twitter
    For Quick Alerts
    ALLOW NOTIFICATIONS  
    For Daily Alerts

    ಬಾಲಕೃಷ್ಣಗೆ ನಾಯಕಿ ಆಗಬೇಕಿತ್ತು ಮಹೇಶ್ ಬಾಬು ಸಹೋದರಿ! ತಡೆದಿದ್ದು ಯಾರು?

    |

    ನಟ ಮಹೇಶ್ ಬಾಬು ತೆಲುಗಿನ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರು. ಮಹೇಶ್ ಬಾಬು ತಂದೆ ಕೃಷ್ಣ ಸಹ ಸೂಪರ್ ಸ್ಟಾರ್ ಆಗಿದ್ದವರೆ. ಅವರನ್ನು ಕರೆಯುತ್ತಿದ್ದಿದ್ದೇ ಸೂಪರ್ ಸ್ಟಾರ್ ಕೃಷ್ಣ ಎಂದು.

    ಸೂಪರ್ ಸ್ಟಾರ್‌ ಕೃಷ್ಣಗೆ ಒಟ್ಟು ಐದು ಜನ ಮಕ್ಕಳು, ಆದರೆ ಇವರಲ್ಲಿ ಸಿನಿಮಾದಲ್ಲಿ ನೆಲೆ ನಿಂತಿದ್ದು ಮಹೇಶ್ ಬಾಬು ಮಾತ್ರ. ಕೃಷ್ಣರ ಮಕ್ಕಳು ಕೆಲವರು ಸಿನಿಮಾ ವೃತ್ತಿ ಪ್ರಯತ್ನಿಸಿದರಾದರೂ ನೆಲೆ ನಿಲ್ಲಲಿಲ್ಲ. ನೆಲೆ ನಿಲ್ಲಲು ಬಿಡಲಿಲ್ಲ ಎಂಬ ಮಾತೂ ಸಹ ಹೊಂದಿಕೆಯಾಗುತ್ತದೆ.

    ಸ್ಟಾರ್ ನಟರ ಮಕ್ಕಳು ನಟರಾಗುತ್ತಾರೆ ಆದರೆ ನಟರ ಹೆಣ್ಣು ಮಕ್ಕಳಿಗೆ ಈ ಭಾಗ್ಯವಿಲ್ಲ. ದಕ್ಷಿಣ ಭಾರತದಲ್ಲಿ ಇದೊಂದು ಸಂಪ್ರದಾಯ ಮೊದಲಿನಿಂದಲೂ ಬಂದಿದೆ. ಕನ್ನಡದಲ್ಲೂ ಸಹ. ಆದರೆ ಸೂಪರ್ ಸ್ಟಾರ್‌ ಕೃಷ್ಣರ ಮಗಳು, ತಾನು ನಟಿ ಆಗಬೇಕು ಎಂದು ಹಠ ಹಿಡಿದಿದ್ದಳು. ಆದರೆ ಆಕೆಯನ್ನು ತಡೆಯಲಾಗಿತ್ತು.

    ಕೃಷ್ಣಗೆ ಐವರು ಮಕ್ಕಳು

    ಕೃಷ್ಣಗೆ ಐವರು ಮಕ್ಕಳು

    ಸೂಪರ್ ಸ್ಟಾರ್ ಕೃಷ್ಣರ ಐವರು ಮಕ್ಕಳಲ್ಲಿ ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು. ಮೊದಲ ಪುತ್ರ ರಮೇಶ್ ಬಾಬು ನಿರ್ಮಾಪಕ ಆಗಿದ್ದರು. ಮಹೇಶ್ ಬಾಬು ಎಲ್ಲರಿಗೂ ಗೊತ್ತಿರುವಂತೆ ಸ್ಟಾರ್ ನಟ. ಮೂವರು ಹೆಣ್ಣು ಮಕ್ಕಳಲ್ಲಿ ಪದ್ಮಾವತಿ, ಆಂಧ್ರದ ಖ್ಯಾತ ಬ್ಯುಸಿನೆಸ್‌ಮ್ಯಾನ್ ಗಲ್ಲಾ ಜಯದೇವ್ ಅವರನ್ನು ವಿವಾಹವಾದರು. ಮಂಜುಳಾ ನಿರ್ಮಾಪಕ ಸಂಜಯ್ ಸ್ವರೂಪ್ ಅವರನ್ನು ವಿವಾಹವಾದರೆ ಕೊನೆಯ ಮಗಳು ಪ್ರಿಯದರ್ಶಿಣಿ, ನಟ ಸುಧೀರ್ ಬಾಬುವನ್ನು ವಿವಾಹವಾದರು.

    ಬಾಲಕೃಷ್ಣ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು!

    ಬಾಲಕೃಷ್ಣ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು!

    ಇವರಲ್ಲಿ ಮಂಜುಳಾ ಮಾತ್ರ ತಾನೂ ಸಹ ನಟಿಯಾಗಬೇಕು ಎಂಬ ಕನಸು ಕಂಡಿದ್ದರು. ಇದಕ್ಕೆ ಮೊದಲಿಗೆ ತಂದೆ ಸೂಪರ್ ಸ್ಟಾರ್ ಕೃಷ್ಣ ಬೇಡ ಎಂದರು. ಆದರೆ ಹೇಗೋ ಮಾಡಿ ಅಪ್ಪನನ್ನು ಒಪ್ಪಿಸಿದ ಮಂಜುಳಾ, ಕೆಲ ಕಾಲ ಅಭಿನಯ ತರಭೇತಿಯನ್ನು ಸಹ ಪಡೆದರು. ಮನೆಯವರ ಅಸಹಕಾರದ ನಡುವೆಯೂ ಸಿನಿಮಾಗಳಿಗೆ ಆಡಿಷನ್‌ಗಳನ್ನು ನೀಡಿದರು. ಕೊನೆಗೆ 1994 ರಲ್ಲಿ ಬಾಲಕೃಷ್ಣರ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆದರು.

    ಮಂಜುಳಾ ಆಸೆಗೆ ಅಡ್ಡಗಾಲು ಹಾಕಿದ್ದು ಯಾರು?

    ಮಂಜುಳಾ ಆಸೆಗೆ ಅಡ್ಡಗಾಲು ಹಾಕಿದ್ದು ಯಾರು?

    ಎಸ್‌ಪಿ ಕೃಷ್ಣಾ ರೆಡ್ಡಿ ನಿರ್ದೇಶನ ಮಾಡುತ್ತಿದ್ದ 'ಟಾಪ್ ಹೀರೋ' ಸಿನಿಮಾಕ್ಕೆ ಮಂಜುಳಾ ನಾಯಕಿಯಾಗಿ ಆಯ್ಕೆ ಆದರು. ಸಿನಿಮಾ ಮುಹೂರ್ತ ನಡೆಯುವ ದಿನ ಸ್ಥಳಕ್ಕೆ ಸೂಪರ್ ಸ್ಟಾರ್ ಕೃಷ್ಣ ಅಭಿಮಾನಿಗಳು ನುಗ್ಗಿ ದಾಂಧಲೆ ಎಬ್ಬಿಸಿದರು. 'ನಮ್ಮ ಅಭಿಮಾನದ ನಟನ ಪುತ್ರಿಯನ್ನು ನಾವು ಸಹೋದರಿಯಂತೆ ಕಂಡಿದ್ದೇವೆ. ಆಕೆಯನ್ನು ನಾಯಕಿಯ ದೃಷ್ಟಿಯಲ್ಲಿ ನಾವು ನೋಡಲಾರೆವು. ಮಂಜುಳಾ ಯಾವ ಸಿನಿಮಾದಲ್ಲಿಯೂ ನಟಿಸಬಾರದು'' ಎಂದು ಪಟ್ಟು ಹಿಡಿದು ಗಲಾಟೆ ಎಬ್ಬಿಸಿದರು. ಕೊನೆಗೆ ಮಂಜುಳಾ ಒಲ್ಲದ ಮನಸ್ಸಿನಿಂದ ನಟನೆಯಿಂದ ಹಿಂದೆ ಸರಿಯಬೇಕಾಯ್ತು.

    ಮಂಜುಳಾ ಆಸೆ ಈಡೇರಲೇ ಇಲ್ಲ

    ಮಂಜುಳಾ ಆಸೆ ಈಡೇರಲೇ ಇಲ್ಲ

    ಆದರೆ ಛಲ ಬಿಡದ ಮಂಜುಳಾ, ನಂತರ 1999 ರಲ್ಲಿ ಮಲಯಾಳಂ ಸಿನಿಮಾ 'ಸಮ್ಮರ್ ಇನ್‌ ಬೆತ್ಲೆಹಾಮ್' ಹೆಸರಿನ ಸಿನಿಮಾದಲ್ಲಿ ಪಾತ್ರ ಗಿಟ್ಟಿಸಿಕೊಂಡರು. ಮೋಹನ್‌ಲಾಲ್ ಸೇರಿದಂತೆ ಹಲವು ಪ್ರಮುಖ ನಟ-ನಟಿಯರಿದ್ದ ಆ ಸಿನಿಮಾದಲ್ಲಿ ಮಂಜುಳಾ ಸಹ ಒಬ್ಬ ನಾಯಕಿಯಾಗಿದ್ದರು. ಬಳಿಕ 2002ರಲ್ಲಿ 'ಶೋ' ಹೆಸರಿನ ಪ್ರಾಯೋಗಿಕ ತೆಲುಗು ಸಿನಿಮಾ ಮಾಡಿದರು. ಬಳಿಕ 2009 ರಲ್ಲಿ 'ಕಾವ್ಯಾಸ್ ಡೈರಿ' ಹೆಸರಿನ ಸಿನಿಮಾದಲ್ಲಿ ನಟಿ ಚಾರ್ಮಿ ಜೊತೆ ನಟಿಸಿದರು. ಆ ನಂತರ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದರು ಮಂಜುಳಾ. ಆದರೆ ನಾಯಕಿ ನಟಿಯಾಗಿ ಅವರ ಕನಸು ಈಡೇರಲೇ ಇಲ್ಲ. ಈ ವಿಷಯಗಳನ್ನೆಲ್ಲ ಮಂಜುಳಾ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    English summary
    Mahesh Babu sister Manjula selected as heroine for Balakrishna movie. But she has been stopped.
    Saturday, June 4, 2022, 9:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X