twitter
    For Quick Alerts
    ALLOW NOTIFICATIONS  
    For Daily Alerts

    46ರ ವಯಸ್ಸಲ್ಲೂ 26 ರಂತೆ ಕಾಣುವ ಮಹೇಶ್ ಬಾಬು ಅಂದದ ಗುಟ್ಟೇನು?

    |

    ಭಾರತೀಯ ಸಿನಿಮಾರಂಗ ಕಂಡ ಮೋಸ್ಟ್ ಹ್ಯಾಂಡ್ಸಮ್ ಹೀರೋಗಳ ಪೈಕಿ ಮಹೇಶ್ ಬಾಬು ಕೂಡ ಒಬ್ಬರು. ಟಾಲಿವುಡ್ ನ ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಇತ್ತೀಚೆಗೆ ಸಾಕಷ್ಟು ಕಾರಣಗಳಿಂದ ಚರ್ಚೆಗೆ ಗ್ರಾಸವಾಗುತ್ತಿದ್ದಾರೆ.
    ಮಹೇಶ್ ಬಾಬು ನಿರ್ಮಾಣದ 'ಮೇಜರ್ 'ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಬಾಲಿವುಡ್ ಬಗ್ಗೆ ಅವರು ಆಡಿದ ಮಾತುಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಯಿತು. 'ನನ್ನನ್ನು ನಿಭಾಯಿಸುವ ಶಕ್ತಿ ಬಾಲಿವುಡ್ ಗೆ ಇಲ್ಲ' ಎಂಬ ಅವರ ಮಾತು ದೊಡ್ಡ ವಿವಾದದ ಕೇಂದ್ರ ಬಿಂದುವಾಗಿದೆ. ಈಗಾಗಲೇ ಇದರ ಬಗ್ಗೆ ಅವರು ಕೂಡ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಅದಾಗಿಯೂ ಇದರ ಪರ ಮತ್ತು ವಿರುದ್ಧವಾಗಿ ಈಗಲೂ ಕೂಡ ದೊಡ್ಡಮಟ್ಟದಲ್ಲಿ ಚರ್ಚೆಗಳು ನಡೆಯುತ್ತಲೇ ಇದೆ.

    ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಚಿತ್ರ ಕೂಡ ಕಳೆದ ಗುರುವಾರ ಬಿಡುಗಡೆಯಾಗಿದೆ. ಚಿತ್ರಕ್ಕೆ ಸಂಬಂಧಿಸಿದಂತೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ಬಾಕ್ಸಾಫೀಸ್ ನಲ್ಲಿ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಮೊದಲ ಐದು ದಿನದ ಒಟ್ಟು ಗಳಿಕೆ ಸುಮಾರು 160 ಕೋಟಿ ಸಮೀಪಿಸಿದೆ. ಈ ಮೂಲಕ ಎರಡು ವರ್ಷಗಳ ನಂತರ ಬಿಡುಗಡೆಯಾದ ಪ್ರಿನ್ಸ್ ಮಹೇಶ್ ಬಾಬು ಅವರ ಚಿತ್ರ ಭರ್ಜರಿ ಹಣ ಗಳಿಕೆ ಕಂಡಿದೆ.

    ಮಹೇಶ್ ಬಾಬು ಒಡೆತನದ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನಾಧಾರಿತ ಚಿತ್ರ 'ಮೇಜರ್' ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ಸಂದೀಪ್ ಉನ್ನಿಕೃಷ್ಣನ್ ಪಾತ್ರದಲ್ಲಿ ತೆಲುಗು ನಟ ಅಡಿವಿ ಶೇಷ ನಟಿಸುತ್ತಿದ್ದಾರೆ. ಹಿಂದೆ 'ಗೂಡಾಚಾರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಶಶಿಕುಮಾರ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 26/11 ಮುಂಬೈ ಅಟ್ಯಾಕ್ ಗೆ ಸಂಬಂಧಿಸಿದ ಚಿತ್ರವಾದರೂ ಒಟ್ಟಾರೆ ಚಿತ್ರ ಸಂದೀಪ್ ಉನ್ನಿಕೃಷ್ಣನ್ ಅವರ ಬಾಲ್ಯದಿಂದ ಅವರು ಹುತಾತ್ಮರಾಗುವವರೆಗಿನ ಕಥಾವಸ್ತುವನ್ನು ಹೊಂದಿದೆ. ಇದನ್ನು ತೆಲುಗು ಜೊತೆಗೆ ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಜೂನ್3ರಂದು ಬಿಡುಗಡೆ ಮಾಡಲಾಗುತ್ತಿದೆ.

