ಅಲ್ಲು ಅರ್ಜುನ್ ಜೊತೆಗಿನ ಕದನ: ಪ್ರಿನ್ಸ್ ಮಹೇಶ್ ಬಾಬು ಬಾಯ್ಬಿಟ್ಟಿದ್ದೇನು.?

Recommended Video

ಸ್ಟಾರ್ ವಾರ್ ಬಗ್ಗೆ ಮಹೇಶ್ ಬಾಬು ಹೇಳಿದ್ದೇನು ಗೊತ್ತಾ..? | FILMIBEAT KANNADA

ಈ ವರ್ಷದ (2020) ಸಂಕ್ರಾಂತಿ ಹಬ್ಬ ತೆಲುಗು ಸಿನಿ ಅಂಗಳದಲ್ಲಿ ದೊಡ್ಡ ಕದನಕ್ಕೆ ಸಾಕ್ಷಿ ಆಯ್ತು. ಟಾಲಿವುಡ್ ನಲ್ಲಿ ಸ್ಟಾರ್ ವಾರ್ ನಡೆಯಿತು. ಒಂದು ದಿನದ ಅಂತರದಲ್ಲಿ ಇಬ್ಬರು ದೊಡ್ಡ ತಾರೆಯರ ಚಿತ್ರಗಳು ತೆರೆಗೆ ಅಪ್ಪಳಿಸಿದ್ದರಿಂದ, ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಯುದ್ಧ ಶುರುವಾಗಿದೆ. ಇದರಿಂದ ಫ್ಯಾನ್ಸ್ ವಾರ್ ಕೂಡ ಆರಂಭವಾಗಿದೆ. ಈ ಬಗ್ಗೆ ಪ್ರಿನ್ಸ್ ಮಹೇಶ್ ಬಾಬು ಇದೀಗ ಮಾತನ್ನಾಡಿದ್ದಾರೆ.

ಅಸಲಿಗೆ, ವಾರದ ಹಿಂದೆ ಪ್ರಿನ್ಸ್ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಮತ್ತು ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಮುಲೋ' ರಿಲೀಸ್ ಆಗಿತ್ತು.

ಈ ರಿಲೀಸ್ ಡೇಟ್ ಕ್ಲ್ಯಾಶ್ ಗೆ ಮಹೇಶ್ ಬಾಬು ಕಾರಣ ಅಂತ ತೆಲುಗಿನ ಕೆಲ ಮಾಧ್ಯಮಗಳು, ವೆಬ್ ತಾಣಗಳು ಬೆಟ್ಟು ಮಾಡಿ ತೋರಿಸುತ್ತಿವೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮ್ಮ ಚಿತ್ರ ಬಿಡುಗಡೆ ಆಗಲೇ ಬೇಕು ಅಂತ ಮಹೇಶ್ ಬಾಬು ಪಟ್ಟು ಹಿಡಿದು ಕೂತಿದ್ದರಂತೆ ಎಂಬ ಅಂತೆ-ಕಂತೆ ಹರಿದಾಡಿದ ಬೆನ್ನಲೆ 'ಸ್ಟಾರ್ ವಾರ್' ಬಗ್ಗೆ ಮಹೇಶ್ ಬಾಬು ತುಟಿ ಬಿಚ್ಚಿದ್ದಾರೆ. ಮುಂದೆ ಓದಿರಿ...

ಸ್ಟಾರ್ ವಾರ್ ಬಗ್ಗೆ ಮಹೇಶ್ ಬಾಬು ಮಾತು

ಸ್ಟಾರ್ ವಾರ್ ಬಗ್ಗೆ ಮಹೇಶ್ ಬಾಬು ಮಾತು

''ನಾನು ಕೇವಲ ನಟ. ನಟನೆ ಮಾಡುವುದಷ್ಟೇ ನನ್ನ ಕೆಲಸ. ಮಿಕ್ಕಿದ್ದನ್ನೆಲ್ಲ ನನ್ನ ನಿರ್ಮಾಪಕರು ನೋಡಿಕೊಳ್ಳುತ್ತಾರೆ. ಸಿನಿಮಾ ಬಿಡುಗಡೆಯ ದಿನಾಂಕ ಮತ್ತು ಕೆಲ ತಾಂತ್ರಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕೂಡ ನಿರ್ಮಾಪಕರೇ. ಅದು ಅವರ ಕೆಲಸ. ನನಗೆ ಮಾಡಲು ಬೇರೆ ಬೇಕಾದಷ್ಟು ಕೆಲಸಗಳಿವೆ'' ಎಂದು ಸಂದರ್ಶನವೊಂದರಲ್ಲಿ 'ಡೇಟ್ಸ್ ಕ್ಲ್ಯಾಶ್ ನಿಂದಾದ ಸ್ಟಾರ್ ವಾರ್' ಬಗ್ಗೆ ಮಹೇಶ್ ಬಾಬು ಹೇಳಿದ್ದಾರೆ.

