ರಾಜಮೌಳಿ ಬಳಿಕ ಹಿಟ್ ನಿರ್ದೇಶಕಿ ಜೊತೆ ಕೈ ಜೋಡಿಸಿದ ಮಹೇಶ್ ಬಾಬು
'ಸರ್ಕಾರು ವಾರಿ ಪಾಠ' ಸಿನಿಮಾದಲ್ಲಿ ನಟಿಸುತ್ತಿರುವ ಮಹೇಶ್ ಬಾಬು ಅದರ ಬಳಿಕ ನಿರ್ದೇಶಕ ರಾಜಮೌಳಿ ಜೊತೆಗೆ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ. ಇದರ ಬೆನ್ನಲ್ಲೆ ಮತ್ತೊಬ್ಬ ಹಿಟ್ ನಿರ್ದೇಶಕಿ ಜೊತೆಗೆ ಸಿನಿಮಾ ಮಾಡಲಿದ್ದಾರೆ ಮಹೇಶ್ ಬಾಬು.
ಇತ್ತೀಚೆಗಷ್ಟೆ 'ಸೂರರೈ ಪೊಟ್ರು' ಅಂಥಹಾ ಸೂಪರ್ ಹಿಟ್ ಸಿನಿಮಾ ನೀಡಿರುವ ತಮಿಳು ನಿರ್ದೇಶಕಿ ಸುಧಾ ಕೊಂಗರ ಜೊತೆಗೆ ಸಿನಿಮಾ ಮಾಡಲಿದ್ದಾರೆ ಮಹೇಶ್ ಬಾಬು.
ಈ ಮೊದಲು ಸುಧಾ ಕೊಂಗರ ಅವರು ಧನುಷ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಡೇಟ್ಸ್ ಸಮಸ್ಯೆಯಿಂದಾಗಿ ಧನುಷ್ ಆ ಸಿನಿಮಾದಿಂದ ಹೊರಗುಳಿದಿದ್ದಾರೆ ಎನ್ನಲಾಗುತ್ತಿದೆ. ಅದೇ ಕತೆಯನ್ನು ಮಹೇಶ್ ಬಾಬು ಗಾಗಿ ನಿರ್ದೇಶಿಸಲಿದ್ದಾರಂತೆ ಸುಧಾ ಕೊಂಗರ.

ಆದರೆ ಮಹೇಶ್ ಬಾಬು ಸಹ ಪ್ರಸ್ತುತ ಬಹಳ ಬ್ಯುಸಿಯಾಗಿದ್ದಾರೆ. ಸರ್ಕಾರು ವಾರಿ ಪಾಠ ಸಿನಿಮಾದ ಬಳಿಕ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ. ಅದರ ಬಳಿಕವಷ್ಟೆ ಸುಧಾ ಕೊಂಗರ ಸಿನಿಮಾದಲ್ಲಿ ಮಹೇಶ್ ನಟಿಸುವುದು ಸಾಧ್ಯ. ಮಹೇಶ್ ಬಾಬು ಗಾಗಿ ಸುಧಾ ಕೊಂಗರ ಕನಿಷ್ಟ ಒಂದು ವರ್ಷ ಕಾಯಬೇಕಾಗಬಹುದು.
ಸುಧಾ ಕೊಂಗರ ನಿರ್ದೇಶನದ 'ಸೂರರೈ ಪೊಟ್ರು' ಸಿನಿಮಾ ಆಸ್ಕರ್ ಗೆ ಹೋಗುತ್ತಿದೆ. ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿರುವ ಈ ಸಿನಿಮಾ ಸುಧಾ ಕೊಂಗರ ಗೆ ಸಾಕಷ್ಟು ಅವಕಾಶಗಳ ಬಾಗಿಲು ತೆರೆದಿದೆ. ಈ ಹಿಂದೆ ಅವರು 'ದ್ರೋಹಿ', 'ಇದುರು ಸುಟ್ರು' ತೆಲುಗಿನಲ್ಲಿ 'ಗುರು' ಸಿನಿಮಾಗಳನ್ನು ನಿರ್ದೇಶಿಸಿದ್ದರು.
Recommended Video
ಹಲವು ತಿಂಗಳಿನಿಂದಲೂ ಚಿತ್ರೀಕರಣದಿಂದ ದೂರವಿದ್ದ ಮಹೇಶ್ ಬಾಬು ಇತ್ತೀಚೆಗಷ್ಟೆ 'ಸರ್ಕಾರು ವಾರಿ ಪಾಟ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ನಾಯಕಿ. ಅನುಷ್ಕಾ ಶೆಟ್ಟಿ ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











