ಎರಡು ವಾರದಲ್ಲಿ 'ಸರ್ಕಾರು ವಾರಿ ಪಾಟ' ಸಿನಿಮಾ ಗಳಿಸಿದ್ದೆಷ್ಟು?
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾ ಮೇ 12 ರಂದು ದೇಶದಾದ್ಯಂತ ರಿಲೀಸ್ ಆಗಿತ್ತು. ರಿಲೀಸ್ ಆದ ದಿನದಿಂದ ಇಲ್ಲಿಯವರೆಗೂ ಥಿಯೇಟರ್‌ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗದೇ ಇದ್ದರೂ ಸಿನಿಮಾ ಕಲೆಕ್ಷನ್ ಮಾಡುವಲ್ಲಿ ಹಿಂದೇಟು ಹಾಕಿಲ್ಲ. ಭರ್ಜರಿ ಕಲೆಕ್ಷನ್ ಮಾಡಿಕೊಳ್ಳುತ್ತಾ ಮುಂದೆ ಸಾಗಿದೆ.
ನಟ ಮಹೇಶ್ ಬಾಬುಗೆ ಟಾಲಿವುಡ್ ಮಾತ್ರವಲ್ಲದೆ ಬೇರೆ ಭಾಷೆಯ ಅಭಿಮಾನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಸಿನಿಮಾ ರಿಲೀಸ್ ಆಗಿ ಎರಡು ವಾರಗಳು ಕಳೆಯುತ್ತಾ ಬಂದರೂ ಈಗಲೂ ಸಿನಿಮಾ ಅದೇ ರೀತಿ ಪ್ರದರ್ಶನ ಕಾಣುತ್ತಿದೆ.
ಸಿನಿಮಾವನ್ನು ಅಭಿಮಾನಿಗಳು ಅಪ್ಪಿಕೊಂಡಿರುವುದಕ್ಕೆ ನಟ ಮಹೇಶ್ ಬಾಬು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಹೇಶ್ ಬಾಬು "ಸರ್ಕಾರು ವಾರಿ ಪಾಟ ಸಿನಿಮಾ ಸಕ್ಸಸ್‌ಗೆ ಕಾರಣರಾದ ನನ್ನೆಲ್ಲಾ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದ. ಸಿನಿಮಾವನ್ನು ಬ್ಲಾಕ್ ಬಸ್ಟರ್ ಮಾಡಿದ್ದಕ್ಕೆ ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಚಿರಖುಣಿಯಾಗಿರುತ್ತೇನೆ." ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಸಿನಿಮಾ ತಂಡಕ್ಕೆ ಹಾಗೂ ಸಹ ಕಲಾವಿದರಿಗೂ ಸಹ ತಮ್ಮ ಧನ್ಯವಾದವನ್ನ ತಿಳಿಸಿದ್ದಾರೆ.

ಸದ್ಯ ಮಹೇಶ್ ಬಾಬು ಸಿನಿಮಾ ವೀಕ್ ಡೇಸ್ ಹಾಗೂ ವೀಕೆಂಡ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದು, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಈಗಲೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಳೆದ ಎರಡು ವಾರಗಳಲ್ಲಿ ಸಿನಿಮಾ ಕಲೆಕ್ಷನ್ 200 ಕೋಟಿ ಸಮೀಪಿಸುತ್ತಿದ್ದು, ಮೇ 20 ರ ಶುಕ್ರವಾರದವರೆಗೆ 185.60 ಕೋಟಿ ಗಳಿಕೆ ಕಂಡಿದೆ. ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲಿ 178.50 ಕೋಟಿ ಗಳಿಕೆ ಕಂಡಿತ್ತು. ಆದಾದ ಬಳಿಕ ಕೊಂಚ ಇಳಿಕೆಯಾದರೂ ಸಹ ಎರಡನೇ ವಾರದಲ್ಲಿ ಮೊದಲ ದಿನ 3.47 ಕೋಟಿ ಎರಡನೇ ದಿನ 3.63 ಕೋಟಿ ಗಳಿಸಿ ಒಟ್ಟಾರೆ. 185.60 ಕೋಟಿ ಗಳಿಕೆ ಮಾಡಿದೆ. ಇನ್ನು ಮೇ 21-22 ವೀಕೆಂಡ್ ಆಗಿರುವುದರಿಂದ ಚಿತ್ರ 200 ಕೋಟಿ ದಾಟುವ ಎಲ್ಲಾ ಲಕ್ಷಣಗಳು ಇದೆ.

ಸಿನಿಮಾ ರಿಲೀಸ್ ಆದ ಸಮಯದಲ್ಲಿ ಚಿತ್ರದ ಬಗ್ಗೆ ಒಂದು ವರ್ಗದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಸಹ ಸಿನಿಮಾ ಮಾತ್ರ ಕುಗ್ಗದೆ ಭರ್ಜರಿ ಕಲೆಕ್ಷನ್ ಮಾಡಿಕೊಳ್ಳುವತ್ತಾ ಸಾಗಿದೆ. ಇನ್ನು 'ಸರ್ಕಾರು ವಾರಿ ಪಾಟ' ಸಿನಿಮಾ ಈ ಮಟ್ಟಿಗೆ ಕಲೆಕ್ಷನ್ ಮಾಡಿಕೊಳ್ಳಲು ಎರಡು ಕಾರಣಗಳಿವೆ. ಒಂದು ಆಚಾರ್ಯ ಸಿನಿಮಾ ಪ್ಲಾಪ್ ಆಗಿದ್ದು, ಇನ್ನೊಂದು ಸಿನಿಮಾ ರಿಲೀಸ್ ಆದ ನಂತರ ಯಾವುದೇ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗದೇ ಇರುವುದು ಕೂಡ ಸಿನಿಮಾ ಕಲೆಕ್ಷನ್‌ಗೆ ಪ್ಲಸ್ ಪಾಯಿಂಟ್ ಆಯಿತು. ಒಟ್ಟಿನಲ್ಲಿ 'ಸರ್ಕಾರು ವಾರಿ ಪಾಟ' ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು, ಇನ್ನೆರಡು ದಿನಗಳಲ್ಲಿ 200 ಗಡಿ ದಾಟುವ ಎಲ್ಲಾ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications











