"ಆ ನಟ ನನ್ನ ಕ್ರಶ್, ಆದ್ರೆ ನನ್ನನ್ನು ತಂಗಿ ಎಂದುಬಿಟ್ಟ"; 'ಅಣ್ಣಾವ್ರ ಮಕ್ಕಳು' ನಟಿ ಬೇಸರ

ತಮಿಳು ನಟಿ ಮಹೇಶ್ವರಿ ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಿಂದ ದೂರಾಗಿದ್ದಾರೆ. ಕಳೆದ 15 ವರ್ಷಗಳಿಂದ ಆಕೆ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ಇತ್ತೀಚೆಗೆ ತೆಲುಗಿನ 'ಜಯಮ್ಮು ನಿಶ್ಚಯಮ್ಮು ರಾ' ಸಂದರ್ಶನ ಕಾರ್ಯಕ್ರಮಕ್ಕೆ ಮಹೇಶ್ವರಿ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.

ಸ್ಟಾರ್ ನಟ, ನಟಿಯರನ್ನು ನೋಡಿ ಅಭಿಮಾನಿಗಳು ಕ್ರಶ್ ಇರುವಂತೆ ನಟ, ನಟಿಯರಿಗೂ ಕೂಡ ಬೇರೆಯವರ ಮೇಲೆ ಕ್ರಶ್ ಆಗಿರುತ್ತದೆ. ಅದೇ ರೀತಿ ಮಹೇಶ್ವರಿ ತಮ್ಮ ಕ್ರಶ್ ಕಥೆ ಬಿಚ್ಚಿಟ್ಟಿದ್ದಾರೆ. ಅಂತಿಮವಾಗಿ ಅದು ಬೇಸರದಲ್ಲಿ ಮುಗಿದಿದ್ದನ್ನು ಹೇಳಿಕೊಂಡಿದ್ದಾರೆ.

Maheshwari Recalls Her Unspoken Feelings for Ajith Kumar on Telugu Talk Show

ತಮಿಳು ನಟ ಅಜಿತ್ ಜೊತೆ ಒಂದೂವರೆ ವರ್ಷ ಕೆಲಸ ಮಾಡಿದ ನಂತರ ಅವರ ಮೇಲೆ ಕ್ರಶ್ ಇತ್ತು ಎಂದು ಮಹೇಶ್ವರಿ ಹೇಳಿದ್ದಾರೆ. ಆದರೆ ಅಜಿತ್ ಅವರಿಂದ ಅದಕ್ಕೆ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ ತಮ್ಮ ಹೃದಯ ನುಚ್ಚು ನೂರಾಯಿಯು ಎಂದು ಆಕೆ ತಿಳಿಸಿದ್ದಾರೆ. ವೀಕೆಂಡ್ ವಿತ್ ರಮೇಶ್ ಶೋ ಹೋಲುವ ಕಾರ್ಯಕ್ರಮ ಇದು. ಖ್ಯಾತ ನಟ ಜಗಪತಿ ಬಾಬು ನಿರೂಪಣೆ ಮಾಡುತ್ತಾರೆ. ಮಹೇಶ್ವರಿಗೆ ತಮ್ಮ ಸಹ-ನಟರ ಮೇಲೆ ಎಂದಾದರೂ ಕ್ರಶ್ ಆಗಿತ್ತೇ ಎಂದು ಜಗಪತಿ ಬಾಬು ಕೇಳಿದ್ದಾರೆ.

"ಅಜಿತ್ ಕುಮಾರ್ ನನ್ನ ಕ್ರಶ್ ಆಗಿದ್ದರು. ಕ್ರಶ್ ಅನ್ನೋದಕ್ಕಿಂತ ಹೆಚ್ಚಾಗಿ, ನಾನು ಅವರನ್ನು ಒಬ್ಬ ವ್ಯಕ್ತಿಯಾಗಿ ಹೆಚ್ಚು ಗೌರವಿಸುತ್ತೇನೆ. ಇದರ ಬಗ್ಗೆ ಒಂದು ದುಃಖದ ಕಥೆ ಹೇಳುತ್ತೇನೆ. ನಾವು 2 ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರಿಂದ ಅವರ ಮೇಲೆ ಕ್ರಶ್ ಆಯಿತು. ಒಂದು ಚಿತ್ರದ ಚಿತ್ರೀಕರಣ ವಿಳಂಬ ಆಗಿದ್ದರಿಂದ, ನಾವು ಸುಮಾರು ಒಂದೂವರೆ ವರ್ಷ ಒಟ್ಟಾಗಿ ಕೆಲಸ ಮಾಡುವಂತಾಯಿತು" ಎಂದು ನೆನಪಿಸಿಕೊಂಡಿದ್ದಾರೆ.

