For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬುಗೆ ಬಾಲಿವುಡ್ ನಟಿಯರು ಬೇಡವಂತೆ, ರಾಜಮೌಳಿಗೆ ಷರತ್ತು!

  |

  ಮಹೇಶ್ ಬಾಬು 'ಸರ್ಕಾರು ವಾರಿ ಪಾಟ' ಚಿತ್ರ ರಿಲೀಸ್ ಆಗಿದೆ. ಈಗ ಮುಂದಿನ ಚಿತ್ರಕ್ಕೆ ಮಹೇಶ್ ಬಾಬು ಅಣಿಯಾಗಿದ್ದಾರೆ. ಇದರ ಜೊತೆಗೆ ಮಹೇಶ್ ಬಾಬು ಮತ್ತು ನಿರ್ದೇಶಕ ರಾಜಮೌಳಿ ಕಾಂಬಿನೇಷನ್ ಸಿನಿಮಾ ಕೂಡ ತಯಾರಾಗುತ್ತಿದೆ.

  RRR ಚಿತ್ರದ ಬಳಿಕ ರಾಜಮೌಳಿ, ಮಹೇಶ್ ಬಾಬು ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಕೆಲಸ ಶುರುವಾಗಿದೆ. ಮತ್ತೊಂದೆಡೆ ಈ ಚಿತ್ರದ ಪಾತ್ರವರ್ಗವದ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ರಾಜಮೌಳಿ ಸಿನಿಮಾ ಅಂದರೆ ಪ್ರತಿ ಪಾತ್ರವೂ ಉತ್ತಮವಾಗಿರುತ್ತದೆ.

  ಬಾಲಕೃಷ್ಣಗೆ ನಾಯಕಿ ಆಗಬೇಕಿತ್ತು ಮಹೇಶ್ ಬಾಬು ಸಹೋದರಿ! ತಡೆದಿದ್ದು ಯಾರು?ಬಾಲಕೃಷ್ಣಗೆ ನಾಯಕಿ ಆಗಬೇಕಿತ್ತು ಮಹೇಶ್ ಬಾಬು ಸಹೋದರಿ! ತಡೆದಿದ್ದು ಯಾರು?

  ಅದರಲ್ಲೂ ನಾಯಕ, ನಾಯಕಿ ಪಾತ್ರಗಳು, ಹೆಚ್ಚು ಗಮನ ಸೆಳೆಯುತ್ತವೆ. ಮಹೇಶ್ ಬಾಬು ಜೊತೆಗೆ ಯಾವ ನಟಿ ನಟಿಸುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಇದೆ. ಆದರೆ ನಾಯಕಿಯ ಆಯ್ಕೆಗೆ ಮಹೇಶ್ ಬಾಬು ಷರತ್ತು ಹಾಕಿದ್ದಾರಂತೆ.

  ಬಾಲಿವುಡ್ ನಟಿಯರಿಗೆ ನೋ ಎಂದ ಮಹೇಶ್ ಬಾಬು!

  ಬಾಲಿವುಡ್ ನಟಿಯರಿಗೆ ನೋ ಎಂದ ಮಹೇಶ್ ಬಾಬು!

  ಈ ಸಿನಿಮಾದಲ್ಲಿ ನಾಯಕಿ ಯಾರು ಎನ್ನುವ ವಿಚಾರದ ಬಗ್ಗೆ ಸುದ್ದಿ ಒಂದು ಹರಿದಾಡುತ್ತಿದೆ. ನಾಯಕಿಯರ ಆಯ್ಕೆಯಲ್ಲಿ ನಟ ಮಹೇಶ್ ಬಾಬು ನಿರ್ದೇಶಕ ರಾಜಮೌಳಿಗೆ ಷರತ್ತು ಒಂದನ್ನು ಹಾಕಿದ್ದಾರಂತೆ. ಈ ಚಿತ್ರಕ್ಕೆ ಬಾಲಿವುಡ್ ನಟಿ ಬೇಡ, ತೆಲುಗು ನಾಯಕಿಯನ್ನೇ ಆಯ್ಕೆ ಮಾಡಿ ಎಂದಿದ್ದಾರಂತೆ. ಈ ಸುದ್ದಿ ಟಾಲಿವುಡ್‌ನಲ್ಲಿ ಜೋರಾಗಿದೆ.

  ರಾಜಮೌಳಿಗೆ ಸ್ಟೋರಿ ಆಯ್ಕೆಯಲ್ಲಿ ಗೊಂದಲ: ಮಹೇಶ್ ಬಾಬು ಸಿನಿಮಾ ಸೆಟ್ಟೇರಲ್ವಾ?ರಾಜಮೌಳಿಗೆ ಸ್ಟೋರಿ ಆಯ್ಕೆಯಲ್ಲಿ ಗೊಂದಲ: ಮಹೇಶ್ ಬಾಬು ಸಿನಿಮಾ ಸೆಟ್ಟೇರಲ್ವಾ?

