Don't Miss!
- Finance ನೂಡಲ್ಸ್ ಪ್ಯಾಕೆಟ್ ಒಳಗಿತ್ತು ವಜ್ರಗಳ ರಾಶಿ, ಬರೋಬ್ಬರಿ 6.46 ಕೋಟಿ ರೂ. ಮೌಲ್ಯದ ಚಿನ್ನ, ಡೈಮಂಡ್ ವಶ!
- News ಸಿದ್ದರಾಮಯ್ಯರು ಸಿಎಂ ಆದಾಗ ವಿಜೃಂಭಿಸುವ ದೇಶದ್ರೋಹಿಗಳು: ಶೋಭಾ ಕರಂದ್ಲಾಜೆ ಹೇಳಿದ್ದೇನು?
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
TRPಯಲ್ಲಿ 'ಬಾಹುಬಲಿ'ಯನ್ನು ಹಿಂದಿಕ್ಕಿದ ಮಹೇಶ್ ಬಾಬು 'ಸರಿಲೇರು ನೀಕೆವ್ವರು'
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಸಿನಿಮಾ ರಿಲೀಸ್ ಆಗಿ ತಿಂಗಳುಗಳೆ ಆಗಿವೆ. ಟಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿರುವ ಸರಿಲೇರು ನೀಕೆವ್ವರು ಸಿನಿಮಾ ಈ ಮತ್ತೊಂದು ದಾಖಲೆ ನಿರ್ಮಿಸಿದೆ. ಹೌದು, ಟಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾ ಆಗಿ ಹೊರಹೊಮ್ಮಿರುವ ಸರಿಲೇರು ನೀಕೆವ್ವರು ಸಿನಿಮಾ ಟಿವಿ ಟಿ ಆರ್ ಪಿ ವಿಚಾರದಲ್ಲೂ ಮಹೇಶ್ ಬಾಬು ಕಿಂಗ್ ಆಗಿದ್ದಾರೆ.
ಇತ್ತೀಚಿಗೆ ಸರಿಲೇರು ನೀಕೆವ್ವರು ಸಿನಿಮಾ ಟಿವಿಯಲ್ಲಿ ಪ್ರಸಾರವಾಗಿತ್ತು. ಈಗಾಗಲೆ ದಾಖಲೆ ನಿರ್ಮಿಸಿರುವ ಮಹೇಶ್ ಬಾಬು ಸಿನಿಮಾ ಈಗ, ಈ ಹಿಂದೆ ಪ್ರಸಾರವಾದ ಎಲ್ಲಾ ಸಿನಿಮಾಗಳ ಟಿ ಆರ್ ಪಿಯನ್ನು ಬ್ರೇಕ್ ಮಾಡಿ ಮೊದಲ ಸ್ಥಾನ ಗೆಟ್ಟಿಸಿಕೊಂಡಿದೆ. ಮುಂದೆ ಓದಿ..
ವಿಜಯ್ ಮತ್ತು ಮಹೇಶ್ ಬಾಬು ಅಭಿಮಾನಿಗಳ ವಾರ್: ಕೊರೊನಾ ನಡುವೆಯೂ ಟ್ವಿಟ್ಟರ್ ನಲ್ಲಿ ಟ್ರೆಂಡ್
ಬಾಹುಬಲಿ ದಾಖಲೆಯನ್ನು ಮುರಿದ ಮಹೇಶ್ ಬಾಬು
ಅತಿ ಹೆಚ್ಚು ಟಿ ಆರ್ ಪಿ ಪಡೆಯುವ ಜೊತೆಗೆ ಬಾಹುಬಲಿ ಸಿನಿಮಾದ ದಾಖಲೆಯನ್ನು ಪುಡಿ ಪುಡಿ ಮಾಡಿದೆ. ಬಾಹುಬಲಿ-2 ಸಿನಿಮಾ ರಿಲೀಸ್ ಆಗಿ ಮೂರು ವರ್ಷಗಳಾಗಿದ್ದು, ಈ ಮೂರು ವರ್ಷಗಳಲ್ಲಿಯೂ ಬಾಹುಬಲಿ ಟಿ ಆರ್ ಪಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ಸಾಕಷ್ಟು ದಾಖಲೆಗಳನ್ನು ನಿರ್ಮಿಸಿರುವ ಬಾಹುಬಲಿ ಟಿ ಆರ್ ಪಿಯಲ್ಲೂ ಕಿಂಗ್ ಆಗಿತ್ತು. ಆದರೀಗ ಮಹೇಶ್ ಬಾಬು ಸಿನಿಮಾ ಪ್ರಭಾಸ್ ದಾಖಲೆಯನ್ನು ಮುರಿದು ಹಾಕಿದೆ.
