ಹೋಗಿ ಹೋಗಿ ಪ್ರಭಾಸ್ ಜೊತೆ ಮಹೇಶ್ ಬಾಬು ಫೈಟ್: ಟಾಲಿವುಡ್ ಪ್ರಿನ್ಸ್‌ಗೆ ಇದೆಲ್ಲಾ ಬೇಕಿತ್ತಾ?

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ ಮುಂದಿನ ಸಿನಿಮಾ ಬರೋಬ್ಬರಿ 8 ತಿಂಗಳು ತಡವಾಗಿ ತೆರೆಗೆ ಬರ್ತಿದೆ. ಇದು ಟಾಲಿವುಡ್ ಪ್ರಿನ್ಸ್ 28ನೇ ಸಿನಿಮಾ. ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಹಾಗಾಗಿ ಚಿತ್ರಕ್ಕೆ SSMB28 ಅನ್ನೋ ಟೆಂಟಿಟೀವ್ ಟೈಟಲ್‌ನಲ್ಲಿ ಚಿತ್ರೀಕರಣ ನಡೀತಿದೆ, ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ಮುಂದಿನ ತಿಂಗಳೇ ಸಿನಿಮಾ ರಿಲೀಸ್ ಆಗಬೇಕಿತ್ತು. 6 ತಿಂಗಳ ಹಿಂದೆ ಚಿತ್ರತಂಡವೇ ರಿಲೀಸ್ ಡೇಟ್ ಘೋಷಿಸಿತ್ತು. ಆದರೆ ಸಿನಿಮಾ ಶೂಟಿಂಗ್ ಶುರುವಾಗುವುದು ತಡವಾಯಿತು. ಹಾಗಾಗಿ ರಿಲೀಸ್ ಡೇಟ್ ಮುಂದೂಡುವಂತಾಯಿತು. ಈಗಾಗಲೇ ಮಹೇಶ್ ಬಾಬು- ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ 2 ಸಿನಿಮಾ ಬಂದಿದೆ. 'ಅತಡು' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 'ಖಲೇಜಾ' ಅಷ್ಟಾಗಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿರಲಿಲ್ಲ. ಇವರಿಬ್ಬರು ಹ್ಯಾಟ್ರಿಕ್ ಕಾಂಬಿನೇಷನ್‌ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ.

Mahesh Babus SSMB28 Vs Prabhass Project K: Fans predict who will win box office battle

ಹಾರಿಕಾ ಮತ್ತು ಹಾಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ರಾಧಾಕೃಷ್ಣ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಚಿತ್ರೀಕರಣ ನಡೀತಿದೆ. ಇದೀಗ ಸಿನಿಮಾ ಹೊಸ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಮುಂದಿನ ವರ್ಷ ಜನವರಿ 13ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಹೇಳಿದೆ. ಈ ಸುದ್ದಿ ಕೇಳಿ ಸೂಪರ್ ಸ್ಟಾರ್ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದಾರೆ.

ಟಾಲಿವುಡ್ ಪ್ರಿನ್ಸ್ ನಟನೆಯ 'ಸರ್ಕಾರಿವಾರು ಪಾಟ' ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಆಗ್ತಾ ಬಂತು. ಮತ್ತೊಂದು ಚಿತ್ರಕ್ಕೆ ಇನ್ನು ವರ್ಷ ಕಾಯಬೇಕಾ ಎನ್ನುತ್ತಿದ್ಧಾರೆ. ಕೆಲವರು ಮಾತ್ರ ಲೇಟ್ ಆಗಿ ಬಂದರೂ ಲೇಟೆಸ್ಟ್ ಆಗಿ ಸೂಪರ್ ಸ್ಟಾರ್ ಬರ್ತಾರೆ ಎನ್ನುತ್ತಿದ್ದಾರೆ. ಇದೆಲ್ಲದರ ನಡುವೆ ಹೋಗಿ ಹೋಗಿ ಪ್ರಭಾಸ್ ಜೊತೆ ಮಹೇಶ್ ಬಾಬು ಯಾಕೆ ಗುದ್ದಾಡುತ್ತಿದ್ದಾರೆ ಎಂದು ಕೇಳುತ್ತಿದ್ದಾರೆ. ಪ್ರಭಾಸ್ ನಟನೆಯ 'ಪ್ರಾಜೆಕ್ಟ್ K' ಚಿತ್ರವನ್ನು ಕೂಡ ಸಂಕ್ರಾಂತಿಗೆ ರಿಲೀಸ್ ಮಾಡೋದಾಗಿ ಹೇಳಿದ್ದಾರೆ. ಹಾಗಾಗಿ ಎರಡೂ ಸಿನಿಮಾನ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಗ್ಯಾರೆಂಟಿ ಎನ್ನಲಾಗ್ತಿದೆ.

