ಮಹೇಶ್ ಬಾಬು ಚಿತ್ರದಲ್ಲಿ ಹೆಣ್ಣಿಗೆ ಮರ್ಯಾದೆ ಇಲ್ಲ ಎಂದಿದ್ದ ಸಮಂತಾಗೆ ವಿಜಯ್ ದೇವರಕೊಂಡ ಚಿತ್ರದಲ್ಲಿ ಆಗಿದ್ದೂ ಅದೇ!
ನಟಿ ಸಮಂತಾ ರುತ್ ಪ್ರಭು ಮೂಲತಃ ತಮಿಳುನಾಡಿನ ಚೆಲುವೆಯಾದರೂ ಹೆಸರು ಮಾಡಿದ್ದು ಹಾಗೂ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದು ತೆಲುಗು ಚಿತ್ರರಂಗದಲ್ಲಿ. 2010ರಲ್ಲಿ ತಮಿಳಿನಲ್ಲಿ ಬಿಡುಗಡೆಗೊಂಡ ವಿನ್ನೈದಾಂಡಿ ವರುವಾಯಾ ಎಂಬ ತಮಿಳು ಚಿತ್ರದಲ್ಲಿ ಪುಟ್ಟ ಪಾತ್ರವೊಂದನ್ನು ನಿರ್ವಹಿಸುವ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಸಮಂತಾ ರುತ್ ಪ್ರಭು ಅದೇ ವರ್ಷ ತೆರೆಗೆ ಬಂದ 'ಏ ಮಾಯಾ ಚೇಸಾವೆ' ಎಂಬ ತೆಲುಗು ಚಿತ್ರದಲ್ಲಿ ನಾಯಕಿಯಾಗಿ ನಾಗಚೈತನ್ಯ ಜತೆ ನಟಿಸುವ ಮೂಲಕ ಪೂರ್ಣಪ್ರಮಾಣದ ನಾಯಕಿಯಾಗಿ ಸಿನಿ ಜೀವನ ಆರಂಭಿಸಿದ್ರು.
ಹೀಗೆ ಮಾಡಿದ ಮೊದಲ ಸಿನಿಮಾದಲ್ಲಿಯೇ ದೊಡ್ಡ ಮಟ್ಟದ ಯಶಸ್ಸು ಸಾಧಿಸಿದ ನಟಿ ಸಮಂತಾ ರುತ್ ಪ್ರಭು ಬಳಿಕ ಕೆಲ ತಮಿಳು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರೂ ದೊಡ್ಡ ಬ್ರೇಕ್ ಹಾಗೂ ಆಫರ್ ಗಿಟ್ಟಿಸಿಕೊಳ್ಳಲು ಆರಂಭಿಸಿದ್ದು ತೆಲುಗಿನ ಬೃಂದಾವನಂ ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ.

ಈ ಚಿತ್ರ ದೊಡ್ಡ ಯಶಸ್ಸು ಸಾಧಿಸಿದ ಬೆನ್ನಲ್ಲೇ ಮತ್ತೆ ಜೂನಿಯರ್ ಎನ್‌ಟಿಆರ್, ಮಹೇಶ್ ಬಾಬು, ಅಲ್ಲು ಅರ್ಜುನ್, ನಾನಿ ಹಾಗೂ ನಾಗಚೈತನ್ಯ ರೀತಿಯ ತೆಲುಗಿನ ದೊಡ್ಡ ನಟರ ಚಿತ್ರಗಳಲ್ಲಿ ನಟಿಸಿದ ಸಮಂತಾ ತೆಲುಗು ಚಿತ್ರರಂಗದ ಸ್ಟಾರ್ ನಟಿ ಆಗಿ ಬೆಳೆದು ನಿಂತರು.
ಸದ್ಯ ನಾಯಕಿ ಪ್ರಧಾನ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ತನ್ನದೇ ಕೆಲ ವೈಯಕ್ತಿಕ ವಿಚಾರಗಳು ಹಾಗೂ ಹೇಳಿಕೆಗಳಿಂದಾಗಿ ಟ್ರೋಲ್ ಆಗುತ್ತಿರುವ ಸಮಂತಾ ಈ ಹಿಂದೆ ತಾನು ಮಾಡಿದ್ದ ಕಾಮೆಂಟ್ ಒಂದಾರಿಂದಾಗಿ ಇದೀಗ ಮತ್ತೊಮ್ಮೆ ಟ್ರೋಲ್‌ಗೆ ಒಳಗಾಗಿದ್ದಾರೆ. ಹೌದು, 2013ರಲ್ಲಿ ಮಹೇಶ್ ಬಾಬು ನಟನೆಯ ಬಹು ನಿರೀಕ್ಷಿತ ಚಿತ್ರ 'ಒನ್ ನೋನೊಕ್ಕಡಿನೆ' ಬಿಡುಗಡೆಯಾಗಿತ್ತು.
