ಧೂಮಪಾನ ಮಾಡುವುದಿಲ್ಲವಂತೆ ಮಹೇಶ್ ಬಾಬು?: ಹಾಗಾದ್ರೆ ಗುಂಟೂರು ಖಾರಂನಲ್ಲಿ ಇರೋದೇನು?

ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಇತ್ತೀಚಿನ ಚಿತ್ರ 'ಗುಂಟೂರು ಖಾರಂ' ಬಾಕ್ಸ್ ಆಫೀಸ್‌ನಲ್ಲಿ ಬ್ಯಾಲೆನ್ಸ್ ಕಾಣುತ್ತಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾ ವಿಮರ್ಶಕರಿಂದ ಮಿಶ್ರ, ನಕಾರಾತ್ಮಕ ವಿಮರ್ಶೆಗಳನ್ನು ಪಡೆದಿದ್ದರೂ, ಪ್ರಸ್ತುತ ಚಿತ್ರಮಂದಿರಗಳಲ್ಲಿ ಓಡುತ್ತಿದೆ.

ಚಿತ್ರದಲ್ಲಿ ನಟ ಮಹೇಶ್ ಬಾಬು ಅವರು ಸಕತ್ ಬೀಡಿ ಸೇದುತ್ತಿರುತ್ತಾರೆ. ಪ್ರತಿ ದೃಶ್ಯದಲ್ಲೂ ಅವರು ಸಕತ್ ಸ್ಟೈಲಿಶ್ ಆಗಿ ಬೀಡಿ ಸೇದುತ್ತಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ, ಈ ಬಗ್ಗೆ ಆಸಕ್ತಿದಾಯಕ ವಿಚಾರವನ್ನು ಹಂಚಿಕೊಂಡಿದ್ದಾರೆ. ಇದು ತಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ಕೂಡ ತಿಳಿಸಿದ್ದಾರೆ. ಇದರ ಜೊತೆಗೆ ತಾವು ಧೂಮಪಾನ ಮಾಡುವುದಿಲ್ಲ ಮತ್ತು ಅದನ್ನು 'ಪ್ರೋತ್ಸಾಹಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

Mahesh Babu used ayurvedic beedi in Guntur Kaaram, he neither smokes nor encourages smoking

ಸಿನಿಮಾದಲ್ಲಿ ನಿಜವಾದ ಬೀಡಿ ಅಥವಾ ಸಿಗರೇಟ್ ಬಳಸಿಲ್ಲ

ಸಂದರ್ಶನದ ವೇಳೆ ಮಹೇಶ್ ಬಾಬು ಅವರು ಸಿನಿಮಾದಲ್ಲಿ ಬಳಸಿದ ಬೀಡಿಗಳ ಬಗ್ಗೆ ಪ್ರಶ್ನಿಸಲಾಗಿದೆ. 'ಗುಂಟೂರು ಖಾರಂ' ಚಿತ್ರದ ಚಿತ್ರೀಕರಣದ ವೇಳೆ ಮಹೇಶ್ ಬಾಬು ನಿಜವಾದ ಬೀಡಿ ಅಥವಾ ಸಿಗರೇಟ್ ಬಳಸಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಬದಲಾಗಿ ಲವಂಗದ ಎಲೆಯಿಂದ ತಯಾರಿಸಿದ ಆಯುರ್ವೇದ ಬೀಡಿಯನ್ನು ನೀಡಲಾಗಿತ್ತು ಎಂಬುದನ್ನು ತಿಳಿಸಿದ್ದಾರೆ.

ನಾನು ಧೂಮಪಾನ ಮಾಡುವುದಿಲ್ಲ ಮತ್ತು ಧೂಮಪಾನವನ್ನು ಬೆಂಬಲಿಸುವುದಿಲ್ಲ ಎಂದು ನಟ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ಅವರಿಗೆ ಶೂಟಿಂಗ್ ಮೊದಲಿಗೆ ನಿಜವಾದ ಬೀಡಿ ನೀಡಲಾಗಿತ್ತು. ಆದರೆ ಅದರಿಂದ 'ಮೈಗ್ರೇನ್' ಬಂದಿತ್ತು. ಹೀಗಾಗಿ ನಿರ್ದೇಶಕ ತ್ರಿವಿಕ್ರಮ್ ಜೊತೆ ಚರ್ಚಿಸಿದ್ದರು, ಬಳಿಕ ಯೋಚನೆ ಮಾಡಿ ಆಯುರ್ವೇದ ಬೀಡಿಗಳನ್ನು ಟ್ರೈ ಮಾಡಲು ನಿರ್ಧರಿಸಿದರು ಎಂದು ಹೇಳಿಕೊಂಡಿದ್ದಾರೆ.

