For Quick Alerts
  ALLOW NOTIFICATIONS  
  For Daily Alerts

  ನಂ.1 ಟ್ರೆಂಡಿಂಗ್ ನಲ್ಲಿದೆ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಟ್ರೈಲರ್.!

  |

  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಜನವರಿ 11, 2020 ರಂದು 'ಸರಿಲೇರು ನೀಕೆವ್ವರು' ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದ್ದು, ಸದ್ಯ ಚಿತ್ರದ ಟ್ರೈಲರ್ ಟ್ರೆಂಡಿಂಗ್ ನಲ್ಲಿದೆ.

  KGF 2 ನಂತರ ಯಶ್ ಮಾಡುವ ಸಿನಿಮಾ ಯಾವುದು ಗೊತ್ತಾ..? | YASH | KGF2 | MAHESH BABU | POORIJAGANATH

  'ಸರಿಲೇರು ನೀಕೆವ್ವರು' ಚಿತ್ರದ ಟ್ರೈಲರ್ ಮೊನ್ನೆಯಷ್ಟೇ ಬಿಡುಗಡೆ ಆಗಿತ್ತು. ಮೆಗಾ ಸ್ಟಾರ್ ಚಿರಂಜೀವಿ ಸಮ್ಮುಖದಲ್ಲಿ ಬಿಡುಗಡೆಯಾದ 'ಸರಿಲೇರು ನೀಕೆವ್ವರು' ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲೀಗ ನಂಬರ್ 1 ಟ್ರೆಂಡಿಂಗ್ ನಲ್ಲಿದೆ.

  ಒಂದೇ ದಿನದಲ್ಲಿ 'ಸರಿಲೇರು ನೀಕೆವ್ವರು' ಚಿತ್ರದ ಟ್ರೈಲರ್ ಗೆ ಒಂದು ಕೋಟಿಗೂ ಅಧಿಕ ವ್ಯೂಸ್ ಲಭ್ಯವಾಗಿದೆ. ಯೂಟ್ಯೂಬ್ ನಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿ 'ಸರಿಲೇರು ನೀಕೆವ್ವರು' ಚಿತ್ರದ ಟ್ರೈಲರ್ ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

  ಟಾಲಿವುಡ್ ನಲ್ಲೂ 'ಓವರ್ ಆಕ್ಟಿಂಗ್ ರಾಣಿ' ಎಂದು ಟ್ರೋಲ್ ಆದ ರಶ್ಮಿಕಾ ಮಂದಣ್ಣ.!ಟಾಲಿವುಡ್ ನಲ್ಲೂ 'ಓವರ್ ಆಕ್ಟಿಂಗ್ ರಾಣಿ' ಎಂದು ಟ್ರೋಲ್ ಆದ ರಶ್ಮಿಕಾ ಮಂದಣ್ಣ.!

  'ಸರಿಲೇರು ನೀಕೆವ್ವರು' ಚಿತ್ರದಲ್ಲಿ ಇಂಡಿಯನ್ ಆರ್ಮಿ ಮೇಜರ್ ಅಜಯ್ ಕೃಷ್ಣ ಪಾತ್ರದಲ್ಲಿ ಮಹೇಶ್ ಬಾಬು ಕಾಣಿಸಿಕೊಂಡಿದ್ದರೆ, ಬಬ್ಲಿ ಹುಡುಗಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ವಿಜಯಶಾಂತಿ, ವಿಲನ್ ಆಗಿ ಪ್ರಕಾಶ್ ರಾಜ್ ನಟಿಸಿದ್ದಾರೆ.

  'ಸರಿಲೇರು ನೀಕೆವ್ವರು' ಔಟ್ ಅಂಡ್ ಔಟ್ ಆಕ್ಷನ್ ಚಿತ್ರವಾಗಿದ್ದು, ಇದರಲ್ಲಿ ರಾಜಕೀಯ, ಪ್ರೇಮ, ಫ್ಯಾಮಿಲಿ ಡ್ರಾಮಾ, ಸೆಂಟಿಮೆಂಟ್ ಮಿಕ್ಸ್ ಆಗಿದೆ.

  ಅಯ್ಯಯ್ಯೋ.. ರಶ್ಮಿಕಾ ಮಂದಣ್ಣ ಹೆಸರನ್ನ ಚಿರಂಜೀವಿ ಹೀಗಾ ಕರೆಯೋದು.!?ಅಯ್ಯಯ್ಯೋ.. ರಶ್ಮಿಕಾ ಮಂದಣ್ಣ ಹೆಸರನ್ನ ಚಿರಂಜೀವಿ ಹೀಗಾ ಕರೆಯೋದು.!?

  ಮಹೇಶ್ ಬಾಬು, ದಿಲ್ ರಾಜು, ಅನಿಲ್ ಸುಂಕಾರ ಜಂಟಿಯಾಗಿ ನಿರ್ಮಾಣ ಮಾಡಿರುವ 'ಸರಿಲೇರು ನೀಕೆವ್ವರು' ಚಿತ್ರಕ್ಕೆ ಅನಿಲ್ ರವಿಪುಂಡಿ ಆಕ್ಷನ್ ಕಟ್ ಹೇಳಿದ್ದಾರೆ. 75 ಕೋಟಿ ರೂಪಾಯಿ ಬಜೆಟ್ ನಲ್ಲಿ ಸಿದ್ಧಗೊಂಡಿರುವ 'ಸರಿಲೇರು ನೀಕೆವ್ವರು' ಚಿತ್ರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ.

  English summary
  Tollywood Actor Mahesh Babu starrer Sarileru Neekevvaru trailer trending No.1 in Youtube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X