For Quick Alerts
  ALLOW NOTIFICATIONS  
  For Daily Alerts

  'ಪ್ರಿನ್ಸ್' ಮಹೇಶ್ ಬಾಬು ಕುಟುಂಬದಿಂದ ಹೊಸ ನಟ ಎಂಟ್ರಿ

  |

  ತೆಲುಗು ಸೂಪರ್ ಸ್ಟಾರ್, ಹಿರಿಯ ನಟ ಕೃಷ್ಣ ಕುಟುಂಬದಿಂದ ಮತ್ತೊಬ್ಬ ಕಲಾವಿದ ಚಿತ್ರರಂಗ ಪ್ರವೇಶಿಸಿದ್ದಾರೆ. ಮಹೇಶ್ ಬಾಬು ಸೇರಿದಂತೆ ಕೃಷ್ಣ ಅವರ ಮಕ್ಕಳು ಈಗಾಗಲೇ ಚಿತ್ರರಂಗದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಇದೀಗ, ಮೊಮ್ಮಗ ಬೆಳ್ಳಿತೆರೆಯಲ್ಲಿ ಮಿಂಚಲು ಎಂಟ್ರಿಯಾಗಿದ್ದಾರೆ.

  ಮಹೇಶ್ ಬಾಬು ಸೋದರಿಯ ಮಗ ಅಶೋಕ್ ಗಲ್ಲಾ ಅಧಿಕೃತವಾಗಿ ಟಾಲಿವುಡ್ ಪ್ರವೇಶಿಸಿದ್ದು, ಸೋದರಳಿಯನ ಪ್ರವೇಶಕ್ಕೆ ಸ್ವತಃ ಪ್ರಿನ್ಸ್ ಬೆಂಬಲವಾಗಿ ನಿಂತಿದ್ದಾರೆ. ಇಷ್ಟು ದಿನಗಳಿಂದ ಅಶೋಕ್ ಗಲ್ಲಾ ಚಿತ್ರರಂಗ ಎಂಟ್ರಿ ಬಗ್ಗೆ ಸುದ್ದಿಗಳು ಚರ್ಚೆಯಲ್ಲಿದ್ದವು. ಈಗ ತಮ್ಮ ಚೊಚ್ಚಲ ಸಿನಿಮಾದ ಟೀಸರ್ ರಿಲೀಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮುಂದೆ ಓದಿ...

  ಮಹೇಶ್ ಬಾಬು ಚಿತ್ರಕ್ಕೆ ಕನ್ನಡದ ಸೂಪರ್ ಸ್ಟಾರ್ ವಿಲನ್?ಮಹೇಶ್ ಬಾಬು ಚಿತ್ರಕ್ಕೆ ಕನ್ನಡದ ಸೂಪರ್ ಸ್ಟಾರ್ ವಿಲನ್?

  ಮಹೇಶ್ ಬಾಬು ಸೋದರಳಿಯ

  ಮಹೇಶ್ ಬಾಬು ಸೋದರಳಿಯ

  ಮಹೇಶ್ ಬಾಬು ಸಹೋದರಿ ಪದ್ಮಾವತಿ ಮತ್ತು ಜಯದೇವ್ ಗಲ್ಲಾ ದಂಪತಿಯ ಹಿರಿಯ ಪುತ್ರ ಅಶೋಕ್ ಗಲ್ಲಾ. ಸೋದರಳಿಯ ಅಧಿಕೃತವಾಗಿ ಸಿನಿಮಾರಂಗಕ್ಕೆ ಕಾಲಿಟ್ಟಿದ್ದು, ಚೊಚ್ಚಲ ಸಿನಿಮಾ ಸಹ ಆರಂಭಿಸಿದ್ದಾರೆ. ಈ ಚಿತ್ರದ ಹೆಸರು 'ಹೀರೋ'.

  ಕೌವ್ ಬಾಯ್‌ ಲುಕ್‌ನಲ್ಲಿ ಅಶೋಕ್ ಎಂಟ್ರಿ

  ಕೌವ್ ಬಾಯ್‌ ಲುಕ್‌ನಲ್ಲಿ ಅಶೋಕ್ ಎಂಟ್ರಿ

  'ಹೀರೋ' ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಕೌವ್ ಬಾಯ್ ಲುಕ್‌ನಲ್ಲಿ ಅಶೋಕ್ ಗಲ್ಲಾ ಕಾಣಿಸಿಕೊಂಡಿದ್ದು, ಕೆಲವು ದೃಶ್ಯದಲ್ಲಿ ಥೇಟ್ ಮಹೇಶ್ ಬಾಬು ರೀತಿನೇ ಕಾಣ್ತಾರೆ. ಒಳ್ಳೆಯ ಎತ್ತರ, ಫಿಸಿಕ್‌ನಲ್ಲಿ ಕಾಣಿಸಿಕೊಂಡಿರುವ ಅಶೋಕ್, ಮಾವನ ಹಾದಿಯಲ್ಲಿ ಸಾಗಲು ಸಜ್ಜಾಗಿದ್ದಾರೆ ಎನ್ನುವುದಕ್ಕೆ ಈ ಟೀಸರ್ ಸಾಕ್ಷಿಯಾಗಿದೆ.

  ತೆಲುಗಿನ ಸ್ಟಾರ್ ನಟನಾದರೂ ಮಹೇಶ್ ಬಾಬುಗೆ ತೆಲುಗು ಓದಲು, ಬರೆಯಲು ಬರಲ್ಲತೆಲುಗಿನ ಸ್ಟಾರ್ ನಟನಾದರೂ ಮಹೇಶ್ ಬಾಬುಗೆ ತೆಲುಗು ಓದಲು, ಬರೆಯಲು ಬರಲ್ಲ

  ಅಮ್ಮನೇ ನಿರ್ಮಾಪಕಿ

  ಅಮ್ಮನೇ ನಿರ್ಮಾಪಕಿ

  ಪದ್ಮಾವತಿ ಗಲ್ಲಾ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಮಗನ ಮೊದಲ ಸಿನಿಮಾಗೆ ಖುದ್ದು ತಾಯಿಯೇ ಬಂಡವಾಳ ಹಾಕಿರುವುದು ವಿಶೇಷ. ಈ ಚಿತ್ರವನ್ನು ಶ್ರೀರಾಮ್ ಆದಿತ್ಯ ನಿರ್ದೇಶಿಸುತ್ತಿದ್ದಾರೆ. ಸಂಪೂರ್ಣವಾಗಿ ಚಿತ್ರೀಕರಣ ಮುಗಿದಿದ್ದು, ತೆರೆಗೆ ಬರಲು ಸಜ್ಜಾಗಿದೆ.

  ವರನಟ ಡಾ.ರಾಜ್ ಕುಮಾರ್ ಹೆಸರಲ್ಲಿ ದೊಡ್ಡ ಎಡವಟ್ಟು ಮಾಡಿದ ಗೂಗಲ್!! | Filmibeat Kannada
  ನಿಧಿ ಅಗರ್‌ವಾಲ್ ನಾಯಕಿ

  ನಿಧಿ ಅಗರ್‌ವಾಲ್ ನಾಯಕಿ

  ಅಶೋಕ್ ಗಲ್ಲಾ ಚೊಚ್ಚಲ ಚಿತ್ರದಲ್ಲಿ ನಾಯಕಿಯಾಗಿ ನಿಧಿ ಅಗರ್‌ವಾಲ್ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಚಿತ್ರದ ಮುಹೂರ್ತಕ್ಕೆ ರಾಮ್ ಚರಣ್ ತೇಜ ಆಗಮಿಸಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದರು.

  English summary
  Telugu superstar Krishna grandson, Mahesh babu Nephew ashok galla makes his debut to Tollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X