ದರ್ಶನ್ ರೀಮೇಕ್ ಮಾಡಿದ್ದ 'ಆ' ಸಿನಿಮಾ ರೀ-ರಿಲೀಸ್: ವಾರಕ್ಕೂ ಮೊದಲೇ ಟಿಕೆಟ್‌ ಸೋಲ್ಡ್‌ಔಟ್!

ಸೂಪರ್ ಸ್ಟಾರ್‌ ಮಹೇಶ್‌ ಬಾಬು ಹಾಗೂ ಪೂರಿ ಜಗನ್ನಾಥ್ ಡೆಡ್ಲಿ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾ 'ಪೋಕಿರಿ'. 16 ವರ್ಷಗಳ ಹಿಂದೆ ಈ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಆಗಸ್ಟ್ 9ಕ್ಕೆ ಸಿನಿಮಾ ಹೊಸ ರೂಪದಲ್ಲಿ ರಿಲೀಸ್ ಆಗ್ತಿದ್ದು, ವಿದೇಶಗಳಲ್ಲಿ ಕೆಲವೆಡೆ ಈಗಾಗಲೇ ಟಿಕೆಟ್‌ಗಳು ಸೋಲ್ಡ್‌ ಔಟ್ ಆಗಿದೆ.

2006ರಲ್ಲಿ ತೆರೆಕಂಡು ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿದ್ದ 'ಪೋಕಿರಿ' ಸಿನಿಮಾ ಮುಂದೆ ಕನ್ನಡ, ತೆಲುಗು, ಹಿಂದಿ, ತಮಿಳು ಭಾಷೆಗಳಿಗೆ ರೀಮೇಕ್ ಆಗಿ ಹಿಟ್ ಆಗಿತ್ತು. ಈ ವರ್ಷ ಮಹೇಶ್‌ ಬಾಬು ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರವನ್ನು ಮತ್ತೆ ಪ್ರೇಕ್ಷಕರ ಮುಂದೆ ತರ್ತಿದ್ದು, ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಆಂಧ್ರ-ತೆಲಂಗಾಣದಲ್ಲಿ ಪ್ರಿನ್ಸ್ ಕ್ರೇಜ್ ಏನು ಅನ್ನೋದು ಗೊತ್ತಿದೆ. ವಿದೇಶಗಳಲ್ಲಿರೋ ಅಭಿಮಾನಿಗಳು 'ಪೋಕಿರಿ' ಚಿತ್ರಕ್ಕಾಗಿ ಕಾತರರಾಗಿದ್ದು, ಅಡ್ವಾನ್ಸ್‌ ಟಿಕೆಟ್ ಬುಕ್ಕಿಂಗ್‌ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಕೆಲ ಶೋಗಳ ಟಿಕೆಟ್‌ಗಳು 10 ದಿನ ಮೊದಲೇ ಬಿಕರಿಯಾಗಿದೆ.

ಪೂರಿ ಜಗನ್ನಾಥ್ ನಿರ್ದೇಶನದ 'ಪೋಕಿರಿ' ಚಿತ್ರದಲ್ಲಿ ಮಹೇಶ್‌ ಬಾಬು ಜೋಡಿಯಾಗಿ ಇಲಿಯಾನಾ ಡಿಕ್ರೂಸ್ ನಟಿಸಿದ್ದರು. ಪ್ರಕಾಶ್‌ ರಾಜ್ ವಿಲನ್ ಆಗಿ ಅಬ್ಬರಿಸಿದರೆ ಸಯ್ಯಾಜಿ ಶಿಂಧೆ, ನಾಸರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಅವತ್ತಿನ ಕಾಲಕ್ಕೆ ತೆಲುಗು ಬಾಕ್ಸಾಫೀಸ್‌ನಲ್ಲಿ ಹಲವು ದಾಖಲೆಗಳನ್ನು ಮುರಿದು ಈ ಆಕ್ಷನ್ ಎಂಟರ್‌ಟೈನರ್ ಸದ್ದು ಮಾಡಿತ್ತು. ಟಾಲಿವುಡ್ ಸೂಪರ್ ಸ್ಟಾರ್ ಕರಿಯರ್‌ನಲ್ಲಿ ಎಂದೂ ಮರೆಯಲಾಗದ ಸಿನಿಮಾ 'ಪೋಕಿರಿ'.

 'ಪೋಕಿರಿ' ಸಿನಿಮಾ ಕಥೆಯೇನು?

'ಪೋಕಿರಿ' ಸಿನಿಮಾ ಕಥೆಯೇನು?