Maheshwari Recalls Her Unspoken Feelings for Ajith Kumar on Telugu Talk Show

ಕೊನೆ ದಿನದ ಚಿತ್ರೀಕರಣದ ವೇಳೆ ಬೇಸರವಾಗಿತ್ತು. ಇನ್ನು ಮುಂದೆ ಅವರನ್ನು ಭೇಟಿ ಆಗಲು ಸಾಧ್ಯವಾಗುವುದಿಲ್ಲ ಎಂದುಕೊಂಡಿದ್ದೆ. ಅದೇ ಸಮಯದಲ್ಲಿ ಅಜಿತ್ ಅವರು ಬಂದ ಹೇಳಿದ ಮಾತು ಮತ್ತಷ್ಟು ಬೇಸರ ಮೂಡಿಸಿತ್ತು ಎಂದು ಮಹೇಶ್ವರಿ ಹೇಳಿದ್ದಾರೆ. "ಅಜಿತ್ ಅವರು ನನ್ನ ಬಳಿ ಬಂದು, 'ಮಹಿ, ನೀನು ನನ್ನ ತಂಗಿ ಇದ್ದಂತೆ. ನಿನಗೆ ನನ್ನಿಂದ ಯಾವುದೇ ಸಹಾಯ ಬೇಕಿದ್ದರೆ ಕೇಳು, ಹಿಂಜರಿಬೇಡ" ಎಂದಿದ್ದರು. ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ ಎಂದು ಮಹೇಶ್ವರಿ ವಿವರಿಸಿದ್ದಾರೆ. ಇದನ್ನು ಕೇಳಿ ಮೀನಾ ಹಾಗೂ ಜಗಪತಿ ಬಾಬು ನಕ್ಕಿದ್ದಾರೆ.

ಅಂದಹಾಗೆ ಅಜಿತ್ ಜೊತೆ ಮಹೇಶ್ವರಿ 1997ರಲ್ಲಿ ತಮಿಳು 'ಉಲ್ಲಾಸಂ' ಮತ್ತು 'ನೇಸಂ' ಎಂಬ 2 ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ಅಜಿತ್ ಕುಮಾರ್ ಅವರು ಶಾಲಿನಿ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಅನುಷ್ಕಾ ಮತ್ತು ಅಧಿಕ್ ಎಂಬ ಇಬ್ಬರು ಮಕ್ಕಳಿದ್ದಾರೆ. 2008ರಲ್ಲಿ ಜಯಕೃಷ್ಣ ಎಂಬುವವರನ್ನು ಮಹೇಶ್ವರಿ ಮದುವೆ ಆಗಿದ್ದರು. ಮದುವೆ ಬಳಿಕ ಆಕೆ ಸಿನಿಮಾಗಳಿಂದ ದೂರ ಉಳಿದರು.

1990ರ ದಶಕದಲ್ಲಿ ಸಾಕಷ್ಟು ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ಮಹೇಶ್ವರಿ ನಟಿಸಿದ್ದು. ಅದೇ ಸಮಯದಲ್ಲಿ 'ಅಣ್ಣಾವ್ರ ಮಕ್ಕಳು' ಚಿತ್ರದಲ್ಲಿ ಶಿವರಾಜ್‌ಕುಮಾರ್ ಜೋಡಿಯಾಗಿ ಮಿಂಚಿದ್ದರು.

More from Filmibeat

English summary
Tamil Actress Maheshwari Shares Heartfelt Story About Ajith Kumar on ‘Jayammu Nischayammu Ra’
Read more about: ajith tollywood kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X