    ಎರಡೇ ದಿನದಲ್ಲಿ 100 ಕೋಟಿ ಕಂಡ 'ಸರ್ಕಾರು ವಾರಿ ಪಾಟ'

    ಎರಡೇ ದಿನದಲ್ಲಿ 100 ಕೋಟಿ ಕಂಡ 'ಸರ್ಕಾರು ವಾರಿ ಪಾಟ'

    ಇನ್ನು ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಕಳೆದ ಗುರುವಾರ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಚಿತ್ರಕ್ಕೆ ಸಂಬಂಧಿಸಿದಂತೆ ನೆಗೆಟಿವ್ ರಿವ್ಯೂಗಳು ಹೆಚ್ಚಾಗಿ ಕಂಡು ಬಂದಿದೆ. ನಿರ್ದೇಶಕ ಪರಶುರಾಮ್ ಮೊದಲರ್ಧವನ್ನು ತುಂಬಾ ಚೆನ್ನಾಗಿಯೇ ನಿಭಾಯಿಸಿದ್ದರು, ದ್ವಿತೀಯಾರ್ಧ ಸಿಕ್ಕಾಪಟ್ಟೆ ಬೋರಿಂಗ್ ಎಂಬುವುದು ಬಹುತೇಕರ ಅಭಿಪ್ರಾಯ. ಆದರೆ ಇದ್ಯಾವುದೇ ನೆಗೆಟಿವ್ ಟಾಕ್ಸ್ ಚಿತ್ರದ ಕಲೆಕ್ಷನ್ ಮೇಲೆ ಪರಿಣಾಮ ಬೀರಿಲ್ಲ. ಕೇವಲ ಬಿಡುಗಡೆಯಾದ ಎರಡೇ ದಿನದಲ್ಲಿ ಚಿತ್ರ 200 ಕೋಟಿ ಕ್ಲಬ್ ಗೆ ದಾಖಲೆಯಾಗಿದೆ. ಈಗಲೂ ಕೂಡ ಮಾಸ್ ಸರ್ಕ್ಯೂಟ್ ಗಳಲ್ಲಿ ಚಿತ್ರ ತುಂಬಾ ಒಳ್ಳೆ ಕಲೆಕ್ಷನ್ ಮಾಡುತ್ತಿದೆ.

    ಭಾರತೀಯ ಬ್ಯಾಂಕಿಂಗ್ ರಂಗದ ಮೇಲೆ ಚಿತ್ರದ ಕಥಾವಸ್ತು

    ಭಾರತೀಯ ಬ್ಯಾಂಕಿಂಗ್ ರಂಗದ ಮೇಲೆ ಚಿತ್ರದ ಕಥಾವಸ್ತು


    ಭಾರತದಲ್ಲಿ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ವಂಚನೆ ಮಾಡುವುದರ ಬಗ್ಗೆ ಈ ಚಿತ್ರ ಹೇಳುತ್ತದೆ. 'ವ್ಯವಸ್ಥೆಯಲ್ಲಿ ಇರಬೇಕಾಗಿದ್ದ ಹಣವೆಲ್ಲಾ ಕೆಲವೇ ಕೆಲವು ವ್ಯಕ್ತಿಗಳ ಬಳಿ ಇದೆ' ಎಂಬ ಡೈಲಾಗ್ ಸಿನಿಮಾದಲ್ಲಿದೆ. ಒಟ್ಟಾರೆ ಚಿತ್ರ ಬ್ಯಾಂಕಿಂಗ್ ಸಿಸ್ಟಮ್ ಮತ್ತು ಅದರ ಶ್ರೀಮಂತರ ಪರವಾದ ನೀತಿ ಮತ್ತು ಜನಸಾಮಾನ್ಯರ ವಿರುದ್ಧದ ನಿಲುವುಗಳನ್ನು ಎತ್ತಿ ತೋರಿಸುವ ಪ್ರಯತ್ನವನ್ನು ಚಿತ್ರ ಮಾಡಿದೆ.

    ತಂದೆಯ ಅಭಿಮಾನಿಗಳಿಂದಲೇ ನಾನು ಸೂಪರ್ ಸ್ಟಾರ್ ಆಗಿದ್ದು!

    ತಂದೆಯ ಅಭಿಮಾನಿಗಳಿಂದಲೇ ನಾನು ಸೂಪರ್ ಸ್ಟಾರ್ ಆಗಿದ್ದು!

