ನಾನೇ ಆ ಸ್ಟಂಟ್ಸ್ ಮಾಡಿದ್ದು.. ಡ್ಯೂಪ್ ಅಲ್ಲ.. ನನ್ನ ನಂಬಿ ಪ್ಲೀಸ್- ಮಾಳವಿಕಾ ಮೋಹನನ್

ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿದ್ದ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿತ್ತು. ಇತ್ತೀಚೆಗೆ ಸಿನಿಮಾ ಓಟಿಟಿಗೆ ಬಂದು ಸದ್ದು ಮಾಡಿತ್ತು. ಸಿನಿಮಾ ನೋಡಲು ಜನ ಮುಗಿಬಿದ್ದರು. ಬಳಿಕ ಟ್ರೋಲ್ ಮಾಡಿದ್ದರು.

ಮಾರುತಿ ನಿರ್ದೇಶನದ ಹಾರರ್ ಥ್ರಿಲ್ಲರ್ ಚಿತ್ರದಲ್ಲಿ ಮಾಳವಿಕಾ ಮೋಹನನ್, ನಿಧಿ ಅಗರ್‌ವಾಲ್ ಹಾಗೂ ರಿದ್ದಿ ಕುಮಾರ್ ನಾಯಕಿಯಾಗಿ ಮಿಂಚಿದ್ದಾರೆ. ಸಂಜಯ್ ದತ್ ಸೇರಿ ದೊಡ್ಡ ತಾರಗಣ ಚಿತ್ರದಲ್ಲಿದೆ. ಇನ್ನು ಚಿತ್ರದಲ್ಲಿ ಪ್ರಭಾಸ್ ಲುಕ್ಸ್ ಬಗ್ಗೆ ಕೆಲವರು ಟ್ರೋಲ್ ಮಾಡಿದ್ದರು. ಪ್ರಭಾಸ್ ಚಿತ್ರದ ಬಹುತೇಕ ದೃಶ್ಯಗಳಲ್ಲಿ ನಟಿಸಿದಂತೆ ಕಾಣ್ತಿಲ್ಲ. ಬಾಡಿ ಡಬಲ್ ಬಳಸಿದ್ದಾರೆ. ಪ್ರಭಾಸ್ ರೀತಿ ಕಾಣುವ ಬೇರೆ ವ್ಯಕ್ತಿ ನಟಿಸಿದಂತೆ ಕಾಣ್ತಿದೆ. ಬಳಿಕ ಗ್ರಾಫಿಕ್ಸ್‌ನಲ್ಲಿ ಅದನ್ನು ಪ್ರಭಾಸ್ ರೀತಿ ಕಾಣುವಂತೆ ಮಾಡಿದ್ದಾರೆ ಎಂದು ಮೂದಲಿಸಿದ್ದರು.

Malavika Mohanan Hits Back at The Rajasaab Body Double Trolls Shares Stunt Making Video

ಇನ್ನು ನಾಯಕಿ ಮಾಳವಿಕಾ ಮೋಹನನ್ ಸಣ್ಣಪುಟ್ಟ ಸ್ಟಂಟ್‌ಗಳನ್ನು ಮಾಡಿದ್ದಾರೆ. ಆದರೆ ಚಿತ್ರದಲ್ಲಿ ಆಕೆ ಬದಲು ಬಾಡಿ ಡಬಲ್ ಬಳಸಿದ್ದಾರೆ. ಆ ಸ್ಟಂಟ್ಸ್ ಮಾಳವಿಕಾ ಮಾಡಿಲ್ಲ. ಬೇರೆಯವರಿಂದ ಮಾಡಿಸಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ಬೇಸತ್ತು ಮಲಯಾಳಂ ನಟಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ಒಂದಷ್ಟು ಮೇಕಿಂಗ್ ಫುಟೇಜ್ ಹಂಚಿಕೊಂಡಿದ್ದಾರೆ. ನಾನೇ ನಟಿಸಿರುವುದು, ಡ್ಯೂಪ್ ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.

'ದಿ ರಾಜಾಸಾಬ್' ಚಿತ್ರದಲ್ಲಿ ನಾನು ಸ್ಟಂಟ್ ಮಾಡಿಲ್ಲ. ಬಾಡಿ ಡಬಲ್ ಆಕ್ಟರ್ ಅದೆಲ್ಲಾ ಮಾಡಿದ್ದಾರೆ ಎಂದು ಫೋಟೊ ವೈರಲ್ ಮಾಡ್ತಿದ್ದಾರೆ. ಮೊದಲನೆಯದಾಗಿ, ನಾನು ಆಕ್ಷನ್ ಮಾಡುವುದನ್ನು ನಿಜವಾಗಿಯೂ ಇಷ್ಟಪಡುತ್ತೇನೆ. ನಾನು ಚಿಕ್ಕ ವಯಸ್ಸಿನಿಂದಲೂ ಸ್ಪೋರ್ಟಿ ಹುಡುಗಿಯಾಗಿದ್ದೇನೆ. ನನ್ನ ದೇಹವನ್ನು ದೈಹಿಕವಾಗಿ ಸವಾಲು ಮಾಡುವುದು ಮತ್ತು ಹೊಸ ವಿಷಯಗಳನ್ನು ಕಲಿಯುವುದನ್ನು ನಾನು ಆನಂದಿಸುತ್ತೇನೆ" ಎಂದು ಮಾಳವಿಕಾ ಬರೆದುಕೊಂಡಿದ್ದಾರೆ.

