ಮೊದಲ ವಾರ ಬಾಕ್ಸಾಫೀಸ್‌ನಲ್ಲಿ ಮಹೇಶ್ ಬಾಬು ಘರ್ಜನೆ!
ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾ ರಿಲೀಸ್‌ಗೂ ಮುನ್ನ ಇದ್ದ ನಿರೀಕ್ಷೆಯನ್ನು ಹೊಡೆದು, ಬಾಕ್ಸಾಫೀಸ್‌ನಲ್ಲಿ ಘರ್ಜಿಸುತ್ತಿದೆ. ಈ ಸಿನಿಮಾ ರಿಲೀಸ್ ವೇಳೆ 'ಕೆಜಿಎಫ್ 2' ಹವಾ ಹಾಗೆ ಇದ್ದ ಕಾರಣ, ಈ ಸಿನಿಮಾದ ಗಳಿಕೆ ನಿರೀಕ್ಷೆ ಅಷ್ಟರ ಮಟ್ಟಿಗೆ ಇರಲಿಲ್ಲ.
ಆದರೆ ಎಲ್ಲೂ ಊಹೆಗಳನ್ನು ಸುಳ್ಳು ಮಾಡಿ 'ಸರ್ಕಾರು ವಾರಿ ಪಾಟ' ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮೇ 12 ರಂದು ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ. ದಿನದಿಂದ ದಿನಕ್ಕೆ ಸಿನಿಮಾದ ಕಲೆಕ್ಷನ್ ಹೆಚ್ಚಾಗುತ್ತಿದೆ. ಹಾಗಾಗಿ ಈ ಸಿನಿಮಾ ಪ್ರತ್ಯೇಕವಾಗಿ ದಾಖಲೆ ಮಾಡಲಿದೆ.
ಇನ್ನು ಸಿನಿಮಾ ರಿಲೀಸ್ ಒಂದು ವಾರ ಕಳೆದಿದೆ. ಒಂದು ವಾರದಲ್ಲಿ ಬಾಕ್ಸಾಫೀಸ್ ಗಳಿಕೆಯ ರೇಖೆ ಕುಸಿದಿಲ್ಲ. ಸಿನಿಮಾ ಏಳನೇ ದಿನವೂ ಕೂಡ ಭರ್ಜರಿ ಕಲೆಕ್ಷನ್ ಮಾಡುತ್ತಾ ಇದೆ. ಇನ್ನು ಎರಡೇ ದಿನಕ್ಕೆ 100 ಕೋಟಿ ಕಲೆಕ್ಷನ್ ಮಾಡಿರುವುದು 'ಸರ್ಕಾರು ವಾರಿ ಪಾಟ'ದ ದಾಖಲೆಯೇ.

175 ಕೋಟಿ ಕಲೆ ಹಾಕಿದ 'ಸರ್ಕಾರು ವಾರಿ ಪಾಟ'!
ಏಳನೇ ದಿನಕ್ಕೆ ಮಹೇಶ್ ಬಾಬು ಸಿನಿಮಾದ ಕಲೆಕ್ಷನ್ 175 ಕೋಟಿ ದಾಟಿದೆ. ಇದು ವಿಶ್ವದಾದ್ಯಂತ ಮಾಡಿರುವ ಕಲೆಕ್ಷನ್. ಸಿನಿಮಾ ರಿಲೀಸ್ ಆಗಿ ವಾರಾಂತ್ಯದಲ್ಲಿ ಮಾತ್ರವಲ್ಲ, ವಾರಾಂತ್ಯ ಕಳೆದ ಬಳಿಕವೂ ಉತ್ತಮ ಗಳಿಕೆ ಕಂಡಿದೆ. ಕೇವಲ ತೆಲುಗಿನಲ್ಲಿ ರಿಲೀಸ್ ಆಗಿ ಈ ಮಟ್ಟಿಗೆ ಸದ್ದು ಮಾಡುತ್ತಿರುವ ಈ ಸಿನಿಮಾ, ಪ್ಯಾನ್ ಇಂಡಿಯಾ ಆಗಿದ್ದರೆ, ಮತ್ತಷ್ಟು ದಾಖಲೆಗಳನ್ನು ನಿರ್ಮಿಸುತ್ತಿತ್ತು.

