ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ 'ಪ್ರಿನ್ಸ್' ಮಹೇಶ್ ಬಾಬು ಶುಭಾಶಯ
ಭಾರತದ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ 32ನೇ (ನವೆಂಬರ್ 5) ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳು ಹಾಗೂ ವಿಶೇಷವಾಗಿ ಕೊಹ್ಲಿ ಫ್ಯಾನ್ಸ್ ನೆಚ್ಚಿನ ಆಟಗಾರನ ಜನುಮದಿನಕ್ಕೆ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುತ್ತಿದ್ದಾರೆ.
ಸಿನಿಮಾರಂದ ಹಲವು ತಾರೆಯರು ವಿರಾಟ್ ಹುಟ್ಟುಹಬ್ಬಕ್ಕೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ತೆಲುಗು ನಟ ಪ್ರಿನ್ಸ್ ಮಹೇಶ್ ಬಾಬು ಸಹ ಅನುಷ್ಕಾ ಶರ್ಮಾ ಪತಿ ವಿರಾಟ್ ಬರ್ತಡೇಗೆ ಹೃದಯಪೂರ್ವಕ ಶುಭಕೋರಿದ್ದಾರೆ.
ತಮ್ಮ ಟ್ವಿಟ್ಟರ್‌ನಲ್ಲಿ ವಿರಾಟ್ ಕೊಹ್ಲಿಯ ಫೋಟೋ ಹಂಚಿಕೊಂಡಿರುವ ಮಹೇಶ್ ಬಾಬು ''ನನ್ನ ನೆಚ್ಚಿನ ಕ್ರಿಕೆಟಿಗರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಹೀಗೆ ಹೊಸ ದಾಖಲೆಗಳನ್ನು ನಿರ್ಮಿಸುತ್ತಾ ಭಾರತ ಹೆಮ್ಮೆ ಪಡುವಂತೆ ಆಗಲಿ'' ಎಂದು ಹಾರೈಸಿದ್ದಾರೆ.

ಕೊಹ್ಲಿಗೆ ವಿಶ್ ಮಾಡಿರುವ ಮಹೇಶ್ ಬಾಬು ಟ್ವೀಟ್ ಮತ್ತು ಇನ್ಸ್ಟಗ್ರಾಂ ಪೋಸ್ಟ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಸದ್ಯ, ವಿರಾಟ್ ಕೊಹ್ಲಿ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದು, ಆರ್‌ಸಿಬಿ ತಂಡದ ಪರವಾಗಿ ಪ್ಲೇಆಫ್ ಪಂದ್ಯವನ್ನಾಡಲಿದ್ದಾರೆ. ಅನುಷ್ಕಾ ಶರ್ಮಾ ಸಹ ಪತಿಯ ಜೊತೆ ದುಬೈನಲ್ಲಿದ್ದಾರೆ. ಅಂದ್ಹಾಗೆ, ಅನುಷ್ಕಾ ಮತ್ತು ವಿರಾಟ್ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಮತ್ತೊಂದೆಡೆ, ಲಾಕ್‌ಡೌನ್ ಬಳಿಕ ಚಿತ್ರೀಕರಣ ಶುರು ಮಾಡಿರುವ ಮಹೇಶ್ ಬಾಬು, 'ಸರ್ಕಾರು ವಾರಿ ಪಾಟ' ಚಿತ್ರದ ಚಿತ್ರೀಕರಣ ಆರಂಭಿಸಿದ್ದಾರೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸುತ್ತಿದ್ದಾರೆ.


Click it and Unblock the Notifications











