For Quick Alerts
  ALLOW NOTIFICATIONS  
  For Daily Alerts

  'ಸರ್ಕಾರು ವಾರಿ ಪಾಟ' ಚಿತ್ರದ ಸಂಭಾಷಣೆ - ದೃಶ್ಯಗಳು ಲೀಕ್: ಮಹೇಶ್ ಬಾಬು ಕೆಂಡಾಮಂಡಲ

  By ಫಿಲ್ಮಿಬೀಟ್ ಡೆಸ್ಕ್
  |

  ಟಾಲಿವುಡ್ ಸ್ಟಾರ್ ನಟ, ಪ್ರಿನ್ಸ್ ಮಹೇಶ್ ಬಾಬು ಸದ್ಯ ಬಹುನಿರೀಕ್ಷೆಯ 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಮಹೇಶ್ ಬಾಬು ಚಿತ್ರದ ಸಾಕಷ್ಟು ಚಿತ್ರೀಕರಣ ಸಹ ಮಾಡಿಮುಗಿಸಿದ್ದಾರೆ.

  ಸದ್ಯ ಸರ್ಕಾರಿ ವಾರಿ ಪಾಟ ಚಿತ್ರದ ರಾತ್ರಿ ಚಿತ್ರೀಕರಣ ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ 'ಸರ್ಕಾರು ವಾರಿ ಪಾಟ'ದ ಇಡೀತಂಡ ನೈಟ್ ಶೂಟಿಂಗ್ ನಲ್ಲಿ ನಿರತವಾಗಿದೆ. ಈ ನಡುವೆ ಚಿತ್ರೀದ ಕೆಲವು ದೃಶ್ಯಗಳು, ಫೋಟೋಗಳು ಮತ್ತು ಡೈಲಾಗ್ ಗಳು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

  ಸೋರಿಕೆ ಆಗಿರುವುದು ಮಹೇಶ್ ಬಾಬು ಅವರ ಪ್ರಮುಖ ಡೈಲಾಗ್ ಗಳಾಗಿವೆ ಎನ್ನಲಾಗುತ್ತಿದೆ. ಈ ಸಂಭಾಷಣೆಯ ತುಣುಕುಗಳು ಎಲ್ಲಾ ಕಡೆ ಹರಿದಾಡುತ್ತಿವೆ. ದೃಶ್ಯಗಳು ಮತ್ತು ಪ್ರಮುಖ ಸಂಭಾಷಣೆ ಲೀಕ್ ಆಗಿ ವೈರಲ್ ಆಗುತ್ತಿದ್ದಂತೆ ತಯಾರಕರು ಅಭಿಮಾನಿಗಳಲ್ಲಿ ಶೇರ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

  ಇದರಿಂದ ನಟ ಮಹೇಶ್ ಬಾಬು ತುಂಬ ಅಸಮಾಧಾನಗೊಂಡಿದ್ದಾರೆ. ಅಲ್ಲದೆ ಚಿತ್ರೀಕರಣ ಸೆಟ್ ನಲ್ಲಿ ದೃಶ್ಯಗಳು ಮತ್ತು ಸಂಭಾಷಣೆ ಲೀಕ್ ಆಗದ್ದಂತೆ ತಡೆಯಲು ಭದ್ರತೆ ಕಡೆ ಗಮನ ಕೊಡಿ ಎಂದು ಮಹೇಶ್ ಬಾಬು ಎಚ್ಚರಿಕೆ ನೀಡಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

  ಚಿತ್ರದಲ್ಲಿ ಸಾಕಷ್ಟು ಕುತೂಹಲ ಇರುವ ಕಾರಣ ಚಿತ್ರೀಕರಣ ವೇಳೆಯೇ ಸಂಭಾಷಣೆ ಮತ್ತು ಪ್ರಮುಖ ದೃಶ್ಯಗಳು ಲೀಕ್ ಆದರೆ ಪ್ರಕ್ಷಕರಿಗೆ ಚಿತ್ರದ ಮೇಲೆ ಆಸಕ್ತಿ ಇರಲ್ಲ ಎಂದು ಮಹೇಶ್ ಬಾಬು ಬೇಸರ ವ್ಯಕ್ತಪಡಿಸಿದ್ದಾರಂತೆ. ಸದ್ಯ ಚಿತರೀಕರಣ ಸೆಟ್ ನಲ್ಲಿ ಯಾವುದೇ ದೃಶ್ಯಗಳು ಲೀಕ್ ಆಗದ್ದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

  ದುನಿಯಾ ಸಿನಿಮಾದ ಕಥೆಯಂತೆ ನಿಜಜೀವನದಲ್ಲಿಯೂ ಆಯ್ತು

  ಸರ್ಕಾರು ವಾರಿ ಪಾಟ ನಿರ್ದೇಶಕ ಪರಶುರಾಮ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಚಿತ್ರದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಮೊದಲ ಬಾರಿಗೆ ಮಹೇಶ್ ಬಾಬು ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ ಸರ್ಕಾರು ಪಾರಿ ಪಾಟ ಚಿತ್ರವನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

  English summary
  Mahesh Babu upset with Sarkaru Vaari Paata after snaps and set work of the film leaked on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X