ಮಹೇಶ್ ಬಾಬು ಸಿನಿಮಾಗೆ ನಾಯಕಿ ಫಿಕ್ಸ್: ಪ್ರಿನ್ಸ್ ಜೊತೆ ಕೀರ್ತಿ ಸುರೇಶ್ ರೊಮ್ಯಾನ್ಸ್

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಹೊಸ ಸಿನಿಮಾ ಅನೌನ್ಸ್ ತುಂಬಾ ದಿನಗಳೆ ಕಳೆದಿವೆ. ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಅಭಿಮಾನಿಗಳ ನಿದ್ದೆ ಗೆಡಿಸಿದೆ. ಸರ್ಕಾರ ವಾರಿ ಪಾಟ ಎನ್ನುವ ವಿಭಿನ್ನ ಟೈಟಲ್ ಮತ್ತು ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಮಹೇಶ್ ಬಾಬು, ಅಭಿಮಾನಿಗಳಲ್ಲಿ ಮತ್ತೊಂದು ದೊಡ್ಡ ಪ್ರಶ್ನೆ ಎದುರಾಗಿದೆ.

ಮಹೇಶ್ ಬಾಬುಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಚಿತ್ರತಂಡ ಅಧಿಕೃತವಾಗಿ ನಾಯಕಿಯ ಹೆಸರನ್ನು ಅನೌನ್ಸ್ ಮಾಡಿಲ್ಲ. ಚಿತ್ರಕ್ಕೆ ಸಾಕಷ್ಟು ನಾಯಕಿಯರ ಹೆಸರುಗಳು ಕೇಳಿ ಬರುತ್ತಿವೆ. ಈ ಮೊದಲು ಮಹೇಶ್ ಬಾಬು ಜೊತೆ ಬಾಲಿವುಡ್ ನಟಿಯರಾದ ಕಿಯಾರ ಅಡ್ವಾನಿ, ಶ್ರದ್ಧಾ ಕಪೂರ್ ಮತ್ತು ಸಾಯಿ ಮಂಜ್ರೇಕರ್ ಹೆಸರು ಕೇಳಿ ಬರುತ್ತಿತ್ತು. ಆದರೀಗ ಮಹೇಶ್ ಬಾಬು ಜೊತೆ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

ಕಿಯಾರಾ ಅಡ್ವಾನಿ ಹೆಸರು ಕೇಳಿ ಬರುತ್ತಿತ್ತು

ಕಿಯಾರಾ ಅಡ್ವಾನಿ ಹೆಸರು ಕೇಳಿ ಬರುತ್ತಿತ್ತು

ಬಾಲಿವುಡ್ ನ ಸ್ಟಾರ್ ನಟಿ ಕಿಯಾರಾ ಅಡ್ವಾನಿ ಮತ್ತೆ ಟಾಲಿವುಡ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿತ್ತು. ಮಹೇಶ್ ಬಾಬು ಹೊಸ ಸಿನಿಮಾ ಸರ್ಕಾರ ವಾರಿ ಪಾಟ ಚಿತ್ರಕ್ಕೆ ಕಿಯಾರಾ ನಾಯಕಿಯಾಗಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದು ಹೇಳಲಾಗಿತ್ತು. ಆದರೀಗ ಕಿಯಾರಾ ಬದಲಿಗೆ ಮತ್ತೋರ್ವ ನಟಿ ಆಯ್ಕೆಯಾಗಿದ್ದಾರೆ.

