For Quick Alerts
  ALLOW NOTIFICATIONS  
  For Daily Alerts

  ಅರಿಶಿಣ ಶಾಸ್ತ್ರದ ಫೋಟೋ ಹಂಚಿಕೊಂಡ ನಟ ಮಹೇಶ್ ಬಾಬು ಪತ್ನಿ ನಮ್ರತಾ

  By ಫಿಲ್ಮ್ ಡೆಸ್ಕ್
  |

  ಖ್ಯಾತ ನಟ ಮಹೇಶ್ ಬಾಬು ಪತ್ನಿ ನಮ್ರತಾ ಒಂದು ಕಾಲದಲ್ಲಿ ಟಾಪ್ ನಟಿ. ಆದರೆ ಮಹೇಶ್ ಬಾಬು ಜೊತೆ ವಿವಾಹವಾದ ಬಳಿಕ ನಟನೆಯಿಂದ ದೂರ ಉಳಿದ್ದಾರೆ. ಮದುವೆ ನಂತರ ನಮ್ರತಾ ಹೆಚ್ಚಿಗೆ ಸಿನಿಮಾ ಸಮಾರಂಭಗಳಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಹೆಚ್ಚಾಗಿ ಸಕ್ರೀಯರಾಗಿರಲಿಲ್ಲ.

  KGF ಎಡಿಟರ್ ನಮ್ಮ ಸಿನಿಮಾ ಎಡಿಟ್ ಮಾಡಿದ್ರು | Raghu Samarth | Filmibeat Kannada

  ಆದರೆ ಇತ್ತೀಚಿಗೆ ನಮ್ರತಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀವ್ ಆಗಿದ್ದಾರೆ. ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಇತ್ತೀಚಿಗೆ ನಮ್ರತಾ ಮದುವೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಮದುವೆಗೂ ಮುನ್ನಾದಿನದ ಹಳದಿ ಶಾಸ್ತ್ರದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮುಂದೆ ಓದಿ..

  2005ರಲ್ಲಿ ಮಹೇಶ್ ಬಾಬು ಮತ್ತು ನಮ್ರತಾ ಮದುವೆ

  2005ರಲ್ಲಿ ಮಹೇಶ್ ಬಾಬು ಮತ್ತು ನಮ್ರತಾ ಮದುವೆ

  ಮಹೇಶ್ ಬಾಬು ಮತ್ತು ನಮ್ರತಾ ಅವರದ್ದು ಪ್ರೇಮ ವಿವಾಹ. 2000ರಲ್ಲಿ ಸಿನಿಮಾ ಸೆಟ್ ನಲ್ಲಿ ಭೇಟಿಯಾದ ಮಹೇಶ್ ಬಾಬು ಮತ್ತು ನಮ್ರತಾ ಇಬ್ಬರು ಉತ್ತಮ ಸ್ನೇಹಿತರಾಗಿದ್ದರು. ನಂತರ ಇಬ್ಬರ ಸ್ನೇಹ ಪ್ರೀತಿಗೆ ತಿರುಗೆ 2005ರಲ್ಲಿ ಮದುವೆಯಾಗಿದ್ದಾರೆ. ಇಬ್ಬರು ಹಿಂದೂ ಸಂಪ್ರದಾಯದಂತೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಮಹೇಶ್ ಬಾಬು ಪತ್ನಿ ನಮ್ರತಾ ಹಾಕಿಸಿಕೊಂಡಿರುವ ಟ್ಯಾಟೂ ವಿಷಯ ಬಹಿರಂಗಮಹೇಶ್ ಬಾಬು ಪತ್ನಿ ನಮ್ರತಾ ಹಾಕಿಸಿಕೊಂಡಿರುವ ಟ್ಯಾಟೂ ವಿಷಯ ಬಹಿರಂಗ

