twitter
    For Quick Alerts
    ALLOW NOTIFICATIONS  
    For Daily Alerts

    ಮಹೇಶ್ ಬಾಬು ನಟಿಸಬೇಕಿದ್ದ 'ಪುಷ್ಪ' ಚಿತ್ರ ಅಲ್ಲು ಅರ್ಜುನ್ ಪಾಲಾಯಿತು: ಕಾರಣ ಇದು..

    |

    ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಚಿತ್ರದ ಮೊದಲ ಪೋಸ್ಟರ್ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಅಲ್ಲು ಅರ್ಜುನ್ ಜನ್ಮದಿನದ ಅಂಗವಾಗಿ ಬುಧವಾರ ಈ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ತೆಲುಗು ಮಾತ್ರವಲ್ಲದೆ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಸಿನಿಮಾ ತೆರೆಕಾಣಲಿದೆ. ಪೋಸ್ಟರ್‌ನಲ್ಲಿನ ಅಲ್ಲು ಅರ್ಜುನ್ ಲುಕ್‌ಗೆ ಎಲ್ಲರೂ ಫಿದಾ ಆಗಿದ್ದಾರೆ. ಆದರೆ ಈ ಚಿತ್ರದಲ್ಲಿ ವಾಸ್ತವವಾಗಿ ಮಹೇಶ್ ಬಾಬು ನಟಿಸಬೇಕಿತ್ತು.

    ಹೌದು. ಮಹೇಶ್ ಬಾಬು ಅವರು ನಟಿಸಬೇಕಿದ್ದ 'ಪುಷ್ಪ' ಕೊನೆಗೆ ಅಲ್ಲು ಅರ್ಜುನ್ ಪಾಲಾಗಿತ್ತು. ಆದರೆ ಮಹೇಶ್ ಬಾಬು ಈ ಸಿನಿಮಾದಲ್ಲಿ ನಟಿಸಲಿಲ್ಲ. ಇದಕ್ಕೆ ಕಾರಣ ಡೇಟ್ಸ್ ಹೊಂದಾಣಿಕೆ ಅಥವಾ ಬೇರಾವುದೋ ಸಮಸ್ಯೆ ಅಲ್ಲ. ಮಹೇಶ್ ಬಾಬು ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ನೇರವಾಗಿ ತಿರಸ್ಕರಿಸಿದ್ದರಂತೆ. ಈ ಚಿತ್ರಕ್ಕೆ ನಿರ್ದೇಶಕ ಸುಕುಮಾರ್ ಮೊದಲು ಆಯ್ದುಕೊಂಡದ್ದು ಮಹೇಶ್ ಬಾಬು ಅವರನ್ನು. ಹೀಗಾಗಿ ಮೊದಲು ಅವರ ಬಳಿ ಹೋಗಿ ಕಥೆ ವಿವರಿಸಿದ್ದರಂತೆ. ಆದರೆ ಕಥೆ ಕೇಳಿದ ಮಹೇಶ್ ಬಾಬು ಅದಕ್ಕೆ 'ನೋ' ಎಂದಿದ್ದರಂತೆ. ಮುಂದೆ ಓದಿ...

    ನೆಗೆಟಿವ್ ಶೇಡ್ ಕಾರಣಕ್ಕೆ ತಿರಸ್ಕಾರ

    ನೆಗೆಟಿವ್ ಶೇಡ್ ಕಾರಣಕ್ಕೆ ತಿರಸ್ಕಾರ

    'ಪುಷ್ಪ' ಚಿತ್ರದಲ್ಲಿ ನಾಯಕನ ಪೂರ್ಣ ಹೆಸರು ಪುಷ್ಪರಾಜ್. ಆದರೆ ಈ ಪಾತ್ರಕ್ಕೆ ಬಹಳ ನೆಗೆಟಿವ್ ಶೇಡ್ ಇದೆಯಂತೆ. ಪೋಸ್ಟರ್‌ನಲ್ಲಿಯೇ ಇದರ ಕುರುಹು ಕಾಣಿಸುತ್ತದೆ. ಈ ನೆಗೆಟಿವ್ ಛಾಯೆಯ ಕಾರಣಕ್ಕಾಗಿಯೇ ಮಹೇಶ್ ಬಾಬು ಪುಷ್ಪವನ್ನು ತಿರಸ್ಕರಿಸಿದ್ದಾರೆ.

