ಮಹೇಶ್ ಬಾಬು 'ಸರ್ಕಾರು ವಾರಿ ಪಾಟ' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟನೆಯ ಬಹುನಿರೀಕ್ಷೆಯ ಸರ್ಕಾರು ವಾರಿ ಪಾಠ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಲಾಕ್ ಡೌನ್ ಮುಗಿದು ಜನ ಜೀವನ ಸಹಜ ಸ್ಥಿತಿಗೆ ಬರುತ್ತಿದ್ದಂತೆ ನಿರ್ಮಾಪಕರು ತಮ್ಮ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಿದ್ದಾರೆ.

ಈಗಾಗಲೇ ಬಹುತೇಕ ದೊಡ್ಡ ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಲಾಕ್ ಆಗಿದೆ. ಕನ್ನಡ, ತಮಿಳು, ತೆಲುಗೂ ಹಾಗೂ ಹಿಂದಿಯ ದೊಡ್ಡ ಬಜೆಟ್ ನ ಬಿಗ್ ಸ್ಟಾರ್ ಸಿನಿಮಾಗಳು ಒಂದೊಂದು ದಿನಾಂಕವನ್ನು ಅನೌನ್ಸ್ ಮಾಡಿದ್ದಾರೆ. ಇದೀಗ ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ ಸಿನಿಮಾದ ಬಿಡುಗಡೆಯ ದಿನಾಂಕ ಬಹಿರಂಗ ವಾಗಿದೆ.

ಮುಂದಿನ ವರ್ಷ ಸಂಕ್ರಾಂತಿಗೆ ಸರ್ಕಾರು ವಾರಿ ಪಾಟ

ಮುಂದಿನ ವರ್ಷ ಸಂಕ್ರಾಂತಿಗೆ ಸರ್ಕಾರು ವಾರಿ ಪಾಟ

ಇತ್ತೀಚಿಗಷ್ಟೆ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿರುವ ಸಿನಿಮಾತಂಡ ಆಗಲೆ ರಿಲೀಸ್ ಡೇಟ್ ಅನೌನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಮಹೇಶ್ ಬಾಬು ಮುಂದಿನ ವರ್ಷ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಹೌದು, 2022 ಸಂಕ್ರಾಂತಿ ಹಬ್ಬಕ್ಕೆ ಸರ್ಕಾರು ವಾರಿ ಪಾಟ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.

ಪೋಸ್ಟರ್ ರಿಲೀಸ್ ಮಾಡಿ ರಿಲೀಸ್ ಡೇಟ್ ಅನೌನ್ಸ್

ಪೋಸ್ಟರ್ ರಿಲೀಸ್ ಮಾಡಿ ರಿಲೀಸ್ ಡೇಟ್ ಅನೌನ್ಸ್

ಚಿತ್ರದ ರಿಲೀಸ್ ಬಗ್ಗೆ ಸಿನಿಮಾತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಮಹೇಶ್ ಬಾಬು ಕೈಯಲ್ಲಿ ಕೀ ಬಂಚ್ ಹಿಡಿದಿರುವ ಪೋಸ್ಟರ್ ಶೇರ್ ಮಾಡುವ ಮೂಲಕ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.

2020 ಸಂಕ್ರಾಂತಿಗೆ ರಿಲೀಸ್ ಆಗಿತ್ತು 'ಸರಿಲೇರು ನೀಕೆವ್ವರು'

2020 ಸಂಕ್ರಾಂತಿಗೆ ರಿಲೀಸ್ ಆಗಿತ್ತು 'ಸರಿಲೇರು ನೀಕೆವ್ವರು'

ಮಹೇಶ್ ಬಾಬು ನಟನೆಯ ಸರಿಲೇರು ನೀಕೆವ್ವರು ಸಿನಿಮಾ ಸಹ ಸಂಕ್ರಾಂತಿ ಸಮಯದಲ್ಲಿ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಸಿಲಿತ್ತು. 2020 ಜನವರಿ 11ರಂದು ಸರಿಲೇರು ನೀಕೆವ್ವರು ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾ ಬಳಿಕ ಮಹೇಶ್ ಬಾಬು ಅಭಿಮಾನಿಗಳ ಮುಂದೆ ಬಂದಿಲ್ಲ. ಈ ವರ್ಷವೂ ಮಹೇಶ್ ಬಾಬು ನಟನೆಯ ಸಿನಿಮಾ ರಿಲೀಸ್ ಆಗುತ್ತಿಲ್ಲ. ಪ್ರಿನ್ಸ್ ನೋಡಬೇಕು ಎಂದರೆ ಇನ್ನೂ ಒಂದು ವರ್ಷ ಕಾಯಲೇ ಬೇಕು.

ಕೀರ್ತಿ ಸುರೇಶ್ ನಾಯಕಿ

ಕೀರ್ತಿ ಸುರೇಶ್ ನಾಯಕಿ

ಚಿತ್ರದಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ ಮಹಾನಟಿ ನಾಯಕಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಕೀರ್ತಿ ಸುರೇಶ್ ಮತ್ತು ಮಹೇಶ್ ಬಾಬು ಒಟ್ಟಿಗೆ ನಟಿಸುತ್ತಿದ್ದಾರೆ. ಅಂದಹಾಗೆ ಈಗಾಗಲೇ ಚಿತ್ರೀಕರಣ ದುಬೈನಲ್ಲಿ ನಡೆಯುತ್ತಿದ್ದು, ಕೀರ್ತಿ ಸುರೇಶ್ ಲುಕ್ ಲೀಕ್ ಆಗಿದೆ. ಅಂದಹಾಗೆ ಚಿತ್ರಕ್ಕೆ ಗೀತಾ ಗೋವಿಂದಂ ಖ್ಯಾತಿಯ ನಿರ್ದೇಶಕ ಪರಶುರಾಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಎಸ್ ಎಸ್ ತಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

More from Filmibeat

English summary
Telugu Actor Mahesh Babu starrer Sarkaru Vaari Paata to release on Sankranti 2022.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X