Confirm: ಮಹೇಶ್ ಬಾಬು ಮುಂದಿನ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟಿಸಲಿರುವ ಮುಂದಿನ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ, ಈವರೆಗೂ ಅಧಿಕೃತ ಆಗಿರಲಿಲ್ಲ.

ಇದೀಗ, ಸ್ವತಃ ಮಹೇಶ್ ಬಾಬು ಅವರೇ ಕೀರ್ತಿ ಸುರೇಶ್ ತನ್ನ ಮುಂದಿನ ಸಿನಿಮಾದಲ್ಲಿ ನಾಯಕಿ ಎಂದು ಘೋಷಿಸಿದ್ದಾರೆ.

ಇಂದು ಕೀರ್ತಿ ಸುರೇಶ್ ಅವರ ಹುಟ್ಟುಹಬ್ಬ, ಬರ್ತಡೇ ವಿಶೇಷವಾಗಿ ಶುಭಕೋರಿರುವ ಮಹೇಶ್ ಬಾಬು, ''ಹ್ಯಾಪಿ ಬರ್ತಡೇ ಕೀರ್ತಿ ಸುರೇಶ್. 'ಸರ್ಕಾರು ವಾರಿ ಪಾಟ' ಚಿತ್ರತಂಡಕ್ಕೆ ಸುಸ್ವಾಗತ. ಇದು ನಿಮ್ಮ ಸ್ಮರಣೀಯ ಚಿತ್ರಗಳಲ್ಲಿ ಒಂದಾಗಲಿದೆ ಎಂದು ಭಾವಿಸುತ್ತೇನೆ'' ಎಂದು ಮಹೇಶ್ ಟ್ವೀಟ್ ಮಾಡಿದ್ದಾರೆ.

Mahesh babu Official announces Keerthy Suresh as heroine For Sarkaru Vaari Paata

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೀರ್ತಿ ಸುರೇಶ್ ''ಮೊದಲ ಬಾರಿಗೆ ನಿಮ್ಮೊಂದಿಗೆ ಕೆಲಸ ಮಾಡಲು ನಿಜವಾಗಿಯೂ ಎದುರು ನೋಡುತ್ತಿದ್ದೇನೆ ಮತ್ತು ಸಂತೋಷವಾಗಿದೆ'' ಎಂದಿದ್ದಾರೆ.

ಪರುಶರಾಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಸ್ ತಮನ್ ಅವರ ಸಂಗೀತ ನೀಡಲಿದ್ದಾರೆ. 'ಸರ್ಕಾರು ವಾರಿ ಪಾಟ' ಚಿತ್ರದ ಪೋಸ್ಟರ್‌ಗಳು ಬಿಡುಗಡೆಯಾಗಿದ್ದು, ಈ ಚಿತ್ರ ಈಗಾಗಲೇ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಡಿಜಿಟಲ್ ಹಕ್ಕು ದೊಡ್ಡ ಬೆಲೆಗೆ ಸೇಲ್ ಆಗಿದೆ ಎನ್ನಲಾಗಿದೆ.

Mahesh babu Official announces Keerthy Suresh as heroine For Sarkaru Vaari Paata

ಈ ಚಿತ್ರದಲ್ಲಿ ಬಾಲಿವುಡ್ ನಟಿ ವಿದ್ಯಾಬಾಲನ್ ಮತ್ತು ಅನಿಲ್ ಕಪೂರ್ ಸಹ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ತಮಿಳು ನಟಿ ನಿವೇತಾ ಥಾಮಸ್ ಸಹ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ

More from Filmibeat

English summary
Telugu actor Mahesh babu Official announces Keerthy Suresh as Lead Lady to Sarkaru Vaari Paata movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X