Prashanth Neel: ಮುಂದಿನ ಸಿನಿಮಾ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ನೀಲ್ ಭಾಯ್: 'KGF-3' ಸದ್ಯಕ್ಕಿಲ್ಲ

'ಉಗ್ರಂ', 'KGF' ಸರಣಿ ಬಳಿಕ ಪ್ರಶಾಂತ್ ನೀಲ್ 'ಸಲಾರ್‌' ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಈ ವರ್ಷಾಂತ್ಯಕ್ಕೆ ಪ್ರಭಾಸ್ ಅಭಿನಯದ 'ಸಲಾರ್‌' ಸಿನಿಮಾ ತೆರೆಗಪ್ಪಳಿಸುತ್ತಿದೆ. ಪದೇ ಪದೆ ರಿಲೀಸ್ ಡೇಟ್‌ ಬದಲಾಗುತ್ತಲೇ ಇದ್ದು ಡಿಸೆಂಬರ್ 22ಕ್ಕೆ ಸಿನಿಮಾ ರಿಲೀಸ್ ಮಾಡೇ ತೀರಲು ಹೊಂಬಾಳೆ ಸಂಸ್ಥೆ ಸಿದ್ಧವಾಗಿದೆ.

'KGF' ಬಳಿಕ ಕನ್ನಡದಲ್ಲೇ ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಅಚ್ಚರಿ ಎನ್ನುವಂತೆ 'ಸಲಾರ್' ಸಿನಿಮಾ ಘೋಷಣೆ ಆಯಿತು. ಬಳಿಕ ಜ್ಯೂ.ಎನ್‌ಟಿಆರ್ ಕಾಂಬಿನೇಷನ್‌ನಲ್ಲೂ ಸಿನಿಮಾ ಘೋಷಿಸಿದರು. ಕನ್ನಡ ಚಿತ್ರರಂಗದಲ್ಲಿ ನೇಮು ಫೇಮು ಪಡೆದು ತೆಲುಗಿಗೆ ಹೋಗಿದ್ದು ಸರಿಯಲ್ಲ ಎನ್ನುವ ಟೀಕೆಗಳು ವ್ಯಕ್ತವಾಗಿತ್ತು. ಇದೆಲ್ಲದರ ನಡುವೆ 'ಸಲಾರ್' ಸಿನಿಮಾ ತಡವಾಗುತ್ತಲೇ ಬರ್ತಿದೆ.

makers announced Jr NTR and Prashanth neel project will commence in April, 2024

ಕಳೆದ ವರ್ಷ ಏಪ್ರಿಲ್ 14ಕ್ಕೆ 'ಸಲಾರ್' ಸಿನಿಮಾ ರಿಲೀಸ್ ಆಗಬೇಕಿತ್ತು. ಶೂಟಿಂಗ್ ತಡವಾಗಿದ್ದರಿಂದ ಆ ಡೇಟ್‌ಗೆ 'KGF-2' ಬರುವಂತಾಯಿತು. ಬಳಿಕ 'ಸಲಾರ್' ಈ ವರ್ಷ ಸೆಪ್ಟೆಂಬರ್ 28ಕ್ಕೆ ರಿಲೀಸ್ ಎಂದು ಘೋಷಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಮಿಸ್ಟರ್ ಪರ್ಫೆಕ್ಷನಿಸ್ಟ್ ಎನಿಸಿಕೊಂಡಿರುವ ಪ್ರಶಾಂತ್ ನೀಲ್ ಯಾವುದೇ ವಿಚಾರದಲ್ಲೂ ರಾಜಿಯಾಗುವವರಲ್ಲ. ಗ್ರಾಫಿಕ್ಸ್ ಚೆನ್ನಾಗಿ ಬಂದಿಲ್ಲ ಎನ್ನುವ ಕಾರಣಕ್ಕೆ ರಿಲೀಸ್ ಡೇಟ್ ಮುಂದೂಡಿ ರೀ ವರ್ಕ್ ಮಾಡಿಸುತ್ತಿದ್ದಾರೆ.

'ಸಲಾರ್‌' ಡಿಸೆಂಬರ್ 22ಕ್ಕೆ ರಿಲೀಸ್ ಆಗುತ್ತದೆ. ಬಳಿಕ ಪ್ರಶಾಂತ್ ನೀಲ್ ಏನ್ ಮಾಡ್ತಾರೆ? ಮುಂದಿನ ಸಿನಿಮಾ ಯಾವುದು? ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಜ್ಯೂ. ಎನ್‌ಟಿಆರ್‌ ಕಾಂಬಿನೇಷನ್‌ ಚಿತ್ರವನ್ನು ಮುಂದಿನ ವರ್ಷ ಏಪ್ರಿಲ್‌ನಿಂದಲೇ ಆರಂಭಿಸಲು ಚಿತ್ರತಂಡ ಮುಂದಾಗಿದೆ. ಇದನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ.

