ಪುತ್ರಿ ಸಿತಾರ ಹೆಸರಿನಲ್ಲಿ ಮೋಸ, ರೊಚ್ಚಿಗೆದ್ದ ಮಹೇಶ್ ಬಾಬು ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಿನ್ಸ್ ಪತ್ನಿ..!

ಸೋಶಿಯಲ್ ಮೀಡಿಯಾ ಮನುಷ್ಯನನ್ನು ಹೆಚ್ಚು ಕಂಟ್ರೋಲ್ ಮಾಡುತ್ತಿರುವ ಮಾಧ್ಯಮ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ. ಇನ್ನು ಈ ವೇದಿಕೆಯ ಮೂಲಕವೇ ಸಿನಿ ತಾರೆಯರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಜೊತೆಯಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಈಗೀಗ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ಸಾಕಷ್ಟು ಮಂದಿ ಅನೇಕರಿಗೆ ಮೋಸ ಮಾಡುವುದನ್ನೇ ವೃತ್ತಿಯನ್ನಾಗಿಸಿ ಸಾಕಷ್ಟು ಜನರ ಬಾಳಿಗೆ ಕಗ್ಗಂಟಾಗಿ ಉಳಿದಿದ್ದಾರೆ.

ಇಂತಹ ಸಾಕಷ್ಟು ಪ್ರಕರಣಗಳು ಈಗೀಗ ಹೆಚ್ಚು ಬೆಳಕಿಗೆ ಬರುತ್ತಿದ್ದು, ಸೈಬರ್ ಪೊಲೀಸರು ಸರಿಯಾಗಿಯೇ ಅಂತಹವರಿಗೆ ಬಿಸಿ ಮುಟ್ಟಿಸುವ ಕಾಯಕದಲ್ಲಿಯೂ ನಿರತರಾಗಿದ್ದಾರೆ. ಈ ಮಧ್ಯೆ ಪೊಲೀಸರು ಹಂಗೆ ತಿರುಗಿ ಹಿಂಗೆ ತಿರುಗುವಷ್ಟರಲ್ಲಿ ಪೊಲೀಸರ ಕಣ್ಣಿಗೂ ಮಣ್ಣೆರಚಿ ಅಲ್ಲಿಂದಿಲ್ಲೊಂದು ಪ್ರಕರಣಗಳು ನಡೆದುಹೋಗುತ್ತದೆ. ಸದ್ಯ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಪುತ್ರಿ ಸಿತಾರ ಗೆ ಇಂಥಹದ್ದೇ ಒಂದು ಅನುಭವ ಆಗಿದೆ

Mahesh Babu says daughter Sitaras identity is being misused, issues warning

ಹೌದು, ಚಿತ್ರರಂಗಕ್ಕೆ ಕಾಲಿಡುವ ಮುನ್ನವೇ ಈಗಾಗಲೇ ಮನೆ ಹಾಗೂ ಮನಗಳನ್ನ ತಲುಪಿರುವ ಸಿತಾರ ಹೆಸರಿನಲ್ಲಿ ನಕಲಿ ಅಕೌಂಟ್‌ವೊಂದನ್ನ ಸೃಷ್ಟಿ ಮಾಡಲಾಗಿದೆ. ಪುತ್ರಿಯ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣದ ಬಗ್ಗೆ ಕೂಡ ಮಹೇಶ್ ಬಾಬು ಹಾಗೂ ನಮ್ರತಾ ಅವರ ಗಮನಕ್ಕೆ ಬಂದಿದೆ.

ಈ ಕಾರಣಕ್ಕೆ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿರುವ, ಮಹೇಶ್ ಬಾಬು ಪತ್ನಿ ನಮ್ರತಾ ಪುತ್ರಿ ಸಿತಾರಾ ಘಟ್ಟಮನೇನಿ ಹೆಸರಿನಲ್ಲಿ ಇತರರು ನಡೆಸುತ್ತಿರುವ ಖಾತೆಗಳ ಬಗ್ಗೆ ದೂರು ನೀಡಿದ್ದಾರೆ. ಆ ಖಾತೆಗಳಿಂದ ವ್ಯಾಪಾರ ಮತ್ತು ಜಾಹೀರಾತುಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಈ ರೀತಿ ಮಾಡುವವರನ್ನು ಕೂಡಲೇ ಬಂಧಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ

Mahesh Babu says daughter Sitaras identity is being misused, issues warning

ಪುತ್ರಿಯ ಹೆಸರಿನಲ್ಲಿ ನಡೆಯುತ್ತಿರುವ ನಯವಂಚನೆ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ಹೊರಹಾಕಿರುವ ನಮ್ರತಾ, ಈ ಕುರಿತು ಹಿಂದೆಯೇ ಎಚ್ಚರಿಕೆಯನ್ನೂ ನೀಡಲಾಗಿತ್ತು. ಇಂತಹ ವಿಷಯಗಳನ್ನು ಯಾರೂ ನಂಬಬೇಡಿ, ತಮ್ಮ ಪುತ್ರಿ ಸಿತಾರಾ ಘಟ್ಟಮನೇನಿ ಬಳಿ ಇರುವುದು ಒಂದೇ ಅಧಿಕೃತ ಖಾತೆ. ಬಾಕಿ ಎಲ್ಲವೂ ನಕಲಿ ಖಾತೆಗಳಾಗಿವೆ" ಎಂದು ಸ್ಪಷ್ಟಪಡಿಸಿದ್ದಾರೆ.

ಅಂದ್ಹಾಗೇ ಕಳೆದ ವರ್ಷ ಸಿತಾರಾ ಆಭರಣ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದರು. ಆ ಜಾಹೀರಾತಿನಿಂದ ಬಂದ ಸಂಭಾವನೆಯನ್ನು ಚಾರಿಟಿಗೆ ದಾನ ಮಾಡುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಇನ್ನೂ ಮಹೇಶ್ ಬಾಬು ಅವರ ಸಾಮಾಜಿಕ ಕೆಲಸದ ಬಗ್ಗೆ ನಿಮಗೆ ಈಗಾಗ್ಲೇ ಗೊತ್ತಿರಬೇಕು. ಆದರೂ ಒಮ್ಮೆ ನೆನಪು ಮಾಡಿಕೊಳ್ಳುವುದಾದರೆ, ಎರಡು ಗ್ರಾಮಗಳನ್ನು ದತ್ತು ಪಡೆದುಕೊಂಡು, ಅವುಗಳ ಅಭಿವೃದ್ಧಿ ಮಾಡಿದ್ದಾರೆ. ಅನೇಕ ಬಡ ಮಕ್ಕಳ ಹೃದಯ ಸಂಬಂಧಿ ಚಿಕಿತ್ಸೆಯನ್ನು ಕೂಡ ಮಹೇಶ್ ಬಾಬು ಉಚಿತವಾಗಿ ಮಾಡಿಸುತ್ತಿದ್ದಾರೆ.

More from Filmibeat

English summary
Mahesh Babu and Namrata Shirodkar have released a statement addressing the misuse of their daughter Sitara Ghattamaneni's identity on social media by fraudsters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X