ಗುಂಟೂರು ಖಾರಂ Vs ಹನುಮಾನ್: ಮೊದಲ ದಿನ ಬಾಕ್ಸ್ ಆಫೀಸ್ ರೇಸ್‌ನಲ್ಲಿ ಗೆದ್ದವರು ಯಾರು?
ಈ ಮಕರ ಸಂಕ್ರಾಂತಿಗೆ ತೆಲುಗು ಚಿತ್ರರಂಗದಿಂದ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಿವೆ. ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಗುಂಟೂರು ಖಾರಂ, ವೆಂಕಟೇಶ್ ದಗ್ಗುಬಾಟಿ ಅವರ ಸೈಂಧವ್, ನಾಗಾರ್ಜುನ ಅವರ ನಾ ಸಾಮಿ ರಂಗ ಮತ್ತು ತೇಜಾ ಸಜ್ಜಾ ಅಭಿನಯದ ಹನುಮಾನ್ ಸೇರಿದಂತೆ ಹಲವು ಸಿನಿಮಾಗಳು ಒಂದೇ ಸಂದರ್ಭದಲ್ಲಿ ಬಿಡುಗಡೆಯಾಗಿವೆ.
ಮಹೇಶ್ ಬಾಬು ಅವರ 'ಗುಂಟೂರು ಖಾರಂ' ಮತ್ತು ತೇಜಾ ಸಜ್ಜಾ ಅವರ ವೈಜ್ಞಾನಿಕ ಕಾಲ್ಪನಿಕ ಚಿತ್ರ 'ಹನುಮಾನ್' ಶುಕ್ರವಾರ ಜನವರಿ 12 ರಂದು ಬಹಳಷ್ಟು ನಿರೀಕ್ಷೆಗಳ ನಡುವೆ ಬಿಡುಗಡೆಯಾಗಿದೆ. ಎರಡು ಸಿನಿಮಾಗಳಿಗೆ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ ತೆಲುಗು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಪೈಪೋಟಿಗೆ ಸಾಕ್ಷಿಯಾಗಿದೆ.

ಮಹೇಶ್ ಬಾಬು ಅವರ ಕ್ರೇಜಿ ಫ್ಯಾನ್ ಬೇಸ್ ಮತ್ತು ತ್ರಿವಿಕ್ರಂ ಅವರ ಜೊತೆಗಿನ ಸಿನಿಮಾ ಎಂಬ ಕಾರಣಕ್ಕೆ ಗುಂಟೂರು ಖಾರಂ ಹೆಚ್ಚು ನಿರೀಕ್ಷೆಯಿತ್ತು. ಆದರೆ, ತೇಜಾ ಸಜ್ಜಾ ಅವರ ಹನುಮಾನ್ ತನ್ನ ವಿಶಿಷ್ಟ ಕಥೆ ಮತ್ತು ವಿಎಫ್‌ಎಕ್ಸ್ ಮೂಲಕ ಜನರ ಹೃದಯಗೆದ್ದಿದೆ. ಗುಂಟೂರ್ ಖಾರಂ ಮತ್ತು ಹನುಮಾನ್ ಎರಡೂ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭರ್ಜರಿ ಓಪನಿಂಗ್ ಪಡೆದಿವೆ. ಹಾಗಾದರೇ ಎರಡು ಸಿನಿಮಾಗಳ ಬಾಕ್ಸ್ ಅಫೀಸ್ ಕಲೆಕ್ಷನ್‌ನಲ್ಲಿ ಯಾರಿಗೆ ಗೆಲುವು ಎಂಬುದನ್ನು ನೋಡೋಣ.
ಗುಂಟೂರು ಖಾರಂ ಬಾಕ್ಸ್ ಆಫೀಸ್ ಕಲೆಕ್ಷನ್
ಗುಂಟೂರು ಖಾರಂ ಸಿನಿಮಾದಲ್ಲಿ ಶ್ರೀಲೀಲಾ, ಮೀನಾಕ್ಷಿ ಚೌಧರಿ, ರಮ್ಯಾ ಕೃಷ್ಣನ್, ಪ್ರಕಾಶ್ ರಾಜ್, ಜಯರಾಮ್ ,ರಾವ್ ರಮೇಶ್, ಮತ್ತು ಜಗಪತಿ ಬಾಬು ನಟಿಸಿದ್ದಾರೆ. ಚಿತ್ರವು ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ದಾಖಲೆಯ ಮಾರಾಟ ಮಾಡಿದೆ. ಆಂಧ್ರಪ್ರದೇಶ ಮತ್ತು ನಿಜಾಮ್‌ನಲ್ಲಿ ಟಿಕೆಟ್ ದರ ಕೂಡ ಹೆಚ್ಚಳವಾಗಿತ್ತು.
ವರದಿಗಳ ಪ್ರಕಾರ, ಗುಂಟೂರು ಖಾರಂ ದೇಶೀಯ ಮಾರುಕಟ್ಟೆಯಲ್ಲಿ ಸುಮಾರು 50 ಕೋಟಿ ರೂಪಾಯಿಗಳನ್ನು ಗಳಿಸುತ್ತದೆ ಎಂದು ಹೇಳಲಾಗುತ್ತಿದೆ. ಮೊದಲ ದಿನ ತೆಲುಗು ರಾಜ್ಯಗಳಲ್ಲಿ 40 ಕೋಟಿ ರೂಪಾಯಿಗಳನ್ನು ಗಳಿಸಲಿದ್ದು, ವಿದೇಶಗಳಲ್ಲಿಯೂ ಸೇರಿ ಒಟ್ಟು 135 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆಯಿದೆ.

ಹನುಮಾನ್ ಬಾಕ್ಸ್ ಆಫೀಸ್ ಕಲೆಕ್ಷನ್
ತೇಜ ಸಜ್ಜಾ ಅಭಿನಯದ ತೆಲುಗು ಚಿತ್ರ 'ಹನುಮಾನ್ ' ತನ್ನ ಮೊದಲ ದಿನದಲ್ಲಿ 7.50 ಕೋಟಿ ಗಳಿಸಿದೆ ಎಂದು ವರದಿಯಾಗಿದೆ. ಪ್ರಶಾಂತ್ ವರ್ಮಾ ಅವರು ನಿರ್ದೇಶಿಸಿದ ಈ ಚಲನಚಿತ್ರವು ಮಾಡ್ರನ್ ಸೂಪರ್ ಹೀರೋ ಸ್ಟೋರಿ ಕಟ್ಟಿಕೊಡುತ್ತದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಸಿನಿಮಾದ ತೆಲುಗು ಆವೃತ್ತಿಯು 66.16% ಆಕ್ಯುಪೆನ್ಸಿಯನ್ನು ಹೊಂದಿದೆ ಎಂದು ಹೇಳಲಾಗುತ್ತತ್ತಿದೆ.
ಹನುಮಾನ್ ಸಿನಿಮಾದಲ್ಲಿ ತೇಜಾ ಸಜ್ಜಾ ಜೊತೆಗೆ ಅಮೃತ ಅಯ್ಯರ್, ವರಲಕ್ಷ್ಮಿ ಶರತ್‌ಕುಮಾರ್, ರಾಜ್ ದೀಪಕ್ ಶೆಟ್ಟಿ ಮತ್ತು ವಿನಯ್ ರೈ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹನುಮಾನ್ ಚಿತ್ರವನ್ನು ನಿರಂಜನ್ ರೆಡ್ಡಿ ಕಂದಗಟ್ಲ ನಿರ್ಮಿಸಿದ್ದಾರೆ.


Click it and Unblock the Notifications