ಕಲಾವಿದರು ತಾವೇ ಸ್ಟಂಟ್‌ಗಳನ್ನು ಮಾಡುತ್ತಿದ್ದರೂ ಸಹ ಸೆಟ್‌ಗಳಲ್ಲಿ ಯಾವಾಗಲೂ ಸ್ಟಂಟ್ ಡಬಲ್ ಇರ್ತಾರೆ ಎಂದು ಮಾಳವಿಕಾ ಹೇಳಿದ್ದಾರೆ. "ರಿಹರ್ಸಲ್ ಮಾಡಿಸಲು ಅವರನ್ನು ಬಳಸಿಕೊಳ್ಳುತ್ತಾರೆ. ಅಥವಾ ಕೆಲವು ಶಾಟ್‌ಗಳನ್ನು ಕಲಾವಿದರು ಮಾಡುವುದು ತುಂಬಾ ಅಪಾಯಕಾರಿ ಎಂದು ಅವರು ಭಾವಿಸಿದಾಗ ಡ್ಯೂಪ್ ಬಳಸಲಾಗುತ್ತದೆ. ನಾನು ಸ್ಟಂಟ್ಸ್ ಮಾಡುವ ಕೆಲ ಮೇಕಿಂಗ್ ಗ್ಲಿಂಪ್ಸ್ ಇಲ್ಲಿದೆ ನೋಡಿ ಎಂದು ಮಲಯಾಳಂ ನಟಿ ಪೋಸ್ಟ್ ಮಾಡಿದ್ದಾರೆ.

ಸೌತ್ ಸಿನಿದುನಿಯಾದಲ್ಲಿ ಮಾಳವಿಕಾ ಆರಕ್ಕೇರದ ಮೂರಕ್ಕಿಳಿಯದ ನಟಿಯಾಗಿ ಉಳಿದುಬಿಟ್ಟಿದ್ದಾರೆ. ಕನ್ನಡದಲ್ಲಿ ಮೊದಲಿಗೆ ನಟಿಸಲು ಆರಂಭಿಸಿದರು. ಬಳಿಕ ತಮಿಳು, ಮಲಯಾಳಂ, ಹಿಂದಿ ಹಾಗೂ ತೆಲುಗು ಚಿತ್ರದಲ್ಲಿ ನಟಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಗ್ಲಾಮರ್ ಡೋಸ್ ಹೆಚ್ಚಿಸಿದರೂ ಪ್ರಯೋಜನವಾಗ್ತಿಲ್ಲ. ತಮಿಳಿನ 'ಸರ್ದಾರ್- 2' ಚಿತ್ರದಲ್ಲಿ ಕಾರ್ತಿ ಜೊತೆ ನಟಿಸುತ್ತಿದ್ದಾರೆ.

ಕೇರಳದ ಪಯನ್ನೂರ್‌ನಲ್ಲಿ ಹುಟ್ಟಿ ಬೆಳೆದ ಮಾಳವಿಕಾ ಮೋಹನನ್ ಕನ್ನಡದ 'ನಾನು ಮತ್ತು ವರಲಕ್ಷ್ಮಿ' ಎಂಬ ಚಿತ್ರದಲ್ಲಿ ನಟಿಸಿದ್ದರು. ತಂದೆ ಕೆ.ಯು ಮೋಹನನ್ ಮಲಯಾಳಂ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ ಹೆಸರು ಮಾಡಿದವರು. ಹಾಗಾಗಿ ಮಗಳಿಗೆ ಸಿನಿಮಾ ಅವಕಾಶಗಳು ಸಿಗುವುದು ಕಷ್ಟವಾಗಲಿಲ್ಲ. ಆದರೆ ದೊಡ್ಡ ಯಶಸ್ಸು ಮಾತ್ರ ಇನ್ನು ಸಿಕ್ಕಿಲ್ಲ. ಸೋಶಿಯಲ್ ಮೀಡಿಯಾದಲ್ಲೂ ಮಾಳವಿಕಾ ಸಖತ್ ಆಕ್ಟೀವ್ ಆಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X