ಸರಿಲೇರು ನೀಕೆವ್ವರು ಟಿ ಆರ್ ಪಿ ಎಷ್ಟು?
ಇತ್ತೀಚಿಗೆ ಟಿವಿಯಲ್ಲಿ ಪ್ರಸಾರವಾದ ಸರಿಲೇರು ನೀಕೆವ್ವರು ಸಿನಿಮಾ 23.4 ಟಿ ಆರ್ ಪಿ ಪಡೆದಿದೆ. ಅಂದ್ಹಾಗೆ ಇದುವರೆಗೂ ಮೊದಲ ಸ್ಥಾನದಲ್ಲಿದ್ದ ಬಾಹುಬಲಿ 22.7 ಟಿ ಆರ್ ಪಿ ಪಡೆದಿತ್ತು. ಒಂದು ಪಾಯಿಂಟ್ ಅಂತರದಲ್ಲಿ ಈಗ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಮೊದಲ ಸ್ಥಾನದಲ್ಲಿದೆ.
ಚಿರಂಜೀವಿ ಸಿನಿಮಾದಿಂದ ಹೊರಬಂದ ಮಹೇಶ್ ಬಾಬು: ಅಸಲಿ ಕಾರಣ ಬಹಿರಂಗ
ಹೆಚ್ಚು ಟಿ ಆರ್ ಪಿ ಪಡೆದಿರುವ ಸಿನಿಮಾಗಳು
ಟಾಲಿವುಡ್ ನಲ್ಲಿ ಹೆಚ್ಚು ಟಿ ಆರ್ ಪಿ ಪಡೆದು ಮೊದಲ ಸ್ಥಾನದಲ್ಲಿ ಈಗ ಸರಿಲೇರು ನೀಕೆವ್ವರು ಸಿನಿಮಾವಿದೆ. 23.4 ಟಿ ಆರ್ ಪಿಯೊಂದಿಗೆ ಮೊದಲ ಸ್ಥಾನ ಪಡೆದರೆ, 22.7 ಟಿ ಆರ್ ಪಿಯೊಂದಿಗೆ ಬಾಹುಬಲಿ-2 ಎರಡನೇ ಸ್ಥಾನದಲ್ಲಿದೆ. ಇನ್ನು ಮೂರನೆ ಸ್ಥಾನದಲ್ಲಿ ಶ್ರೀಮಂತಡು(22.5)ಸಿನಿಮಾವಿದೆ. ನಾಲ್ಕನೆ ಸ್ಥಾನದಲ್ಲಿ ಬಾಹುಬಲಿ (21.7)ಸಿನಿಮಾವಿದೆ.
ಲಾಕ್ ಡೌನ್ ಹಿನ್ನಲೆ ಹೆಚ್ಚಿದ ಟಿ ಆರ್ ಪಿ
ಸದ್ಯ ಲಾಕ್ ಡೌನ್ ಇರುವ ಕಾರಣ ಜನ ಮನೆಯಲ್ಲಿಯೆ ಇದ್ದಾರೆ. ಹಾಗಾಗಿ ಸರಿಲೇರು ನೀಕೆವ್ವರು ಸಿನಿಮಾಗೆ ಹೆಚ್ಚು ಟಿ ಆರ್ ಪಿ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಸಿನಿಮಾ ಪ್ರಸಾರ ಮಾಡಿರುವುದು ಉತ್ತಮ ನಿರ್ಧಾರ ಎಂದು ಅನೇಕರು ಹೇಳುತ್ತಿದ್ದಾರೆ.
'ಬಿಗ್ ಬಾಸ್' ಮೂಲಕ ಮಹೇಶ್ ಬಾಬು ಕಿರುತೆರೆಗೆ ಎಂಟ್ರಿ ಕೊಡುತ್ತಾರಾ?
ಮಹೇಶ್ ಬಾಬು ಮತ್ತು ರಶ್ಮಿಕಾ ಅಭಿನಯದ ಸಿನಿಮಾ
ಕಲೆಕ್ಷನ್ ವಿಚಾರದಲ್ಲಿಯೂ ದಾಖಲೆ ನಿರ್ಮಿಸಿರುವ ಸರಿಲೇರು ನೀಕೆವ್ವರು ನಿರ್ದೇಶಕ ಅನಿಲ್ ರವಿಪುಡಿ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ಚಿತ್ರದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ರಶ್ಮಿಕಾ ಮಹೇಶ್ ಬಾಬು ಜೊತೆ ತೆರೆಹಂಚಿಕೊಂಡಿದ್ದಾರೆ. ಜನವರಿಯಲ್ಲಿ ರಿಲೀಸ್ ಆದ ಸಿನಿಮಾ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಿದೆ.