For Quick Alerts
  ALLOW NOTIFICATIONS  
  For Daily Alerts

  ಸಹೋದರಿಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಿನ್ಸ್ ಮಹೇಶ್ ಬಾಬು ಮತ್ತು ಕುಟುಂಬ

  |

  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಹೋದರಿ ಹಾಗೂ ನಟಿ ಸುಧೀರ್ ಬಾಬು ಪತ್ನಿ ಪ್ರಿಯದರ್ಶಿನಿ ಇತ್ತೀಚಿಗೆ ಕುಟುಂಬದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪ್ರೀತಿಯ ಸಹೋದರಿಯ ಹುಟ್ಟುಹಬ್ಬವನ್ನು ಕುಟುಂಬದವರು ಸರಳವಾಗಿ ಆಚರಣೆ ಮಾಡಿದ್ದಾರೆ. ಹುಟ್ಟುಹಬ್ಬಹಬ್ಬ ಆಚರಣೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಮಹೇಶ್ ಬಾಬು ಸಹೋದರಿ ಪ್ರಿಯದರ್ಶಿನಿ 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರಿಯದರ್ಶಿನಿ ಹುಟ್ಟುಹಬ್ಬದ ಪ್ರಯುಕ್ತ ಕುಟುಂಬದ ಸಮೇತ ತವರಿಗೆ ಆಗಮಿಸಿದ್ದಾರೆ. ಹುಟ್ಟಿದ ಮನೆಯಲ್ಲಿ ಜನ್ಮದಿನ ಆಚರಣೆ ಮಾಡಿ ಖುಷಿ ಪಟ್ಟಿದ್ದಾರೆ. ಇಡೀ ಕುಟುಂಬ ಕೇಕ್ ಕತ್ತರಿಸಿ ಸಂಭ್ರಮ ಪಡುತ್ತಿರುವ ಫೋಟೋಗಳನ್ನು ಪ್ರಿಯದರ್ಶಿನಿ ಪತಿ ನಟ ಸುಧೀರ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಅನುಷ್ಕಾ ಶೆಟ್ಟಿ ಮತ್ತು ಮಹೇಶ್ ಬಾಬುಗೆ ಇಂದು ವಿಶೇಷವಾದ ದಿನ: ಭಾವುಕ ಸಂದೇಶ ರವಾನಿಸಿದ ಪ್ರಿನ್ಸ್ಅನುಷ್ಕಾ ಶೆಟ್ಟಿ ಮತ್ತು ಮಹೇಶ್ ಬಾಬುಗೆ ಇಂದು ವಿಶೇಷವಾದ ದಿನ: ಭಾವುಕ ಸಂದೇಶ ರವಾನಿಸಿದ ಪ್ರಿನ್ಸ್

  ಮಹೇಶ್ ಬಾಬು ತಂದೆ ಕೃಷ್ಣ ಹಾಗೂ ಪತ್ನಿ ನಮ್ರತಾ ಮತ್ತು ಸುಧೀರ್ ಬಾಬು ಕುಟುಂಬ ಫೋಟೋದಲ್ಲಿ ಸೆರೆಯಾಗಿದ್ದಾರೆ. ಈ ಸುಂದರ ಕ್ಷಣದ ಫೋಟೋವನ್ನು ಸುಧೀರ್ ಬಾಬು ಶೇರ್ ಮಾಡಿ ಪತ್ನಿಗೆ ಶುಭಹಾರೈಸಿದ್ದಾರೆ. 'ಆ ದಿನ ನನ್ನ ಜೀವನದ ಪ್ರೀತಿ ಹುಟ್ಟಿತು. ಜನ್ಮದಿನದ ಶುಭಾಶಯಗಳು ಪ್ರಿಯಾ' ಎಂದು ಬರೆದುಕೊಂಡಿದ್ದಾರೆ.

  ಕೇಕ್ ಕತ್ತರಿಸುವ ಜೊತೆಗೆ ಇಡೀ ಕುಟುಂಬ ಕೆಲ ಸಮಯ ಒಟ್ಟಿಗೆ ಕಳೆದು, ಒಟ್ಟಿಗೆ ಊಟ ಮಾಡಿ ಸಂತೋಷ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ. ಹುಟ್ಟುಹಬ್ಬ ಆಚರಿಸಿ ಮನೆಯಿಂದ ಹೊರಡುವ ಫೋಟೋವನ್ನು ಸಹ ಸುಧೀರ್ ಬಾಬು ಶೇರ್ ಮಾಡಿದ್ದಾರೆ. ಮಹೇಶ್ ಬಾಬು ಕುಟುಂಬದ ಸುಂದರ ಕ್ಷಣಗಳನ್ನು ಅಭಿಮಾನಿಗಳು ಸಹ ಕಣ್ತುಂಬಿಕೊಂಡಿದ್ದಾರೆ. ಪ್ರಿಯದರ್ಶಿನಿ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುತ್ತಿದ್ದಾರೆ.

  ಪ್ರಿಯದರ್ಶಿನಿ ಪತಿ, ನಟ ಸುಧೀರ್ ಬಾಬು ಇತ್ತೀಚಿಗೆ ವಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ವಿ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ ಸುಧೀರ್ ಬಾಬು ಪಾತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

  English summary
  Tollywood Actor Mahesh Babu sister Priyadarshini is celebrating her birthday with her husband Sudheer babau and familyrthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X