ಅದು ನನ್ನ ಕೆಲಸ ಅಲ್ಲ.!

ಅದು ನನ್ನ ಕೆಲಸ ಅಲ್ಲ.!

''ಬಿಡುಗಡೆಯ ದಿನಾಂಕದ ಬಗ್ಗೆ ನಿರ್ಧಾರ ಕೈಗೊಳ್ಳಲು ಚೇಂಬರ್, ನಿರ್ಮಾಪಕರ ಸಂಘ, ವಿತರಕರ ಸಂಘ ಇದೆ. ಅವರ ಕೆಲಸವೇ ಅದು. ನನ್ನದಲ್ಲ'' ಎಂದು ಸಂದರ್ಶನದಲ್ಲಿ ಹೇಳಿದ್ದಾರೆ ಮಹೇಶ್ ಬಾಬು.

ಒಟ್ಟಿಗೆ ರೇಸ್ ಗೆ ಇಳಿದ ಸ್ಟಾರ್ಸ್

ಒಟ್ಟಿಗೆ ರೇಸ್ ಗೆ ಇಳಿದ ಸ್ಟಾರ್ಸ್

ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಚಿತ್ರ ಜನವರಿ 11 ರಂದು ತೆರೆಗೆ ಬಂದಿತ್ತು. ಇನ್ನೂ ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಮುಲೋ' ಜನವರಿ 12 ರಂದು ರಿಲೀಸ್ ಆಗಿತ್ತು. ಡೇಟ್ಸ್ ಕ್ಲ್ಯಾಶ್ ನಿಂದಾಗಿ ಶನಿವಾರ ಮತ್ತು ಭಾನುವಾರ ಈ ಸಿನಿಮಾಗಳು ರಿಲೀಸ್ ಆದ್ವು. ಒಟ್ಟಿಗೆ ರೇಸ್ ಗೆ ಇಳಿದ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಇದೀಗ ಕಲೆಕ್ಷನ್ ಲೆಕ್ಕಾಚಾರದಲ್ಲಿ ಪೈಪೋಟಿ ನಡೆಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್

ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್

ಡೇಟ್ಸ್ ಕ್ಲ್ಯಾಶ್ ನಿಂದ ಆರಂಭವಾದ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ನಡುವಿನ 'ಸ್ಟಾರ್ ವಾರ್' ಇದೀಗ 'ಫೇಕ್ ಕಲೆಕ್ಷನ್'ವರೆಗೂ ಬಂದು ನಿಂತಿದೆ. ಹತ್ತು ದಿನಗಳ ಕಲೆಕ್ಷನ್ ಪಟ್ಟಿಯನ್ನ ಎರಡೂ ಚಿತ್ರತಂಡಗಳೂ ಬಿಡುಗಡೆ ಮಾಡಿವೆ. ಆದ್ರೆ, 'ಸರಿಲೇರು ನೀಕೆವ್ವರು' ಚಿತ್ರತಂಡ ಕೊಟ್ಟಿರುವ ಕಲೆಕ್ಷನ್ ಲೆಕ್ಕಾಚಾರ ಸುಳ್ಳು ಅಂತ ಅಲ್ಲು ಅರ್ಜುನ್ ಫ್ಯಾನ್ಸ್ ದೂರಿದ್ದರೆ, 'ಅಲಾ ವೈಕುಂಠಪುರಮುಲೋ' ಚಿತ್ರತಂಡ ನೀಡಿರುವ ಕಲೆಕ್ಷನ್ ಪಟ್ಟಿ ಸುಳ್ಳು ಅಂತ ಮಹೇಶ್ ಬಾಬು ಅಭಿಮಾನಿಗಳು ಆರೋಪಿಸಿದ್ದಾರೆ. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಮಹೇಶ್ ಬಾಬು ಫ್ಯಾನ್ಸ್ ಮತ್ತು ಅಲ್ಲು ಅರ್ಜುನ್ ಅಭಿಮಾನಿಗಳ ಮಧ್ಯೆ ದೊಡ್ಡ ಸಮರ ನಡೆಯುತ್ತಿದೆ.

More from Filmibeat

English summary
Tollywood Actor Mahesh Babu spoke about clash with Allu Arjun.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X