  ಹಲವು ಬಾಲಿವುಡ್ ನಟಿಯರ ಜೊತೆ ಅಭಿನಯ!

  ಹಲವು ಬಾಲಿವುಡ್ ನಟಿಯರ ಜೊತೆ ಅಭಿನಯ!

  ಮಹೇಶ್​ ಬಾಬು ಹಲವು ಬಾಲಿವುಡ್ ನಟಿಯರ ಜೊತೆಗೆ ಅಭಿನಯಿಸಿದ್ದಾರೆ. ಪ್ರೀತಿ ಜಿಂಟಾ, ಬಿಪಾಶಾ ಬಸು, ಲೀಸಾ ರೇ, ನಮ್ರತಾ, ಕೃತಿ ಸನೋನ್, ಸೋನಾಲಿ ಬಿಂದ್ರೆ, ಅಮೃತಾ ರಾವ್, ಕಿಯಾರಾ ಅಡ್ವಾಣಿ, ಪೂಜಾ ಹೆಗ್ಡೆ ಅನೇಕ ಹಿಂದಿ ನಾಯಕಿಯರೊಂದಿಗೆ ಕೆಲಸ ಮಾಡಿದ್ದಾರೆ. ಆದರೆ ಈಗ ಬಾಲಿವುಡ್ ನಟಿಯರು ಬೇಡವೆಂದಿದ್ದು, ಯಾರು ಈ ಚಿತ್ರಕ್ಕೆ ಆಯ್ಕೆ ಆಗಲಿದ್ದಾರೆ ಎನ್ನುವುದನ್ನು ನೋಡಬೇಕಿದೆ.

  ರಾಜಮೌಳಿ ನಿರ್ದೇಶನ, ವಿಜಯೇಂದ್ರ ಪ್ರಸಾದ್ ಕಥೆ!

  ರಾಜಮೌಳಿ ನಿರ್ದೇಶನ, ವಿಜಯೇಂದ್ರ ಪ್ರಸಾದ್ ಕಥೆ!

  ಮಹೇಶ್ ಬಾಬು ಮತ್ತು ನಿರ್ದೇಶಕ ರಾಜಮೌಳಿ ಕಾಂಬಿನೇಶನ್‌ನಲ್ಲಿ ಬರ್ತಿರೋ ಈ ಚಿತ್ರ, ದುರ್ಗಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಹಿರಿಯ ನಿರ್ಮಾಪಕ ಕೆ.ಎಲ್.ನಾರಾಯಣ ನಿರ್ಮಿಸಲಿದ್ದಾರೆ. ರಾಜಮೌಳಿ ಅವರ ತಂದೆ, ಖ್ಯಾತ ಚಿತ್ರ ಸಾಹಿತಿ ಕೆ.ವಿ.ವಿಜಯೇಂದ್ರ ಪ್ರಸಾದ್ ಕಥೆಯನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಸದ್ಯ ಸ್ಕ್ರಿಪ್ಟ್ ವರ್ಕ್‌ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

  ಮಗನ ತ್ಯಾಗದ ಬಗೆಗಿನ ಸಿನಿಮಾ ಕಂಡು ಕಣ್ಣೀರುಗರೆದ ಸಂದೀಪ್ ಉನ್ನಿಕೃಷ್ಣನ್ ಪೋಷಕರುಮಗನ ತ್ಯಾಗದ ಬಗೆಗಿನ ಸಿನಿಮಾ ಕಂಡು ಕಣ್ಣೀರುಗರೆದ ಸಂದೀಪ್ ಉನ್ನಿಕೃಷ್ಣನ್ ಪೋಷಕರು

  ಪೂಜಾ ಹೆಗ್ಡೆ ಜೊತೆ ಮಹೇಶ್ ಬಾಬು!

  ಪೂಜಾ ಹೆಗ್ಡೆ ಜೊತೆ ಮಹೇಶ್ ಬಾಬು!

  ಇನ್ನು ಈ ಚಿತ್ರಕ್ಕೂ ಮುನ್ನ ಮಹೇಶ್ ಬಾಬು ಮತ್ತು ಪೂಜಾ ಹೆಗ್ಡೆ ಕಾಂಬಿನೇಷನ್ ಸಿನಿಮಾ ಬರಲಿದೆ. ಮತ್ತೊಂದೆಡೆ ಸ್ಕ್ರಿಪ್ಟ್ ಕೂಡ ಲಾಕ್ ಆಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ ಕೊನೆಯ ವಾರದಲ್ಲಿ ಚಿತ್ರತಂಡ ಶೂಟಿಂಗ್ ಶುರುವಾಗಿದೆ. ಇನ್ನು ನಿರ್ದೇಶಕ ತ್ರಿವಿಕ್ರಂ ಜೊತೆಗೂ ಸಿನಿಮಾ ಮಾಡಲಿದ್ದಾರೆ.

  English summary
  Mahesh Babu Reject Bollywood Heroines For Next Movie With Rajamouli, Know More,
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X