    ಹುಟ್ಟುಹಬ್ಬಕ್ಕೆ ಅಲ್ಲು ಭರ್ಜರಿ ಗಿಫ್ಟ್: ಹೊಸ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ರಿಲೀಸ್ಹುಟ್ಟುಹಬ್ಬಕ್ಕೆ ಅಲ್ಲು ಭರ್ಜರಿ ಗಿಫ್ಟ್: ಹೊಸ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ರಿಲೀಸ್

    ಪಾಸಿಟಿವ್ ಪಾತ್ರಗಳನ್ನೇ ಬಯಸುತ್ತಾರೆ

    ಪಾಸಿಟಿವ್ ಪಾತ್ರಗಳನ್ನೇ ಬಯಸುತ್ತಾರೆ

    ಮಹೇಶ್ ಬಾಬು ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಅವರನ್ನು ಚಾಕೊಲೇಟ್ ಹೀರೋ ಎಂದು ಪರಿಗಣಿಸುವವರೇ ಹೆಚ್ಚು. ತಾವು ನೆಗೆಟಿವ್ ಶೇಡ್‌ಗಳಲ್ಲಿ ಕಾಣಿಸಿಕೊಂಡರೆ ಜನರಿಗೆ ಇಷ್ಟವಾಗುವುದಿಲ್ಲ ಎನ್ನುವುದು ಅವರ ನಂಬಿಕೆ. ಅಲ್ಲದೆ ಅವರು ಪಾಸಿಟಿವ್ ಆಗಿರುವ ಪಾತ್ರಗಳನ್ನೇ ಬಯಸುತ್ತಾರೆ.

    ನೆಗೆಟಿವ್ ಶೇಡ್ ಒಪ್ಪಿಕೊಂಡ ಅಲ್ಲು ಅರ್ಜುನ್

    ನೆಗೆಟಿವ್ ಶೇಡ್ ಒಪ್ಪಿಕೊಂಡ ಅಲ್ಲು ಅರ್ಜುನ್

    ಹೀಗೆ ಮಹೇಶ್ ಬಾಬು ಈ ಚಿತ್ರವನ್ನು ತಿರಸ್ಕರಿಸಿದ್ದ ಕಾರಣಕ್ಕೆ ಸುಕುಮಾರ್, ಕಥೆಯನ್ನು ಅಲ್ಲು ಅರ್ಜುನ್ ಬಳಿ ಕೊಂಡೊಯ್ದಿದ್ದಾರೆ. ಪಾತ್ರಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಂಡು ನಟಿಸಲು ಅಲ್ಲು ಅರ್ಜುನ್ ಒಪ್ಪಿಕೊಂಡಿದ್ದಾರೆ.

    ಪ್ರಿನ್ಸ್ ಮಹೇಶ್ ಬಾಬು ಮುಂದಿನ ಸಿನಿಮಾದ ಕಥೆ ಲೀಕ್ಪ್ರಿನ್ಸ್ ಮಹೇಶ್ ಬಾಬು ಮುಂದಿನ ಸಿನಿಮಾದ ಕಥೆ ಲೀಕ್