Mahesh Babus SSMB28 Vs Prabhass Project K: Fans predict who will win box office battle

ಅಂದಾಜು 400ರಿಂದ 500 ಕೋಟಿ ರೂ. ಬಜೆಟ್‌ನಲ್ಲಿ 'ಪ್ರಾಜೆಕ್ಟ್ K' ಸಿನಿಮಾ ನಿರ್ಮಾಣ ಆಗುತ್ತಿದೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆರಂತಹ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ನಾಗ್ ಅಶ್ವಿನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಇಷ್ಟು ದೊಡ್ಡ ಸಿನಿಮಾ ಮುಂದೆ ಮಹೇಶ್ ಬಾಬು SSMB28 ಬರೋದು ಬೇಕಿತ್ತಾ ಎನ್ನುವುದು ಕೆಲವರ ಪ್ರಶ್ನೆ. ಸಂಕ್ರಾಂತಿ ದೊಡ್ಡ ಸಿನಿಮಾ ಒಟ್ಟಿಗೆ ಬಂದರೂ ಗೆಲ್ತಾವೆ. ಆದರೆ ತೀರಾ ಇಷ್ಟು ದೊಡ್ಡ ಸಿನಿಮಾಗಳು ಬರೋದು ಸರಿಯಲ್ಲ ಎನ್ನುವುದು ಕೆಲವರ ವಾದ.

ಈ ವರ್ಷ ಸಂಕ್ರಾಂತಿಗೆ ತೆಲುಗಿನ 2, ತಮಿಳಿನ 2 ಸಿನಿಮಾಗಳು ರಿಲೀಸ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿದ್ದವು. 4 ಸಿನಿಮಾಗಳು ಗೆಲುವಿನ ದಡ ಸೇರಿದ್ದವು. ಆದರೆ ಈ ನಾಲ್ಕು ಸಿನಿಮಾಗಳಿಗಿಂತ 'ಪ್ರಾಜೆಕ್ಟ್ K' ಹಾಗೂ 'SSMB28' ಬಹಳ ದೊಡ್ಡ ಸಿನಿಮಾಗಳು. ಇನ್ನು ಸಂಕ್ರಾಂತಿ ಸಂಭ್ರಮದಲ್ಲಿ ತಮಿಳು ಸಿನಿಮಾಗಳು ಕೂಡ ಬರ್ತಾವೆ. ಹಾಗಾಗಿ ಇಂತಹ ಬಾಕ್ಸಾಫೀಸ್ ಕ್ಲ್ಯಾಶ್ ಬೇಕಾ ಎನ್ನುವುದು ಕೆಲವರ ಲೆಕ್ಕಾಚಾರ. ಈ ಹಿಂದೆ ಯಾವತ್ತು ಪ್ರಭಾಸ್- ಮಹೇಶ್ ಬಾಬು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಎದುರು ಬದಿರಾಗಿರಲಿಲ್ಲ. ಈ ಸಂಕ್ರಾಂತಿ ಭಾರೀ ಕಾದಾಟ ನಡೆಯುತ್ತೆ ಎನ್ನುವ ಅಂದಾಜಿದೆ.

Mahesh Babus SSMB28 Vs Prabhass Project K: Fans predict who will win box office battle

'SSMB28' ಚಿತ್ರದಲ್ಲಿ ಕನ್ನಡ ನಟಿ ಶ್ರೀಲೀಲಾ 2ನೇ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮನ್ ಸಂಗೀತ, ಪಿ. ಎಸ್ ವಿನೋದ್ ಛಾಯಾಗ್ರಹಣವಿದೆ. ಈಗಾಗಲೇ ಒಂದೆರಡು ಶೆಡ್ಯೂಲ್ ಶೂಟಿಂಗ್ ಕೂಡ ಮುಗಿದಿದೆ. ಎರಡೂ ಸಿನಿಮಾಗಳು ಹೇಳಿದಂತೆ ಮುಂದಿನ ವರ್ಷ ಸಂಕ್ರಾಂತಿಗೆ ಬಾಕ್ಸಾಫೀಸ್ ಅಖಾಡಕ್ಕೆ ಇಳಿತ್ತಾವಾ? ಇಲ್ಲ ಯಾವಾದರೂ ಒಂದು ಸಿನಿಮಾ ಸೈಡಿಗೆ ಹೋಗುತ್ತಾ ಕಾದು ನೋಡಬೇಕು. ಇನ್ನು ರಾಮ್‌ಚರಣ್ ನಟನೆಯ RC15 ಕೂಡ ಸುಗ್ಗಿ ಹಬ್ಬಕ್ಕೆ ರಿಲೀಸ್ ಆಗುತ್ತೆ ಎನ್ನಲಾಗ್ತಿದೆ.

More from Filmibeat

English summary
Mahesh Babu's SSMB28 Vs Prabhas's Project K: Fans predict who will win box office battle. SSMB28 in Theaters From 13th January 2024 Worldwide. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X