  ದೊಡ್ಡ ದಿನಕ್ಕಾಗಿ ಕಾಯುತ್ತಿದ್ದೆ

  ದೊಡ್ಡ ದಿನಕ್ಕಾಗಿ ಕಾಯುತ್ತಿದ್ದೆ

  ಮಾಜಿ ಮಿಸ್ ಇಂಡಿಯಾ ಆಗಿರುವ ನಮ್ರತಾ ಶಿರೋಡ್ಕರ್, ಮದುವೆ ನಂತರ ಸಿನಿಮಾದಿಂದ ದೂರ ಉಳಿದಿದ್ದಾರೆ. ಮಹೇಶ್ ಬಾಬು ಮತ್ತು ನಮ್ರತಾ ಸರಳವಾಗಿ ಹಸೆಮಣೆ ಏರಿದ್ದಾರೆ. ಮದುವೆ ಸುಂದರಫೋಟೋವೊಂದನ್ನು ನಮ್ರತಾ ಈಗ ಹಂಚಿಕೊಂಡಿದ್ದಾರೆ. ಹಳದಿ ಶಾಸ್ತ್ರದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋ ಜೊತೆಗೆ "ಹಳದಿ ಶಾಸ್ತ್ರ, ದೊಡ್ಡ ದಿನಕ್ಕಾಗಿ ಕಾಯುತ್ತಿರುವುದು, ಹಳೆಯ ನೆನಪು" ಎಂದು ಬರೆದುಕೊಂಡಿದ್ದಾರೆ.

  ಮುದ್ದಾದ ಜೋಡಿಗೆ ಇಬ್ಬರು ಮಕ್ಕಳು

  ಮುದ್ದಾದ ಜೋಡಿಗೆ ಇಬ್ಬರು ಮಕ್ಕಳು

  ಮಹೇಶ್ ಬಾಬು ಮತ್ತು ನಮ್ರತಾ ಇಬ್ಬರು ಸಂತೋಷದ ಜೀವನ ಸಾಗಿಸುತ್ತಿದ್ದಾರೆ. ಟಾಲಿವುಡ್ ನ ಮುದ್ದಾದ ದಂಪತಿಗೆ ಸಿತಾರಾ ಮತ್ತು ಗೌತಮ್ ಇಬ್ಬರು ಮಕ್ಕಳಿದ್ದಾರೆ. ನಮ್ರತಾ ಸಿನಿಮಾದಿಂದ ದೂರ ಉಳಿದಿದ್ದರು ಪತಿ ಮಹೇಶ್ ಬಾಬು ಸಿನಿಮಾ ಜೀವನವನ್ನು ನಿಭಾಯಿಸಿಕೊಂಡು ಬರುತ್ತಿದ್ದಾರೆ.

  ಮಹೇಶ್ ಬಾಬು ಮೇಲೆ ಪ್ರೀತಿ ಮೊಳೆತ ಸಂದರ್ಭ ವರ್ಣಿಸಿದ ನಮ್ರತಾಮಹೇಶ್ ಬಾಬು ಮೇಲೆ ಪ್ರೀತಿ ಮೊಳೆತ ಸಂದರ್ಭ ವರ್ಣಿಸಿದ ನಮ್ರತಾ

  ಮಹೇಶ್ ಬಾಬು ಸಿನಿಮಾ

  ಮಹೇಶ್ ಬಾಬು ಸಿನಿಮಾ

  ಮಹೇಶ್ ಬಾಬು ಸದ್ಯ ಸರ್ಕಾರ್ ವಾರಿ ಪಾಟ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಜೊತೆ ಕೀರ್ತಿ ಸುರೇಶ್ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಫಸ್ಟ್ ಲುಕ್ ರಿಲೀಸ್ ಆಗಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಮಹೇಶ್ ಬಾಬು ಕೊನೆಯದಾಗಿ ಸರಿಲೇರು ನಿಕೆವ್ವರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

  English summary
  Mahesh Babu wife Namrata Shirodkar shares pre wedding photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X