    '24' ಕಥೆಯನ್ನೂ ತಿರಸ್ಕರಿಸಿದ್ದರು

    '24' ಕಥೆಯನ್ನೂ ತಿರಸ್ಕರಿಸಿದ್ದರು

    ಈ ಹಿಂದೆ ತಮಿಳಿನಲ್ಲಿ ಬಂದಿದ್ದ '24' ಚಿತ್ರದ ಕಥೆಯನ್ನು ಕೂಡ ನಿರ್ದೇಶಕ ವಿಕ್ರಮ್ ಕುಮಾರ್ ಮೊದಲ ಮಹೇಶ್ ಬಾಬು ಅವರಿಗೇ ಹೇಳಿದ್ದರು. ಆದರೆ ಆ ಪಾತ್ರ ನೆಗೆಟಿವ್ ಆಗಿದೆ ಎಂಬ ಕಾರಣಕ್ಕೆ ಮಹೇಶ್ ಬಾಬು ಒಲ್ಲೆ ಎಂದಿದ್ದರು. ಜತೆಗೆ ಪಾತ್ರಕ್ಕಾಗಿ ತಮ್ಮ ದೇಹಾಕಾರ ಮತ್ತು ಮುಖದ ಸ್ವರೂಪಗಳನ್ನು ಬದಲಿಸಿಕೊಳ್ಳಲು ಮಹೇಸ್ ಬಾಬು ಒಪ್ಪಿಕೊಳ್ಳುವುದಿಲ್ಲ.

    TRPಯಲ್ಲಿ 'ಬಾಹುಬಲಿ'ಯನ್ನು ಹಿಂದಿಕ್ಕಿದ ಮಹೇಶ್ ಬಾಬು 'ಸರಿಲೇರು ನೀಕೆವ್ವರು'TRPಯಲ್ಲಿ 'ಬಾಹುಬಲಿ'ಯನ್ನು ಹಿಂದಿಕ್ಕಿದ ಮಹೇಶ್ ಬಾಬು 'ಸರಿಲೇರು ನೀಕೆವ್ವರು'

    ಸುಂದರ ಮುಖವೇ ಜನರಿಗೆ ಇಷ್ಟ

    ಸುಂದರ ಮುಖವೇ ಜನರಿಗೆ ಇಷ್ಟ

    ಜನರು ತಮ್ಮ ಸಿನಿಮಾಗಳನ್ನು ಮತ್ತು ತಮ್ಮನ್ನು ಇಷ್ಟಪಡುವುದು ತಮ್ಮ ಆಕರ್ಷಕ ಮತ್ತು ಸೌಮ್ಯವಾಗಿ ಕಾಣಿಸುವ ಮುಖದಿಂದಾಗಿ ಎಂದು ಮಹೇಶ್ ಬಾಬು ನಂಬಿದ್ದಾರೆ. ಹೀಗಾಗಿಯೇ ಅವರ ಸಿನಿಮಾಗಳಲ್ಲಿ ತಮ್ಮ ದೇಹದ ಸ್ವರೂಪವನ್ನು ಬದಲಿಸಿಕೊಳ್ಳುವುದಿಲ್ಲ.

    ನಿಜಾಮ್ ಚಿತ್ರದ ವಿಫಲ ಪ್ರಯೋಗ

    ನಿಜಾಮ್ ಚಿತ್ರದ ವಿಫಲ ಪ್ರಯೋಗ

    2003ರಲ್ಲಿ ಮಹೇಶ್ ಬಾಬು 'ನಿಜಾಮ್' ಚಿತ್ರದಲ್ಲಿ ತಮ್ಮ ತೆರೆಯ ಮೇಲಿನ ಲುಕ್ ಅನ್ನು ಬದಲಿಸಿಕೊಂಡಿದ್ದರು. ಆದರೆ ಈ ಪ್ರಯೋಗ ನೆಲಕಚ್ಚಿತ್ತು. ಸಿನಿಮಾ ಅಂದುಕೊಂಡಂತೆ ಯಶಸ್ಸು ಗಳಿಸಿರಲಿಲ್ಲ. ಹೀಗಾಗಿ ಅಂದಿನಿಂದ ಎಂದಿಗೂ ಅವರು ಈ ರೀತಿಯ ಪ್ರಯೋಗ ಮತ್ತು ನೆಗೆಟಿವ್ ಶೇಡ್‌ನ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ.

    English summary
    Tollywood actor Mahesh Babu has rejected Allu Arjun starred Pushpa for the negative shades in his role.
    Friday, April 10, 2020, 10:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X