ಬಹುನಿರೀಕ್ಷೆಯ 'ಮೇಜರ್' ಸಿನಿಮಾ ಬಿಡುಗಡೆ ಮುಂದೂಡಿಕೆ
ಕೊರೊನಾ ವೈರಸ್ ಕಾರಣದಿಂದ ಹಲವು ಸಿನಿಮಾಗಳು ಬಿಡುಗಡೆ ದಿನಾಂಕಗಳನ್ನು ಮುಂದೂಡಿವೆ. ಈಗ ಬಹುನಿರೀಕ್ಷೆಯ ಸಿನಿಮಾ ಮೇಜರ್ ಸರದಿ.
ಅಡವಿ ಶೇಷ ನಟನೆಯಲ್ಲಿ ತಯಾರಾಗುತ್ತಿರುವ ಮೇಜರ್ ಸಿನಿಮಾದ ಮುಂದೂಡಿಕೆ ಬಗ್ಗೆ ಹಲವು ರೀತಿಯ ಸುದ್ದಿಗಳು ಹರಿದಾಡುತ್ತಿದ್ದವು. ಇದೆಲ್ಲದಕ್ಕೂ ಸ್ವತಃ ಅಡವಿ ಶೇಷ ಇಂದು (ಮೇ 26) ಸ್ಪಷ್ಟನೆ ನೀಡಿದ್ದಾರೆ.
''ಮೇಜರ್ ಸಿನಿಮಾ ನನ್ನ ಹೆಮ್ಮೆಯ ಕ್ಷಣ. ಸಮಯ ಸರಿ ಹೋದಾಗ ನಾವೆಲ್ಲರೂ ಸೇರಿ ಅದನ್ನು ಸಂಭ್ರಮಿಸೋಣ. ಹೊಸ ದಿನಾಂಕವನ್ನು ಮುಂದಿನ ದಿನದಲ್ಲಿ ಘೋಷಣೆ ಮಾಡುತ್ತೇವೆ. ಈ ಸಿನಿಮಾ ಸಾಮಾನ್ಯವಾಗಿರುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಜೈ ಹಿಂದ್'' ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಕೊರೊನಾ ಲಾಕ್‌ಡೌನ್ ಕಾರಣದಿಂದ ಜುಲೈ 2ಕ್ಕೆ ಬಿಡುಗಡೆಯಾಗಿದ್ದ ಮೇಜರ್ ಸಿನಿಮಾ ಆ ದಿನ ರಿಲೀಸ್ ಆಗುವುದಿಲ್ಲ. ಈ ಬಿಕ್ಕಟ್ಟು ಬಗೆಹರಿದ ಬಳಿಕ ನಿಮ್ಮ ಮುಂದೆ ಬರ್ತೀವಿ ಎಂದು ತಿಳಿಸಿರುವ ಚಿತ್ರತಂಡ ಚಿತ್ರಮಂದಿರದಲ್ಲೇ ತೆರೆಗೆ ತರಲಿದ್ದೇವೆ ಎಂದು ಹೇಳಿದೆ.
ಏಪ್ರಿಲ್ 12 ರಂದು ಮೇಜರ್ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ತೆಲುಗಿನಲ್ಲಿ ಮಹೇಶ್ ಬಾಬು, ಹಿಂದಿಯಲ್ಲಿ ಸಲ್ಮಾನ್ ಖಾನ್ ಹಾಗೂ ಮಲಯಾಳಂ ಭಾಷೆಯಲ್ಲಿ ಪೃಥ್ವಿರಾಜ್ ಸುಕುಮಾರನ್ ಬಿಡುಗಡೆ ಮಾಡಿದ್ದರು.
26/11 ಮುಂಬೈ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನ ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಶಶಿ ಕಿರಣ್ ಟಿಕ್ಕ ಈ ಚಿತ್ರ ನಿರ್ದೇಶಿಸಿದ್ದು, ಅಡವಿ ಶೇಷ ಚಿತ್ರಕಥೆ ಮಾಡಿದ್ದಾರೆ. ವಿಶೇಷ ಅಂದ್ರೆ ಮಹೇಶ್ ಬಾಬು ಈ ಚಿತ್ರದ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.
ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುರಿತು
Recommended Video
ಕೋಲ್ಕತ್ತಾದಲ್ಲಿ 1977 ಮಾರ್ಚ್ 15 ರಂದು ಜನಿಸಿದ ಸಂದೀಪ್ ಬೆಂಗಳೂರಿನ ಹೆಬ್ಬಾಳ ಸೇನಾ ಕೇಂದ್ರದಲ್ಲಿ ತರಬೇತಿ ಪಡೆದಿದ್ದರು. 31ನೇ ವಯಸ್ಸಿನಲ್ಲಿ ಪ್ರಾಣ ತ್ಯಾಗ ಮಾಡಿದ ಸಂದೀಪ್ 9 ವರ್ಷಗಳ ಕಾಲ ಭಾರತದ ಸೇನೆಯ ಭಾಗವಾಗಿ ದುಡಿದಿದ್ದರು. ಅವರ ಸೇವೆಗೆ ಅಶೋಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.


Click it and Unblock the Notifications