    'ಸರ್ಕಾರು ವಾರಿ ಪಾಟ' ಚಿತ್ರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮಹೇಶ್ ಬಾಬು ನಿರ್ದೇಶಕ ಪರಶುರಾಮ್ ಜೊತೆ ಸೇರಿ ಸಂದರ್ಶನವೊಂದನ್ನು ನೀಡಿದ್ದಾರೆ. ತೆಲುಗಿನ ಖ್ಯಾತ ನಿರೂಪಕಿ ಸುಮಾ ಅವರ ಜೊತೆಯಲ್ಲಿ ಚಿತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾತನಾಡುವ ಸಮಯದಲ್ಲಿ ಸುಮಾ ಒಂದು ಆಸಕ್ತಿದಾಯಕ ಪ್ರಶ್ನೆಯನ್ನು ಮಹೇಶ್ ಬಾಬು ಅವರಿಗೆ ಕೇಳಿದ್ದಾರೆ. 'ನೀವು ಸಣ್ಣ ವಯಸ್ಸಿನಲ್ಲೇ ಬಾಲನಟನಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ರಿ. ನಿಮ್ಮ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರಿಗೆ ಆಗಿನ ಕಾಲಕ್ಕೆ ಅತಿ ಹೆಚ್ಚು ಫ್ಯಾನ್ಸ್ ಫಾಲೋಯಿಂಗ್ ಇತ್ತು. ನಿಮ್ಮನ್ನು ಕೂಡ ಅವರ ಅಭಿಮಾನಿಗಳು ಇಷ್ಟಪಟ್ಟರು. ಬಾಲನಟನಾಗಿ ಒಳ್ಳೆ ಹೆಸರನ್ನು ಪಡೆದ ನೀವು ಈಗ ನಾಯಕನಟನಾಗಿ ಕೂಡ ದೊಡ್ಡ ಹೆಸರನ್ನು ಪಡೆದಿದ್ದೀರಿ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಅವರ ಪ್ರೀತಿಯನ್ನು ಪಡೆದಿರುವ ಬಗ್ಗೆ ಏನು ಹೇಳುತ್ತೀರಿ? ಅಂತ ಕೇಳುತ್ತಾರೆ. ಇದಕ್ಕೆ ಆಸಕ್ತಿದಾಯಕವಾದ ಉತ್ತರವನ್ನು ನೀಡುವ ಮಹೇಶ್ ಬಾಬು ಅವರು "ಈ ವಿಚಾರದಲ್ಲಿ ನಾನು ತುಂಬಾ ಅದೃಷ್ಟವಂತ. ಬಾಲನಟರಾಗಿ ಚಲನಚಿತ್ರವನ್ನು ಪ್ರವೇಶ ಮಾಡಿ ನನಗೆ ನನ್ನ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರ ಅಭಿಮಾನಿಗಳ ಸಂಪೂರ್ಣ ಬೆಂಬಲ ಸಿಕ್ಕಿತು. ಅದು ನನ್ನ ದೊಡ್ಡ ಬಲವಾಗಿತ್ತು. ಹೀಗಾಗಿಯೇ ಬಾಲನಟರಾಗಿ ಪ್ರವೇಶ ಕಂಡ ನಾನು ಕೊನೆಗೆ ದೊಡ್ಡ ನಾಯಕನಟರಾಗಿ ಬೆಳೆದಿದ್ದು ಕೂಡ ಅಭಿಮಾನಿಗಳ ಪ್ರೀತಿಯಿಂದಲೇ. ನಾನು ಈ ವಿಚಾರದಲ್ಲಿ ತುಂಬ ಅದೃಷ್ಟವಂತ. ಇನ್ನು ನಾಯಕ ನಟನಾಗಿ ನಾನು ನಟಿಸಿದ ಮೊದಲ ಚಿತ್ರ 'ರಾಜಕುಮಾರಡು' ಆ ಚಿತ್ರಕ್ಕೆ ಕೂಡ ಅವರ ಬೆಂಬಲ ನನಗೆ ದೊರೆತಿದ್ದ ಕಾರಣದಿಂದಲೇ ನಾಯಕನಟನಾಗಿ ಸ್ಥಿರ ಗೊಂಡಿದ್ದು" ಅಂತ ಹೇಳಿದ್ದಾರೆ.

    ಮಹೇಶ್ ಆ ಪದಾರ್ಥಗಳನ್ನು ತಿನ್ನುವುದಿಲ್ಲವಂತೆ!

    ಮಹೇಶ್ ಆ ಪದಾರ್ಥಗಳನ್ನು ತಿನ್ನುವುದಿಲ್ಲವಂತೆ!

