200 ಕೋಟಿ ಕಲೆಕ್ಷನ್ ಮಾಡಿದ 'ಸರ್ಕಾರು ವಾರಿ ಪಾಟ' ಬಾಕ್ಸಾಫೀಸ್ ಧೂಳ್
ಟಾಲಿವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿದ ನಟ ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಭರ್ಜರಿ ಕಲೆಕ್ಷನ್ ಮಾಡುತ್ತಾ ಮುಂದೆ ಸಾಗಿದೆ. ಸಿನಿಮಾ ರಿಲೀಸ್ ಆಗಿ 12 ದಿನಗಳೂ ಕಳೆದರೂ ಸಹ ಸಿನಿಮಾ ಮೇಲಿನ ಕ್ರೇಜ್ ಮಾತ್ರ ಇನ್ನು ಕಡಿಮೆಯಾಗಿಲ್ಲ.
'ಸರ್ಕಾರು ವಾರಿ ಪಾಟ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗದೇ ಇದ್ದರೂ ಸಹ ಗಳಿಕೆ ಮಾಡುವುದರಲ್ಲಿ ಯಡವಿಲ್ಲ. ಪ್ಯಾನ್ ಇಂಡಿಯಾ ಸಿನಿಮಾದಂತೆ ಭರ್ಜರಿಯಾಗಿ ಕಲೆಕ್ಷನ್ ಮಾಡಿಕೊಳ್ಳುತ್ತಿದೆ. ತೆಲುಗು ಒಂದೇ ಭಾಷೆಯಲ್ಲಿ ವಿಶ್ವದಾದ್ಯಂತ ರಿಲೀಸ್ ಆಗಿದ್ದ ಸಿನಿಮಾಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬುಗೆ ದೇಶಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಹೀಗಾಗಿ ಅವರ 'ಸರ್ಕಾರು ವಾರಿ ಪಾಟ' ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಂಡಿದೆ. ಸದ್ಯ ಸಿನಿಮಾ ಈಗ 200 ಕೋಟಿ ಕಲೆಕ್ಷನ್ ಮಾಡಿಕೊಂಡಿದ್ದು, ಚಿತ್ರತಂಡ ಸಂಭ್ರಮದ ಅಲೆಯಲ್ಲಿ ತೇಲುತ್ತಿದೆ.