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅನ್ನುವಂತೆ ಐಪಿಎಸ್‌ ಆಫೀಸರ್ ಕೃಷ್ಣ ಮನೋಹರ್ ತನ್ನನ್ನು ತಾನು ಪೋಕಿರಿ ಅನ್ನುವಂತೆ ಬಿಂಬಿಸಿಕೊಂಡು ಮಾಫಿಯಾ ಗ್ಯಾಂಗ್‌ನಲ್ಲಿ ಸೇರಿ ಗ್ಯಾಂಗ್‌ನಲ್ಲಿ ಒಬ್ಬೊಬ್ಬರನ್ನು ಮಟ್ಟ ಹಾಕುತ್ತಾ ಹೋಗ್ತಾನೆ. ಕ್ಲೈಮ್ಯಾಕ್ಸ್‌ನಲ್ಲಿ ಆತ ಅಂಡರ್‌ಕವರ್‌ ಆಫೀಸರ್ ಅಂತ ಗೊತ್ತಾಗಿ ಎಲ್ಲಾ ಶಾಕ್ ಆಗ್ತಾರೆ. ಈ ಟ್ವಿಸ್ಟ್‌ ಸಿನಿಪ್ರೇಮಿಗಳಿಗೆ ಸಖತ್ ಇಷ್ಟವಾಗಿತ್ತು.

 'ಪೋಕಿರಿ' ರಿಮೇಕ್‌ನಲ್ಲಿ ದರ್ಶನ್ ಮಿಂಚು

'ಪೋಕಿರಿ' ರಿಮೇಕ್‌ನಲ್ಲಿ ದರ್ಶನ್ ಮಿಂಚು

4 ವರ್ಷಗಳ ನಂತರ 'ಪೋಕಿರಿ' ಸಿನಿಮಾ ಪೊರ್ಕಿ' ಹೆಸರಿನಲ್ಲಿ ಕನ್ನಡಕ್ಕೆ ರಿಮೇಕ್ ಆಗಿತ್ತು. ಎಂ. ಡಿ ಶ್ರೀಧರ್ ನಿರ್ದೇಶನದ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪ್ರಣಿತಾ ಸುಭಾಷ್ ಲೀಡ್‌ ರೋಲ್‌ಗಳಲ್ಲಿ ಮಿಂಚಿದ್ದರು.

 ಹಿಂದಿ, ತಮಿಳಿಗೂ ಚಿತ್ರ ರಿಮೇಕ್‌

ಹಿಂದಿ, ತಮಿಳಿಗೂ ಚಿತ್ರ ರಿಮೇಕ್‌

'ಪೋಕಿರಿ' ಸಿನಿಮಾ 'ವಾಂಟೆಡ್' ಹೆಸರಿನಲ್ಲಿ ಬಾಲಿವುಡ್‌ಗೆ ರಿಮೇಕ್ ಆಗಿ ಸಖತ್‌ ಕಂಡಿತ್ತು. ಸೋತು ಸುಣ್ಣವಾಗಿದ್ದ ಸಲ್ಮಾನ್‌ ಖಾನ್‌ಗೆ ಚಿತ್ರರಂಗದಲ್ಲಿ ಈ ಸಿನಿಮಾ ಮರುಹುಟ್ಟು ಕೊಟ್ಟಿತ್ತು. ಇನ್ನು ತಮಿಳಿನಲ್ಲಿ ಇಳಯ ದಳಪತಿ ವಿಜಯ್ 'ಪೊಕ್ಕಿರಿ' ಆಗಿ ಸೂಪರ್ ಸಕ್ಸಸ್ ಕಂಡಿದ್ದರು.

 66 ಕೋಟಿ ರೂ. ಗಳಿಕೆ ಕಂಡಿದ್ದ 'ಪೋಕಿರಿ'

66 ಕೋಟಿ ರೂ. ಗಳಿಕೆ ಕಂಡಿದ್ದ 'ಪೋಕಿರಿ'

ಈಗ ಪ್ಯಾನ್‌ ಇಂಡಿಯಾ ಟ್ರೆಂಡ್‌ ಶುರುವಾಗಿ ಸಿನಿಮಾಗಳು ಸಾವಿರಾರು ಕೋಟಿ ರೂ. ಕಲೆಕ್ಷನ್ ಮಾಡ್ತಿವೆ. ಆದರೆ 16 ವರ್ಷಗಳ ಹಿಂದೆ 'ಪೋಕಿರಿ' ಸಿನಿಮಾ ಬರೋಬ್ಬರಿ 66 ಕೋಟಿ ರೂ. ಗಳಿಸಿ ಟಾಲಿವುಡ್‌ ಶೇಕ್‌ ಮಾಡಿತ್ತು. ಈ ದಾಖಲೆ ಮುರಿಯಲು 3 ವರ್ಷಗಳೇ ಬೇಕಾಯಿತು. 'ಪೋಕಿರಿ' ಸಿನಿಮಾ 4K ಮಾಸ್ಟರ್ಡ್‌ ವರ್ಷನ್‌ನಲ್ಲಿ ರೀ-ರಿಲೀಸ್ ಆಗ್ತಿದೆ ಅನ್ನೋ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

More from Filmibeat

English summary
Mahesh Babu Pokiri Re Releasing Week Before Tickets Sold Out: Darshan Remake This Movie As Porki. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X