ಈ ಚಿತ್ರ ಬಿಡುಗಡೆಯಾಗುವ ಮುನ್ನ ಸಾಮಾನ್ಯವಾಗಿ ಪೋಸ್ಟರ್ ರಿಲೀಸ್ ಆಗಿತ್ತು. ಈ ಪೋಸ್ಟರ್‌ನಲ್ಲಿ ಮಹೇಶ್ ಬಾಬು ಕಡಲ ತೀರದಲ್ಲಿ ಚಪ್ಲಲಿ ಹಿಡಿದು ನಡೆದುಕೊಂಡು ಹೋಗುತ್ತಿದ್ದರೆ, ಹಿಂದೆ ನಾಯಕಿ ಕೃತಿ ಸೆನನ್ ಪ್ರಾಣಿಗಳ ಹಾಗೆ ಕೈ ಕಾಲು ಬಳಸಿ ಮಹೇಶ್ ಬಾಬು ಅವರನ್ನು ಹಿಂಬಾಲಿಸುತ್ತಿದ್ದರು.
ಈ ಪೋಸ್ಟರ್ ಕುರಿತು ಕಾಮೆಂಟ್ ಮಾಡಿದ್ದ ಸಮಂತಾ ಬಿಡುಗಡೆಯಾಗಬೇಕಿರುವ ತೆಲುಗು ಸಿನಿಮಾವೊಂದರ ಪೊಸ್ಟರ್ ಕಂಡೆ, ಅದು ಅತಿರೇಕವಾಗಿದೆ ಎಂದು ಟ್ವೀಟ್ ಮಾಡಿದ್ದರು. ಈ ಪೋಸ್ಟರ್‌ನಲ್ಲಿ ನಾಯಕಿ ನಾಯಿಯ ಹಾಗೆ ನಾಯಕನನ್ನು ಹಿಂಬಾಲಿಸುವುದು ತಪ್ಪು, ಅದು ಹೆಣ್ಣಿಗೆ ಮಾಡಿದ ಅವಮಾನ ಎಂಬರ್ಥದಲ್ಲಿ ಸಮಂತಾ ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು.
ಈ ಪೋಸ್ಟ್ ಅನ್ನು ಕೆದಕಿರುವ ಮಹೇಶ್ ಬಾಬು ಅಭಿಮಾನಿಗಳು ಇತ್ತೀಚೆಗೆ ಬಿಡುಗಡೆಯಾಗಿರುವ ಸಮಂತಾ ನಟನೆಯ ಸಿನಿಮಾದ ಹಾಡಿನ ಜತೆ ಹೋಲಿಕೆ ಮಾಡಿ ಕಾಲೆಳೆಯುತ್ತಿದ್ದಾರೆ. ಹೌದು, ಸಮಂತಾ ರುತ್ ಪ್ರಭು ಹಾಗೂ ವಿಜಯ್ ದೇವರಕೊಂಡ ನಟನೆಯ ಖುಷಿ ಚಿತ್ರದ ಆರಾಧ್ಯ ಎಂಬ ಹಾಡಿನಲ್ಲಿ ವಿಜಯ್ ದೇವರಕೊಂಡ ಸಮಂತಾ ರುತ್ ಪ್ರಭು ಭುಜದ ಮೇಲೆ ಕಾಲನ್ನು ಇಟ್ಟಿರುವ ದೃಶ್ಯ ಇದೆ. ಈ ದೃಶ್ಯವನ್ನು ಸಮಂತಾ ಮಾಡಿದ್ದ ಟ್ವೀಟ್ ಜತೆ ಹೋಲಿಕೆ ಮಾಡಿ ಅಂದು ನೀವು ವಿರೋಧಿಸಿದ್ದಕ್ಕಿಂತ ಕೆಟ್ಟದಾಗಿ ಇಂದು ನಿಮ್ಮನ್ನು ಚಿತ್ರವೊಂದಕ್ಕೆ ಬಳಸಿಕೊಂಡಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.


Click it and Unblock the Notifications