ಬಾಕ್ಸಾಫೀಸ್ ಧೂಳೆಬ್ಬಿಸಿದ ಮಹೇಶ್ ಬಾಬು ಸಿನಿಮಾ
'ಸರ್ಕಾರು ವಾರಿ ಪಾಟ' ಸಿನಿಮಾ ರಿಲೀಸ್ ಆದ ಕೇವಲ 12 ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿಕೊಂಡಿದೆ. ವಿಶ್ವದಾದ್ಯಂತ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿಕೊಳ್ಳುವ ಮೂಲಕ ಹೊಸ ದಾಖಲೆ ಸೃಷ್ಟಿ ಮಾಡಿದೆ. ಇಂದು (ಮೇ 24) ಮಹೇಶ್ ಬಾಬು ಸಿನಿಮಾ 200 ಕೋಟಿ ರೂಪಾಯಿ ಗಡಿ ದಾಟಿದ್ದು, ಇದೇ ಮೊದಲ ಬಾರಿಗೆ ಪ್ರಾದೇಶಿಕ ಚಿತ್ರವೊಂದು ಅತಿದೊಡ್ಡ ಗಳಿಕೆ ಮಾಡಿಕೊಂಡಿದೆ. ಈ ಮೂಲಕ 'ಸರ್ಕಾರು ವಾರಿ ಪಾಟ' ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ ನಿರ್ದೇಶಕ
'ಸರ್ಕಾರು ವಾರಿ ಪಾಟ' ಸಿನಿಮಾ 200 ಕೋಟಿ ಕಲೆಕ್ಷನ್ ಮಾಡಿಕೊಂಡ ಹಿನ್ನಲೆ, ಚಿತ್ರದ ನಿರ್ಮಾಪಕ, ನಿರ್ದೇಶಕ ಹಾಗೂ ಇಡೀ ಚಿತ್ರರಂಗ ಸಂಭ್ರಮಾಚರಣೆ ಮಾಡಿದೆ. ಅದರಲ್ಲೂ ನಿರ್ದೇಶಕ ಪರಶುರಾಮ್ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ವಿಶೇಷವಾಗಿ ಸಿನಿಮಾ ನೋಡಿದ ಪ್ರೇಕ್ಷಕರಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು "ನಿಮ್ಮೆಲ್ಲರ ಆರ್ಶೀವಾದವಿಲ್ಲದೆ ಈ ಸಾಧನೆ ಅಸಾಧ್ಯ. ಅದರಲ್ಲೂ ಮಹೇಶ್ ಬಾಬು ಅಭಿಮಾನಿಗಳ ಬೆಂಬಲವಿಲ್ಲದೆ ಈ ಯಶಸ್ಸು ಸಾಧ್ಯವಾಗುತ್ತಿರಲಿಲ್ಲ. ಮೊದಲಿನಿಂದಲೂ ನನಗೆ ಅಪಾರವಾದ ಪ್ರೀತಿ, ಬೆಂಬಲ ತೋರಿದ ಎಲ್ಲಾ ಪ್ರೇಕ್ಷಕರಿಗೆ ಧನ್ಯವಾದ" ಎಂದು ತಿಳಿಸಿದ್ದಾರೆ.
ಅಭಿಮಾನಿಗಳ ಪ್ರೀತಿಗೆ ಮಹೇಶ್ ಬಾಬು ನಮನ
ನಟ ಮಹೇಶ್ ಬಾಬು ಸಿನಿಮಾ ಅಂದರೆ, ಅವರ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಣೆ ಮಾಡ್ತಾರೆ. ಹೀಗಾಗಿ ಈ ಸಿನಿಮಾವನ್ನು ಕೂಡ ಅದೇ ರೀತಿ ಅಪ್ಪಿ, ಆಶೀರ್ವವದಿಸಿದ್ದಾರೆ. ಇದರಿಂದಾಗಿ 'ಸರ್ಕಾರು ವಾರಿ ಪಾಟ' ಚಿತ್ರ 200 ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸದ್ಯ ಈ ಸಂಭ್ರಮಕ್ಕೆ ಕಾರಣರಾದ ಅಭಿಮಾನಿಗಳಿಗೆ ನಟ ಮಹೇಶ್ ಬಾಬು ಧನ್ಯವಾದ ತಿಳಿಸಿದ್ದಾರೆ. "ನನ್ನ ಎಲ್ಲಾ ಸೂಪರ್ ಅಭಿಮಾನಿಗಳಿಗೆ ಈ ಚಿತ್ರವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಪ್ರೀತಿಗೆ ಯಾವಾಗಲೂ ಕೃತಜ್ಞನಾಗಿರುತ್ತೇನೆ." ಎಂದು ಟ್ವೀಟ್ ಮಾಡಿದ್ದಾರೆ.

ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ್ರೂ ಸಿನಿಮಾ ಸಕ್ಸಸ್
ಸಿನಿಮಾ ರಿಲೀಸ್ ಆದ ಸಮಯದಲ್ಲಿ ಚಿತ್ರದ ಬಗ್ಗೆ ಒಂದು ವರ್ಗದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಸಹ ಸಿನಿಮಾ ಮಾತ್ರ ಕುಗ್ಗದೆ ಭರ್ಜರಿ ಕಲೆಕ್ಷನ್ ಮಾಡಿಕೊಳ್ಳುವತ್ತಾ ಸಾಗಿದೆ. ಇನ್ನು 'ಸರ್ಕಾರು ವಾರಿ ಪಾಟ' ಸಿನಿಮಾ ಈ ಮಟ್ಟಿಗೆ ಕಲೆಕ್ಷನ್ ಮಾಡಿಕೊಳ್ಳಲು ಎರಡು ಕಾರಣಗಳಿವೆ. ಒಂದು 'ಆಚಾರ್ಯ' ಸಿನಿಮಾ ಪ್ಲಾಪ್ ಆಗಿದ್ದು, ಇನ್ನೊಂದು ಸಿನಿಮಾ ರಿಲೀಸ್ ಆದ ನಂತರ ಯಾವುದೇ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗದೇ ಇರುವುದು ಕೂಡ ಸಿನಿಮಾ ಕಲೆಕ್ಷನ್‌ಗೆ ಪ್ಲಸ್ ಪಾಯಿಂಟ್ ಆಯಿತು. ಒಟ್ಟಿನಲ್ಲಿ 'ಸರ್ಕಾರು ವಾರಿ ಪಾಟ' ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು, 200 ಕೋಟಿ ಗಡಿ ದಾಟಿ ಮುನ್ನುಗುತ್ತಿದೆ.


Click it and Unblock the Notifications