'ಸರ್ಕಾರು ವಾರಿ ಪಾಟ' ಎರಡೇ ದಿನಕ್ಕೆ 100 ಕೋಟಿ!
'ಸರ್ಕಾರು ವಾರಿ ಪಾಟ' ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ. ಈಗ 200 ಕೋಟಿ ಕಲೆ ಹಾಕುವತ್ತ ಸಿನಿಮಾ ಜರ್ನಿ ಸಾಗಿದೆ. ಏಳೇ ದಿನಕ್ಕೆ ನಿರೀಕ್ಷೆ ಮೀರಿ 175 ಕೋಟಿ ಗಳಿಸಿದೆ. ಹಾಗಾಗಿ ಸಿನಿಮಾ ಮತ್ತಷ್ಟು ಗಳಿಕೆ ಮಾಡುವ ಭರವಸೆ ಹುಟ್ಟಿಕೊಂಡಿದೆ. ಸದ್ಯ ಈ ಸಿನಿಮಾದ ಎದುರಿಗೆ ಯಾವ ದೊಡ್ಡ ಸಿನಿಮಾನೂ ಬರುತ್ತಿಲ್ಲ. ಹಾಗಾಗಿ ಇನ್ನು ಕೆಲವು ದಿನ 'ಸರ್ಕಾರು ವಾರಿ ಪಾಟ'ದ ಕಲೆಕ್ಷನ್ ಡ್ರಾಫ್ ಆಗುವ ಮಾತೇ ಇಲ್ಲ.

ಮಹೇಶ್ ಬಾಬುಗಿಲ್ಲ 'ಕೆಜಿಎಫ್ 2' ಎಫೆಕ್ಟ್!
ಕನ್ನಡದ 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆದರೂ, ಇನ್ನೂ ಸಿನಿಮಾದ ಹವಾ ಕಡಿಮೆ ಆಗಿಲ್ಲ. ಈ ಚಿತ್ರದ ಎದುರು ಬಂದ ಬಾಲಿವುಡ್ ದೊಡ್ಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿರುವ ಉದಾಹರಣೆಗಳು ಇವೆ. ಆದರೆ 'ಸರ್ಕಾರು ವಾರಿ ಪಾಟ'ಕ್ಕೆ 'ಕೆಜಿಎಫ್ 2' ಎಫೆಕ್ಟ್ ತಗುಲಿಲ್ಲ. ಹಾಗಾಗಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಈ ಮಟ್ಟಿಗೆ ಸದ್ದು ಮಾಡಲು ಸಾಧ್ಯವಾಗಿದೆ.

ಮಹೇಶ್ ಬಾಬು ಟಾರ್ಗೆಟ್ 200 ಕೋಟಿ!
ಸದ್ಯ 175 ಕೋಟಿ ಗಡಿ ದಾಟಿರುವ, ಮಹೇಶ್ ಬಾಬು ಸಿನಿಮಾ 200 ಕೋಟಿಯತ್ತ ದಾಪುಗಾಲಿಟ್ಟಿದೆ. ಇಲ್ಲಿದೆ ಏಳು ದಿನಗಳ ಗಳಿಕೆ.
'ಸರ್ಕಾರು ವಾರಿ ಪಾಟ' ಚಿತ್ರದ 7 ದಿನಗಳ ಗಳಿಕೆ
ದಿನ 1- ₹ 75.21 ಕೋಟಿ
ದಿನ 2 - ₹ 27.50 ಕೋಟಿ
ದಿನ 3 - ₹ 28.84 ಕೋಟಿ
ದಿನ 4 - ₹ 29.12 ಕೋಟಿ
ದಿನ 5 - ₹ 9.38 ಕೋಟಿ
ದಿನ 6 - ₹ 5.25 ಕೋಟಿ
ಒಟ್ಟು- ₹ 175.30 ಕೋಟಿ.


Click it and Unblock the Notifications











