ಮಹೇಶ್ ಬಾಬು ಪತ್ನಿ ನಮ್ರತಾ ಹಾಕಿಸಿಕೊಂಡಿರುವ ಟ್ಯಾಟೂ ವಿಷಯ ಬಹಿರಂಗ

ಖ್ಯಾತ ನಟ ಮಹೇಶ್ ಬಾಬು ಪತ್ನಿ ನಮ್ರತಾ ಒಂದು ಕಾಲದಲ್ಲಿ ಟಾಪ್ ನಟಿ. ಆದರೆ ಮಹೇಶ್ ಬಾಬು ಅವರೊಟ್ಟಿಗೆ ವಿವಾಹವಾದ ಬಳಿಕ ನಟನೆಯಿಂದ ದೂರ ಉಳಿದರು.

ಹೆಚ್ಚಿಗೆ ಸಿನಿಮಾ ಸಮಾರಂಭಗಳಲ್ಲಿ ಕಾಣಿಸಿಕೊಳ್ಳದೇ ಹೊರ ಜಗತ್ತಿಗೆ ಬಹುಮಟ್ಟಿಗೆ ಅಜ್ಞಾತವಾಗಿದ್ದ ನಮ್ರತಾ ಸಾಮಾಜಿಕ ಜಾಲತಾಣಗಳ ಮೂಲಕ ಇತ್ತೀಚೆಗೆ ಮತ್ತೆ ಸೋಷಿಯಲ್ ಜೀವನಕ್ಕೆ ಮರಳಿದಂತಿದ್ದಾರೆ.

ಇತ್ತೀಚೆಗೆ ಅಭಿಮಾನಿಗಳಿಂದ ಪ್ರಶ್ನೆಗಳನ್ನು ಆಹ್ವಾನಿಸಿದ್ದ ನಮ್ರತಾ, ಅಭಿಮಾನನಿಗಳು ಕೇಳಿದ ಬಹುತೇಕ ಎಲ್ಲಾ ಪ್ರಶ್ನೆಗಳಿಗೂ ಹಿಂಜರಿಯದೆ ಉತ್ತರಿಸಿದ್ದಾರೆ. ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡುವಾಗಲೇ ನಮ್ರತಾ ಕೈ ಮೇಲಿರುವ ಟ್ಯಾಟೂ ವಿಷಯ ಬಹಿರಂಗಗೊಂಡಿದೆ.

ಟ್ಯಾಟೂ ತೋರಿಸಿ ಎಂದು ಸವಾಲು ಹಾಕಿದ ಅಭಿಮಾನಿ

ಟ್ಯಾಟೂ ತೋರಿಸಿ ಎಂದು ಸವಾಲು ಹಾಕಿದ ಅಭಿಮಾನಿ

ನಮ್ರತಾ ಅವರು ಕೈಮೇಲೆ ಟ್ಯಾಟೂ ಒಂದನ್ನು ಹಾಕಿಸಿಕೊಂಡಿದ್ದಾರೆ. ಈ ವಿಷಯ ಬಹುತೇಕರಿಗೆ ಗೊತ್ತಿರಲಿಲ್ಲ. ಆದರೆ ಪ್ರಶ್ನೋತ್ತರದ ವೇಳೆ ಅಭಿಮಾನಿಯೊಬ್ಬ, 'ಮೇಡಂ ನಿಮ್ಮ ಕೈ ಮೇಲಿರುವ ಟ್ಯಾಟೂತೋರಿಸಿ' ಎಂದು ಕೇಳಿದ್ದಾನೆ. ಇದಕ್ಕೆ ನಮ್ರತಾ ಟ್ಯಾಟೂ ಚಿತ್ರವನ್ನು ಕಳಿಸಿದ್ದಾರೆ.

ಮೂವರು ವ್ಯಕ್ತಿಗಳ ಹೆಸರು ಟ್ಯಾಟೂ

ಮೂವರು ವ್ಯಕ್ತಿಗಳ ಹೆಸರು ಟ್ಯಾಟೂ

ನಮ್ರತಾ ಕೈ ಮೇಲೆ ಮೂವರು ವ್ಯಕ್ತಿಗಳ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಮೊದಲನೇಯದು ಪತಿ ಮಹೇಶ್ ಬಾಬು, ಅದರ ಕೆಳಗೆ ಮಕ್ಕಳಾದ ಸಿತಾರಾ ಮತ್ತು ಗೌತಮ್ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಹೆಸರುಗಳು ಹಿಂದಿ ಭಾಷೆಯಲ್ಲಿ ಬರೆದಿರುವಂತೆ ಕಾಣುತ್ತದೆಯಾದರೂ ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದೆ.

2005 ರಲ್ಲಿ ಮದುವೆಯಾದ ಮಹೇಶ್-ನಮ್ರತಾ

2005 ರಲ್ಲಿ ಮದುವೆಯಾದ ಮಹೇಶ್-ನಮ್ರತಾ

ಮಹೇಶ್ ಬಾಬು ಹಾಗೂ ನಮ್ರತಾ 2005 ರಲ್ಲಿ ಮದುವೆಯಾದರು ಅವರಿಗೆ ಸಿತಾರಾ ಮತ್ತು ಗೌತಮ್ ಎಂಬ ಇಬ್ಬರು ಮಕ್ಕಳಿದ್ದಾರೆ. ಗೌತಮ್ ಈಗಾಗಲೇ ನೇನೊಕ್ಕಿಡಿನೇ ಸಿನಿಮಾದಲ್ಲಿ ಮಹೇಶ್ ಬಾಬು ಅವರೊಟ್ಟಿಗೆ ನಟಿಸಿದ್ದಾರೆ.

ನಮ್ರತಾ ಸಾಕಷ್ಟು ವಿಷಯ ಮಾತನಾಡಿದ್ದಾರೆ

ನಮ್ರತಾ ಸಾಕಷ್ಟು ವಿಷಯ ಮಾತನಾಡಿದ್ದಾರೆ

ಅಭಿಮಾನಿಗಳೊಂದಿಗೆ ಪ್ರಶ್ನೋತ್ತರದಲ್ಲಿ ನಮ್ರತಾ ಸಾಕಷ್ಟು ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ. ಮಹೇಶ್ ಬಾಬು ಅಭಿನಯದ ಇಷ್ಟದ ಸಿನಿಮಾ, ಮಕ್ಕಳು, ಲಾಕ್‌ಡೌನ್, ಇನ್ನೂ ಹಲವ ವಿಷಯಗಳ ಬಗ್ಗೆ ಅವರು ಮಾತನಾಡಿದ್ದಾರೆ.

More from Filmibeat

English summary
Actor Mahesh Babu's wife Namratha Shirodkar showed her tattoo to the fans in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X