    ಇನ್ನು ಮಹೇಶ್ ಬಾಬು ಅವರು ತಮ್ಮ ಡಯಟ್ ಬಗ್ಗೆ ಕೂಡ ಇದೇ ಸಂದರ್ಭದಲ್ಲಿ ಮಾತನಾಡಿದ್ದಾರೆ. ಅಸಲಿಗೆ ಅವರು ಮೊಸರು ಮತ್ತು ಮೊಸರಿಗೆ ಸಂಬಂಧಪಟ್ಟ ಯಾವುದೇ ತರದ ಉತ್ಪನ್ನಗಳನ್ನು ತಿನ್ನುವುದಿಲ್ಲವಂತೆ. ಈ ಬಗ್ಗೆ ಮಾತನಾಡುವ ಅವರು 'ಮೊಸರು ಸೇರಿದಂತೆ ಮೊಸರು ಉತ್ಪನ್ನಗಳನ್ನು ತಿನ್ನುವುದಿಲ್ಲ. ಜೊತೆಗೆ ಪಾಸ್ತ ಬರ್ಗರ್ ಅಂತಹ ಯಾವುದೇ ಜಂಕ್ ಫುಡ್ ಗಳನ್ನು ನಾನು ಹತ್ತಿರಕ್ಕೂ ಸೇರಿಸುವುದಿಲ್ಲ. ರುಚಿಕರವಾದ ಮತ್ತು ಸ್ವಾದಿಷ್ಟಕರವಾದ ಆಹಾರವನ್ನು ಹೆಚ್ಚಾಗಿ ಸೇವಿಸುತ್ತೇನೆ. ಹೀಗಾಗಿ ಹೆಚ್ಚು ಆರೋಗ್ಯವಾಗಿ ಮತ್ತು ಸದೃಢವಾಗಿದ್ದೇನೆ.' ಎಂದು ಇದೆ ಸಮಯದಲ್ಲಿ ಹೇಳಿದ್ದಾರೆ.

    ರಾಜಮೌಳಿ ಚಿತ್ರಕ್ಕೆ ಮೊದಲು ತ್ರಿವಿಕ್ರಮ್ ಶ್ರೀನಿವಾಸ್ ಸಿನಿಮಾ

    ರಾಜಮೌಳಿ ಚಿತ್ರಕ್ಕೆ ಮೊದಲು ತ್ರಿವಿಕ್ರಮ್ ಶ್ರೀನಿವಾಸ್ ಸಿನಿಮಾ

    ಎಸ್ಎಸ್ ರಾಜಮೌಳಿ ಅವರ ಮುಂದಿನ ಚಿತ್ರಕ್ಕೆ ಈಗಾಗಲೇ ಮಹೇಶ್ ಬಾಬು ಅವರು ಕಾಲ್ಶೀಟ್ ಕೊಟ್ಟಿದ್ದಾರೆ. ಸುಮಾರು 800 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಭಾರತೀಯ ಸಿನಿಮಾ ರಂಗದ ಅತಿ ದೊಡ್ಡ ಬಜೆಟ್ ಚಿತ್ರ ಅದು. ಪ್ರಸ್ತುತ ರಾಜಮೌಳಿ ಅವರು ಈ ಚಿತ್ರಕ್ಕೆ ಸಂಬಂಧಿಸಿದಂತೆ ಪ್ರಿಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರ ಮುಂದಿನ ವರ್ಷ ಚಿತ್ರೀಕರಣಕ್ಕೆ ಬರುವ ಸಾಧ್ಯತೆಗಳಿವೆ. ಇದರ ಮಧ್ಯೆ ಮಹೇಶ್ ಬಾಬು ಅವರು ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರ ಮುಂದಿನ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಪೂಜಾ ಹೆಗಡೆ, ಶ್ರೀಲೀಲಾ ನಾಯಕಿಯರಾಗಿ ನಟಿಸುತ್ತಿದ್ದು, ಎಸ್ ಎಸ್ ತಮನ್ ಸಂಗೀತ ನೀಡುತ್ತಿದ್ದಾರೆ. ಇನ್ನು ಈ ಚಿತ್ರವನ್ನು ಮುಂದಿನ ಸಂಕ್ರಾಂತಿಗೆ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸುತ್ತಿದೆ. ಈ ಚಿತ್ರದ ನಂತರ ಮಹೇಶ್ ಬಾಬು ಅವರು ಮುಂದಿನ ಎರಡು ವರ್ಷದ ಕಾಲ ಪೂರ್ತಿಯಾಗಿ ಎಸ್ ಎಸ್ ರಾಜಮೌಳಿ ಅವರ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

    English summary
    No junk food only delicious food is secret behind Mahesh babu's youthfulness at the age of 46 he looks like 26.
    Thursday, May 19, 2022, 9:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X