬಾದ್, ಕರ್ನಾಟಕ, ಮಹಾರಾಷ್ಟ್ರದಲ್ಲಿ ಮುಂದಿನ 6 ತಾಸಿನಲ್ಲಿ ಭಾರಿ ಮಳೆ ಸಾಧ್ಯತೆ

1 ಕೋಟಿ ನೀಡಿದ ಮಹೇಶ್ ಬಾಬು

1 ಕೋಟಿ ನೀಡಿದ ಮಹೇಶ್ ಬಾಬು

ತೆಲಂಗಾಣದಲ್ಲಿ ಭಾರಿ ಮಳೆಯಿಂದ ಉಂಟಾದ ಭೀಕರತೆ ನಾವು ಊಹಿಸಿದ್ದಕ್ಕಿಂತ ಕೆಟ್ಟದಾಗಿದೆ. ಪೀಡಿತ ಕುಟುಂಬಗಳಿಗೆ ಸಹಾಯ ಮಾಡಲು ತೆಲಂಗಾಣ ಸರ್ಕಾರ ಮತ್ತು ವಿಪತ್ತು ಪ್ರತಿಕ್ರಿಯೆ ಪಡೆ ಮಾಡಿದ ಅತ್ಯುತ್ತಮ ಪ್ರಯತ್ನಗಳನ್ನು ಶ್ಲಾಘಿಸಿ ತೆಲಂಗಾಣದ ಸಿಎಂ ಪರಿಹಾರ ನಿಧಿಗೆ 1 ಕೋಟಿ ಕೊಡುಗೆ ನೀಡುತ್ತಿದ್ದೇನೆ. ನೀವೆಲ್ಲರೂ ಮುಂದೆ ಬಂದು ದಾನ ಮಾಡಬೇಕೆಂದು ನಾನು ಕೋರುತ್ತೇನೆ. ಈ ಕಷ್ಟದ ಸಮಯದಲ್ಲಿ ನಮ್ಮ ಜನರು ಪರ ನಿಲ್ಲೋಣ'' ಎಂದು ನಟ ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ.

10 ಲಕ್ಷ ನೀಡಿದ ವಿಜಯ ದೇವರಕೊಂಡ

10 ಲಕ್ಷ ನೀಡಿದ ವಿಜಯ ದೇವರಕೊಂಡ

''ಇದು ನಮ್ಮೆಲ್ಲರಿಗೂ ಕಠಿಣ ವರ್ಷವಾಗಿದೆ, ಕೇರಳಕ್ಕೆ ಒಟ್ಟಿಗೆ ಬಂದೆವು, ಚೆನ್ನೈಗೆ ಒಟ್ಟಿಗೆ ಬಂದೆವು, ಸೈನ್ಯಕ್ಕಾಗಿ ಒಟ್ಟಿಗೆ ಬಂದೆವು ಕೊರೊನಾ ಸಮಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಒಟ್ಟಿಗೆ ಬಂದಿದ್ದೇವೆ, ಈ ಸಮಯದಲ್ಲಿ ನಮ್ಮ ನಗರ ಮತ್ತು ನಮ್ಮ ಜನರಿಗೆ ಸಹಾಯ ಹಸ್ತ ಬೇಕು ..ಇಂದು ನಾನು 10 ಲಕ್ಷವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೇನೆ'' ಎಂದು ನಟ ವಿಜಯ್ ದೇವರಕೊಂಡ ಟ್ವೀಟ್ ಮಾಡಿದ್ದಾರೆ.

ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿ ಕರೆ ಮಾಡಿ ಸ್ನೇಹಿತನ ಬಳಿ ಆಡಿದ ಕೊನೆಯ ಮಾತು

Recommended Video

Chiru ಮಗುವಿಗೆ Dhruva ಖರೀದಿ ಮಾಡಿದ ಅದ್ದೂರಿ Gift ಇದು | Filmibeat Kannada
10 ಲಕ್ಷ ನೆರವು ನೀಡಿದ ತ್ರಿವಿಕ್ರಮ್

10 ಲಕ್ಷ ನೆರವು ನೀಡಿದ ತ್ರಿವಿಕ್ರಮ್

ಹರಿಕಾ ಮತ್ತು ಹಸೈನ್ ಕ್ರಿಯೇಷನ್ಸ್ ಮತ್ತು ನಿರ್ದೇಶಕ ತ್ರಿವಿಕ್ರಮ್ ಇಬ್ಬರು ತಲಾ 10 ಲಕ್ಷ ಹಣವನ್ನು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.

More from Filmibeat

English summary
Telugu actor Mahesh babu, Jr NTR, Vijay Devarakonda, Trivikram donate big for Telangana CM Relief Fund.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X