'ಬಾಹುಬಲಿ-2' ದಾಖಲೆ ಧೂಳಿಪಟ ಮಾಡಿದ ಮಹೇಶ್ ಬಾಬು 'ಸರಿಲೇರು ನೀಕೆವ್ವರು'
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದ 'ಸರಿಲೇರು ನೀಕೆವ್ವರು' ಸಿನಿಮಾ ನಿನ್ನೆ(ಜನವರಿ 11) ಅದ್ದೂರಿಯಾಗಿ ಬಿಡುಗಡೆಯಾಗಿದೆ. ದೇಶ ವಿದೇಶದಲ್ಲಿ ರಿಲೀಸ್ ಆದ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ನೋಡಿ ಮಹೇಶ್ ಬಾಬು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಮಹೇಶ್ ಬಾಬು ಜೊತೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಮಹೇಶ್ ಬಾಬು ಆರ್ಮಿ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತಷ್ಟು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಮಿಂಚಿರುವ ಮಹೇಶ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದ್ಭುತ ಓಪನಿಂಗ್ ಪಡೆದುಕೊಂಡಿರುವ 'ಸರಿಲೇರು ನೀಕೆವ್ವರು' ಸಿನಿಮಾ ಮೊದಲ ದಿನ ದಾಖಲೆ ಗಳಿಕೆ ಮಾಡಿದೆ. ವಿಶೇಷ ಅಂದರೆ ಅಂಧ್ರದಲ್ಲಿ ಬಾಹುಬಲಿ-2 ಸಿನಿಮಾದ ದಾಖಲೆ ಬ್ರೇಕ್ ಮಾಡಿ ಮಹೇಶ್ ಬಾಬು ಸಿನಿಮಾ ಹೊಸ ರೆಕಾರ್ಡ್ ಮಾಡಿದೆ.
Recommended Video

ಮೊದಲ ದಿನದ ಕಲೆಕ್ಷನ್
ಸದ್ಯ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಸಿನಿಮಾ ಮೊದಲ ದಿನ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಬರೋಬ್ಬರಿ 37 ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ತೆಲಂಗಾಣದ ನಿಜಾಮಾಬಾದ್ ಒಂದರಲ್ಲಿಯೆ 10 ಕೋಟಿ ಕಲೆಕ್ಷನ್ ಆಗಿದೆಯಂತೆ. ಇದುವರೆಗಿನ ಕಲೆಕ್ಷನ್ ನಲ್ಲಿಯೆ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಇದಾಗಿದೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಗಳಿಕೆ
ಚಿತ್ರದ ಒಟ್ಟಾರೆ ಗಳಿಕೆ 47 ಕೋಟಿ ಎಂದು ಅಂದಾಜು ಮಾಡಲಾಗಿದೆ. ಯು ಎಸ್ ಎ ಯಲ್ಲಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಮೊದಲ ದಿನ ವಿದೇಶಿ ನೆಲದಲ್ಲಿ ಸಿನಿಮಾ 6 ಕೋಟಿ ಕಲೆಕ್ಷನ್ ಮಾಡಿದೆ. ಚೆನ್ನೈನಲ್ಲಿ ಸಿನಿಮಾ 17 ಲಕ್ಷ ಕಲೆಕ್ಷನ್ ಮಾಡಿದೆ. ಬೇರೆ ಬೇರೆ ರಾಜ್ಯಗಳಲ್ಲಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಬಾಹುಬಲಿ ಕಲೆಕ್ಷನ್ ಬ್ರೇಕ್ ಮಾಡಿದ ಸಿನಿಮಾ
'ಸರಿಲೇರು ನೀಕೆವ್ವರು' ಸಿನಿಮಾ ಮೊದಲ ದಿನ 37 ಕೇಟಿ ಕಲೆಕ್ಷನ್ ಮಾಡಿದೆ. ಆದಗರೆ ಬಾಹುಬಲಿ-2 ಸಿನಿಮಾ ಆಂಧ್ರದಲ್ಲಿ ಮೊದಲದಿನ 36 ಕೋಟಿ ಕಲೆಕ್ಷನ್ ಮಾಡಿತ್ತು ಎಂದು ಸಿನಿಮಾ ವಿಶ್ಲೇಷಕರು ಹೇಳುತ್ತಿದ್ದಾರೆ. ಮಹೇಶ್ ಬಾಬು ಸಿನಿಮಾ ದಾಖಲೆಯ ಗಳಿಕೆ ಮಾಡಿದೆ.

ಮುಂದಿನ ದಿನಗಳಲ್ಲಿ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ
ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನಲೆ ಕಲೆಕ್ಷನ್ ವಿಚಾರದಲ್ಲಿಯೂ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಿನಿಮಾ ವಿಶ್ಲೇಷಕರು ಹೇಳುತ್ತಿದ್ದಾರೆ. ರಿಲೀಸ್ ಗೂ ಮೊದಲೆ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಟ್ರೈಲರ್ ಮತ್ತು ಹಾಡುಗಳ ಮೂಲಕ ಚಿತ್ರಾಭಿಮಾನಿಗಳ ನಾಡಿಮಿಡಿತ ಹೆಚ್ಚಿಸಿತ್ತು. ಅಭಿಮಾನಿಗಳ ನಿರೀಕ್ಷೆಯ ಮಟ್ಟ ಮೀರಿ ಸಿನಿಮಾ ಮೂಡಿ ಬಂದಿದ್ದು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.


Click it and Unblock the Notifications