'ಸಲಾರ್‌' ಚಿತ್ರವನ್ನು ಎರಡು ಭಾಗಗಳಾಗಿ ತೆರೆಗೆ ತರುವುದಾಗಿ ಹೊಂಬಾಳೆ ಸಂಸ್ಥೆ ಈಗಾಗಲೇ ಹೇಳಿದೆ. ಆದರೆ 'ಸಲಾರ್-1' ಬಳಿಕ ಪ್ರಶಾಂತ್ ನೀಲ್ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ತಾರಕ್ ಸಿನಿಮಾ ಆರಂಭಿಸಲಿದ್ದಾರೆ. ಹಾಗಾದರೆ 'ಸಲಾರ್‌- 2' ಯಾವಾಗ ಬರುತ್ತೆ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಡಿಸೆಂಬರ್‌ನಲ್ಲಿ 'KGF-3' ಸಿನಿಮಾ ಸ್ಕ್ರಿಪ್ಟ್ ವರ್ಕ್ ಶುರು ಮಾಡಿ 2025ರಲ್ಲಿ ಸಿನಿಮಾ ರಿಲೀಸ್ ಮಾಡಲು ಹೊಂಬಾಳೆ ಸಂಸ್ಥೆ ಮುಂದಾಗಿದೆ. ಅದೇ ನಿಜವಾದ್ರೆ ಆ ಸಿನಿಮಾ ಯಾವಾಗ ಶುರುವಾಗುತ್ತದೆ? ಎನ್ನುವ ಚರ್ಚೆ ಶುರುವಾಗಿದೆ.

'KGF-3' ಚಿತ್ರಕ್ಕೆ ಪ್ರಶಾಂತ್ ನೀಲ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಒಟ್ಟಿಗೆ ಕೆಲಸ ಮಾಡ್ತಾರಾ? ಎನ್ನುವ ಗುಸುಗುಸು ಕೂಡ ಶುರುವಾಗಿದೆ. 2025ರಲ್ಲಿ 'KGF-3' ಬರುವುದಾದರೆ ನೀಲ್- ತಾರಕ್ ಸಿನಿಮಾ ಯಾವಾಗ? ಶುರುವಾಗಿ ಯಾವಾಗ ಮುಗಿಯುತ್ತೆ? ಎನ್ನುವ ಅನುಮಾಜ ಮೂಡುವುದು ಸಹಜ. ಇನ್ನು ಕೆಲ ದಿನಗಳ ಹಿಂದೆಯೇ ತಾರಕ್ ನಟನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ನೀಲ್ ಒಪ್ಪಿಕೊಂಡಿದ್ದರು. ಪೋಸ್ಟರ್ ಸಮೇತ ಸಿನಿಮಾ ಅನೌನ್ಸ್ ಆಗಿತ್ತು.

ಟಾಲಿವುಡ್ ಯಂಗ್‌ ಟೈಗರ್ ಎನ್‌ಟಿಆರ್‌ ಮಾಸ್ ಹೀರೊ ಆಗಿ ಗುರ್ತಿಸಿಕೊಂಡಿದ್ದಾರೆ. ನೀಲ್ ಎಲಿವೇಷನ್ಸ್, ತಾರಕ್ ಪರ್ಫಾರ್ಮನ್ಸ್ ಸಿಂಕ್ ಆದರೆ ಬಾಕ್ಸಾಫೀಸ್ ಶೇಕ್ ಆಗೋದು ಗ್ಯಾರೆಂಟಿ. ಇನ್ನು ಜ್ಯೂ. ಎನ್‌ಟಿಆರ್ 'ದೇವರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ 2 ಭಾಗಗಳಾಗಿ ತೆಗೆಗೆ ಬರ್ತಿದೆ. ಇನ್ನು ಬಾಲಿವುಡ್‌ನಲ್ಲಿ 'ವಾರ್‌-2' ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆ ತಾರಕ್ ಗುದ್ದಾಡಲಿದ್ದಾರೆ. ಈ ಮೂರು ಸಿನಿಮಾಗಳ ನಡುವೆ ನೀಲ್ ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬರಲಿದೆ. ಆ ಸಿನಿಮಾ ಟೈಟಲ್ ಏನು? ಸ್ಟಾರ್‌ ಕಾಸ್ಟ್ ಯಾರೆಲ್ಲಾ ಇರ್ತಾರೆ? ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ.

More from Filmibeat

English summary
Jr NTR and Prashanth neel project starts in April, 2024.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X