ಅಭಿಮಾನಿಗಳ ಬಳಿ ಮಹೇಶ್ ಬಾಬು ಸವಿನಯ ಮನವಿ

ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ದಕ್ಷಿಣ ಭಾರತ ಸಿನಿಮಾರಂಗದ ಕೆಲವೇ ಕೆಲವು ಪ್ಯಾನ್ ಇಂಡಿಯಾ ನಟರಲ್ಲಿ ಮಹೇಶ್ ಬಾಬು ಸಹ ಒಬ್ಬರು.

Recommended Video

Kushee Ravi Alias Dia Soup Photoshoot | Filmibeat Kannada

ಅವರ ಸಿನಿಮಾಗಳು ಹಿಂದಿ ಸೇರಿದಂತೆ ಬೇರೆ ಭಾಷೆಗಳಿಗೆ ಡಬ್ ಆಗಿ ಪ್ರದರ್ಶನಗೊಂಡು ಒಳ್ಳೆಯ ಹಣವನ್ನೂ ಸಂಪಾದಿಸುತ್ತವೆ. ತೆಲುಗಿನಲ್ಲಿ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ಮಹೇಶ್‌ ಬಾಬುಗೆ ಅಭಿಮಾನಿಗಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಮಹೇಶ್ ಬಾಬು, ಆಗಾಗ್ಗೆ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿರುತ್ತಾರೆ. ಅಭಿಮಾನಿಗಳ ಬಗ್ಗೆ ಸಾಕಷ್ಟು ಕಾಳಜಿ ಹೊಂದಿರುವ ಮಹೇಶ್ ಬಾಬು, ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದಾರೆ.

ಆಗಸ್ಟ್ 9 ರಂದು ಮಹೇಶ್ ಬಾಬು ಹುಟ್ಟಿದ ಹಬ್ಬ

ಆಗಸ್ಟ್ 9 ರಂದು ಮಹೇಶ್ ಬಾಬು ಹುಟ್ಟಿದ ಹಬ್ಬ

ಆಗಸ್ಟ್ 9 ರಂದು ಮಹೇಶ್ ಬಾಬು ಹುಟ್ಟಿದ ಹಬ್ಬ. ಆದರೆ ಈ ಬಾರಿ ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತಿಲ್ಲ ಮಹೇಶ್ ಬಾಬು. ಅಭಿಮಾನಿಗಳು ಸಹ ಹುಟ್ಟಿದ ಹಬ್ಬ ಆಚರಿಸಬೇಡಿ ಎಂದು ಮಹೇಶ್ ಬಾಬು ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.

ಇಂಥಹಾ ಸನ್ನಿವೇಶದಲ್ಲಿ ಹುಟ್ಟುಹಬ್ಬ ಬೇಡ: ಮಹೇಶ್

ಇಂಥಹಾ ಸನ್ನಿವೇಶದಲ್ಲಿ ಹುಟ್ಟುಹಬ್ಬ ಬೇಡ: ಮಹೇಶ್

ಇಡೀಯ ವಿಶ್ವವೇ ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿದೆ. ಇಂಥಹಾ ಸಮಯದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸೂಕ್ತವಲ್ಲ. ಹಾಗಾಗಿ ನನ್ನ ಅಭಿಮಾನಿಗಳು ನನ್ನ ಹುಟ್ಟುಹಬ್ಬದಂದು ಯಾವುದೇ ಕಾರ್ಯಕ್ರಮ ಆಯೋಜಿಸಬೇಡಿ, ಯಾವುದೇ ಸಂಭ್ರಮ ಆಚರಿಸಬೇಡಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಜಾಗೃತೆಯಾಗಿರಿ ಎಂದು ಮನವಿ ಮಾಡಿದ್ದಾರೆ.

ಕುಟುಂಬದೊಂದಿಗೆ ಸಮಯ ಕಳೆದ ಮಹೇಶ್

ಕುಟುಂಬದೊಂದಿಗೆ ಸಮಯ ಕಳೆದ ಮಹೇಶ್

ಕುಟುಂಬದ ಬಗ್ಗೆ ಅತಿಯಾದ ಕಾಳಜಿ ಹೊಂದಿರುವ ಮಹೇಶ್ ಬಾಬು ಸಹ ಕೊರೊನಾ ಸಮಯದಲ್ಲಿ ಹೊರಗೆ ಬಂದೇ ಇಲ್ಲ. ಮನೆಯಲ್ಲಿಯೇ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಅದರಲ್ಲಿಯೂ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಮಹೇಶ್ ಬಾಬು.

ಸರ್ಕಾರು ವಾರಿ ಪಾಠ ಸಿನಿಮಾ ಸೆಟ್ಟೇರಿದೆ

ಸರ್ಕಾರು ವಾರಿ ಪಾಠ ಸಿನಿಮಾ ಸೆಟ್ಟೇರಿದೆ

ಮಹೇಶ್ ಬಾಬು ಅವರ ಕೊನೆಯ ಸಿನಿಮಾ ಸರಿಲೇರು ನೀಕೆವ್ವರು ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಪ್ರಸ್ತುತ 'ಸರ್ಕಾರು ವಾರಿ ಪಾಠ' ಸಿನಿಮಾಕ್ಕೆ ಸಹಿ ಹಾಕಿದ್ದು, ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಪ್ರಾರಂಭವಾಗಬೇಕಿದೆ.

More from Filmibeat

English summary
Actor Mahesh Babu request his fans on social media not to celebrate his birthday due to coronavirus crisis.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X