ಇನ್ನು, ಈ ಆಯುರ್ವೇದ ಬೀಡಿಗಳನ್ನು ಸೇದಿದಾಗ ಫ್ರೇಸ್‌ನೆಸ್ ಫೀಲ್ ಆಯಿತು. ಪುದೀನಾ ರುಚಿಯನ್ನು ಹೊಂದಿದ್ದ ಈ ಆಯುರ್ವೇದಿಕ್ ಬೀಡಿಯನ್ನು ತಕ್ಷಣವೇ ಇಷ್ಟಪಡಲು ಆರಂಭಿಸಿದ್ದರು. ಈ ಬೀಡಿಗಳ ಉತ್ತಮ ಅಂಶವೆಂದರೆ, ಇವುಗಳು ಸಂಪೂರ್ಣವಾಗಿ ತಂಬಾಕು ಮುಕ್ತವಾಗಿದ್ದವು ಎಂಬುದನ್ನು ಹೇಳಿದ್ದಾರೆ.

Mahesh Babu used ayurvedic beedi in Guntur Kaaram, he neither smokes nor encourages smoking

ಗುಂಟೂರು ಖಾರಂ ಸಿನಿಮಾ

ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಗುಂಟೂರು ಖಾರಂ ಸಿನಿಮಾ ಜನವರಿ 12 ರಂದು ಬಿಡುಗಡೆಯಾಗಿದೆ. ಮಿಶ್ರ ಪ್ರತಿಕ್ರಿಯೆಗಳ ಹೊರತಾಗಿಯೂ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರದಲ್ಲಿ ನಟಿಯರಾದ ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ, ರಮ್ಯಾ ಕೃಷ್ಣ, ಜಯರಾಮ್, ಪ್ರಕಾಶ್ ರಾಜ್, ರಾವ್ ರಮೇಶ್, ವೆನ್ನೆಲ ಕಿಶೋರ್ ಮುಂತಾದ ಪ್ರಮುಖ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ತ್ರಿವಿಕ್ರಮ್ ಶ್ರೀನಿವಾಸ್ ಬರೆದು ನಿರ್ದೇಶಿಸಿರುವ ಗುಂಟೂರು ಖಾರಂ, ಮಹೇಶ್ ಬಾಬು ಅವರೊಂದಿಗಿನ ಮೂರನೇ ಸಿನಿಮಾ. ಈ ಹಿಂದೆ ಅಥಡು ಮತ್ತು ಖಲೇಜಾದಂತಹ ಸಿನಿಮಾಗಳು ಬಂದಿದ್ದವು. ಇನ್ನು, ಇತ್ತೀಚೆಗೆ ಮಹೇಶ್ ಬಾಬು ಅವರ ಮನೆಯಲ್ಲಿ ಗುಂಟೂರು ಖಾರಂ ಚಿತ್ರತಂಡ ಚಿತ್ರದ ಸಕ್ಸಸ್ ಆಚರಿಸಿದೆ.

ಸಕ್ಸಸ್ ಪಾರ್ಟಿಯಲ್ಲಿ ನಟಿ ಶ್ರೀಲೀಲಾ, ಮಿನಾಕ್ಷಿ ಚೌಧರಿ, ಚಿತ್ರದ ನಿರ್ಮಾಪಕ ನಾಗ ವಂಶಿ ಮತ್ತು ವಿತರಕ ದಿಲ್ ರಾಜು ಅವರ ಪತ್ನಿಯೊಂದಿಗೆ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಮಹೇಶ್ ಬಾಬು ಅವರ ಪತ್ನಿ ನಮ್ರತಾ ಶಿರೋಡ್ಕರ್ ಸೇರಿದಂತೆ ಹಲವು ನಟ ನಟಿಯರು ಈ ಸಂಭ್ರಮದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

More from Filmibeat

English summary
Mahesh Babu used ayurvedic beedi in Guntur Kaaram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X