ಸಾಯಿ ಮಂಜ್ರೇಕರ್ ಸಹ ನಟಿಸುತ್ತಿಲ್ಲ

ಸಾಯಿ ಮಂಜ್ರೇಕರ್ ಸಹ ನಟಿಸುತ್ತಿಲ್ಲ

ಸರ್ಕಾರ ವಾರಿ ಪಾಟ ಸಿನಿಮಾಗೆ ನಾಯಕಿಯಾರಾಗ್ತಾರೆ ಎನ್ನುವ ಲಿಸ್ಟ್ ನಲ್ಲಿ ಬಾಲಿವುಡ್ ನ ಮತ್ತೋರ್ವ ನಟಿ ಸಾಯಿ ಮಂಜ್ರೇಕರ್ ಹೆಸರು ಕೇಳಿ ಬಂದಿತ್ತು. ಮಹೇಶ್ ಬಾಬು ಜೊತೆ ಸಾಯಿ ರೊಮ್ಯಾನ್ಸ್ ಮಾಡುವುದು ಬಹುತೇಕ ಖಚಿತ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೀಗ ನಾಯಕಿಯಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೀಗ ಸಾಯಿ ಮಂಜ್ರೇಕರ್ ಸಹ ನಟಿಸುತ್ತಿಲ್ಲ.

ಮಹೇಶ್ ಬಾಬು ಜೊತೆ ಕೀರ್ತಿ ಸುರೇಶ್ ರೊಮ್ಯಾನ್ಸ್

ಮಹೇಶ್ ಬಾಬು ಜೊತೆ ಕೀರ್ತಿ ಸುರೇಶ್ ರೊಮ್ಯಾನ್ಸ್

ಮಹೇಶ್ ಬಾಬು ಜೊತೆ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ರೊಮ್ಯಾನ್ಸ್ ಮಾಡುವುದು ಬಹುತೇಕ ಖಚಿತವಾಗಿದೆ. ಮೊದಲ ಬಾರಿಗೆ ಕೀರ್ತಿ ಸುರೇಶ್ ಮಹೇಶ್ ಬಾಬು ಜೊತೆ ಅಭಿನಯಿಸುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಕೀರ್ತಿ ಈಗ ಮಹೇಶ್ ಬಾಬು ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.

ಕೀರ್ತಿ ಸುರೇಶ್ ಸಿನಿಮಾಗಳು

ಕೀರ್ತಿ ಸುರೇಶ್ ಸಿನಿಮಾಗಳು

ಕೀರ್ತಿ ಸುರೇಶ್ ಅಭಿನಯದ ಪೆಂಗ್ವಿನ್ ಸಿನಿಮಾ ಇಂದು ಒಟಿಟಿಯಲ್ಲಿ ರಿಲೀಸ್ ಆಗಿದೆ. ಜೊತೆಗೆ ಗುಡ್ ಲಕ್, ಸಖಿ, ಮಿಸ್ ಇಂಡಿಯ, ರಂಗ್ ದೇ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ರಜನಿಕಾಂತ್ ಅಭಿನಯದ ಅಣ್ಣಾತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ಸರ್ಕಾರ್ ವಾರಿ ಪಾಟ' ಸಿನಿಮಾದಲ್ಲಿ ಕನ್ನಡದ ಸ್ಟಾರ್ಸ್

'ಸರ್ಕಾರ್ ವಾರಿ ಪಾಟ' ಸಿನಿಮಾದಲ್ಲಿ ಕನ್ನಡದ ಸ್ಟಾರ್ಸ್

'ಸರ್ಕಾರ್ ವಾರಿ ಪಾಟ' ಸಿನಿಮಾದಲ್ಲಿ ಕನ್ನಡ ನಟರ ಹೆಸರು ಸಹ ಕೇಳಿಬರುತ್ತಿದೆ. ಕನ್ನಡ ಸ್ಟಾರ್ ಸುದೀಪ್ ಅಥವಾ ಉಪೇಂದ್ರ ಮಹೇಶ್ ಬಾಬು ಎದುರು ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸಿನಿಮಾತಂಡ ಇನ್ನೂ ಅಧಿಕೃತಗೊಳಿಸಿಲ್ಲ.

More from Filmibeat

English summary
Tollywood Actor Mahesh Babu to romance with Keerthy Suresh in Sarkari Vari Paata.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X