For Quick Alerts
  ALLOW NOTIFICATIONS  
  For Daily Alerts

  ಕೆರೆಯ ನೀರನ್ನು ಕೆರೆಗೆ ಚೆಲ್ಲೋದಂದ್ರೆ ಇದೇನಾ: ಮಲಯಾಳಂನ ತೆಲುಗು ರಿಮೇಕ್ ಸಿನಿಮಾ ಮಲಯಾಳಂನಲ್ಲೂ ರಿಲೀಸ್!

  |

  ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗ ಇತರೆ ಚಿತ್ರರಂಗಗಳ ಹಿಟ್ ಚಿತ್ರಗಳನ್ನು ರಿಮೇಕ್ ಮಾಡುವುದನ್ನು ತುಸು ಹೆಚ್ಚಾಗಿಯೇ ರೂಢಿಸಿಕೊಂಡಂತೆ ಕಾಣ್ತಿದೆ. ಅದರಲ್ಲಿಯೂ ಮೆಗಾ ಫ್ಯಾಮಿಲಿ ಹೀರೊಗಳು ಕಳೆದ ಐದಾರು ವರ್ಷಗಳಲ್ಲಿ ಹೆಚ್ಚಾಗಿ ರಿಮೇಕ್ ಮಾಡಿದ್ದಾರೆ. ರಾಮ್ ಚರಣ್, ಪವನ್ ಕಲ್ಯಾಣ್ ಹಾಗೂ ಮೆಗಾ ಸ್ಟಾರ್ ಚಿರಂಜೀವಿ ಈ ಮೂವರೂ ಸಹ ಇತ್ತೀಚಿನ ದಿನಗಳಲ್ಲಿ ಹಿಟ್‌ಗಾಗಿ ರಿಮೇಕ್ ಹಿಂದೆ ಬಿದ್ದವರೇ.

  ಇನ್ನು ಚಿರಂಜೀವಿ 2017ರಲ್ಲಿ ಕಮ್‌ಬ್ಯಾಕ್ ಮಾಡಿದ್ದು ಕೂಡ ರಿಮೇಕ್ ಚಿತ್ರದ ಮೂಲಕವೇ. 2014ರಲ್ಲಿ ತೆರೆಕಂಡಿದ್ದ ತಮಿಳಿನ ವಿಜಯ್ ಅಭಿನಯದ ಕತ್ತಿ ಸಿನಿಮಾವನ್ನು 2017ರಲ್ಲಿ ಖೈದಿ ನಂ 150 ಶೀರ್ಷಿಕೆಯಡಿಯಲ್ಲಿ ರಿಮೇಕ್ ಮಾಡಿ 150 ಕೋಟಿ ಕ್ಲಬ್ ಸೇರಿದ್ದರು ನಟ ಚಿರಂಜೀವಿ. ನಂತರ ಎರಡು ಸ್ವಮೇಕ್ ಸಿನಿಮಾಗಳಾದ ಸೈರಾ ನರಸಿಂಹ ರೆಡ್ಡಿ ಹಾಗೂ ಆಚಾರ್ಯದಲ್ಲಿ ಅಭಿನಯಿಸಿ ಸೋಲುಂಡರು. ಹೀಗಾಗಿ ಮತ್ತೆ ರಿಮೇಕ್ ಹಿಂದೆ ಬಿದ್ದಿರುವ ಚಿರಂಜೀವಿ ಈ ಬಾರಿ ಮಲಯಾಳಂನ ಹಿಟ್ ಚಿತ್ರ ಲೂಸಿಫರ್ ರಿಮೇಕ್‌ನಲ್ಲಿ ನಟಿಸಿದ್ದಾರೆ.

  ಚಿತ್ರ ಇದೇ ಅಕ್ಟೋಬರ್ 5ರಂದು ವಿಜಯದಶಮಿ ಪ್ರಯುಕ್ತ ಬಿಡುಗಡೆಯಾಗಲಿದ್ದು, ಗಾಡ್‌ಫಾದರ್ ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಲಾಗಿದ್ದು, ಹೈಪ್ ಹೆಚ್ಚಿಸಲು ಪ್ರಿ ರಿಲೀಸ್ ಇವೆಂಟ್ ಅನ್ನೂ ಸಹ ಆಯೋಜಿಸುತ್ತಿದೆ. ಇನ್ನು ಈ ಚಿತ್ರದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ನಟಿಸಿರುವ ಕಾರಣ ಈ ಸಿನಿಮಾವನ್ನು ಹಿಂದಿಯಲ್ಲೂ ಸಹ ಬಿಡುಗಡೆ ಮಾಡಲಾಗುತ್ತಿದ್ದು, ಹಿಂದಿ ಮಾತ್ರವಲ್ಲದೇ ಈ ಚಿತ್ರ ಮಲಯಾಳಂನಲ್ಲೂ ಬಿಡುಗಡೆಯಾಗಲಿದೆ ಎಂಬ ಪೋಸ್ಟರ್ ಒಂದು ಹರಿದಾಡುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ.

  ಟ್ರೋಲ್ ಮಾಡಿದ ನೆಟ್ಟಿಗರು

  ಟ್ರೋಲ್ ಮಾಡಿದ ನೆಟ್ಟಿಗರು

  ಈ ಪೋಸ್ಟರ್ ಬಿಡುಗಡೆಯಾಗ್ತಾ ಇದ್ದಂತೆ ನಟ್ಟಿಗರು ಗಾಡ್ ಫಾದರ್ ಚಿತ್ರತಂಡವನ್ನು ಟ್ರೋಲ್ ಮಾಡಿದ್ದಾರೆ. ಅಸಲಿಗೆ ಇಂಥ ಕೆಟ್ಟ ಉಪಾಯವಾದ್ರೂ ನಿಮಗೆ ಎಲ್ಲಿಂದ ಬರುತ್ರೋ ಎಂದು ಕಾಲೆಳೆದಿದ್ದಾರೆ. ಮಲಯಾಳಂ ಸಿನಿಮಾನ ತೆಲುಗಿಗೆ ರಿಮೇಕ್ ಮಾಡಿ ಮತ್ತೆ ಅದನ್ನು ಮಲಯಾಳಂಗೆ ರಿಮೇಕ್ ಮಾಡ್ತಿದ್ದಾರೆ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂದ್ರೆ ಇದೇ ಇರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

  ಈ ರೀತಿ ನಡೆಯುತ್ತಿರುವುದು ಇದೇ ಮೊದಲೇನಲ್ಲ

  ಈ ರೀತಿ ನಡೆಯುತ್ತಿರುವುದು ಇದೇ ಮೊದಲೇನಲ್ಲ

  ಇನ್ನು ಈ ರೀತಿ ಒಂದು ಭಾಷೆಯ ಹಿಟ್ ಚಿತ್ರವನ್ನು ರಿಮೇಕ್ ಮಾಡಿ ಅದನ್ನು ಮತ್ತೆ ಅದೇ ಭಾಷೆಗೆ ಡಬ್ ಮಾಡಿರುವ ಉದಾಹರಣೆ ಸಾಕಷ್ಟಿವೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ಜೂ. ಎನ್‌ಟಿಆರ್ ಅಭಿನಯದ ಹಿಟ್ ಸಿನಿಮಾ ಟೆಂಪರ್ ಚಿತ್ರವನ್ನು ತಮಿಳಿಗೆ ಅಯೋಗ್ಯ ಶೀರ್ಷಿಕೆ ಅಡಿಯಲ್ಲಿ ರಿಮೇಕ್ ಮಾಡಿ ಮತ್ತೆ ಅದನ್ನು ತೆಲುಗಿಗೆ ಡಬ್ ಮಾಡಿದ್ದು.

  ಲೂಸಿಫರ್ ತೆಲುಗಿಗೂ ಡಬ್ ಆಗಿತ್ತು

  ಲೂಸಿಫರ್ ತೆಲುಗಿಗೂ ಡಬ್ ಆಗಿತ್ತು

  ಇದಕ್ಕೆಲ್ಲಾ ಹೆಚ್ಚಿನ ನಗೆಪಾಟಲಿನ ವಿಷಯವೆಂದರೆ ಈ ಗಾಡ್‌ಫಾದರ್ ಚಿತ್ರದ ಮೂಲ ಸಿನಿಮಾ ಮಲಯಾಳಂನ ಲೂಸಿಫರ್ ತೆಲುಗಿಗೂ ಡಬ್ ಆಗಿತ್ತು ಎಂಬುದು. ಹೌದು, ಮೋಹನಾ ಲಾಲ್ ಅಭಿನಯದ ಲೂಸಿಫರ್ ಸಿನಿಮಾ ತೆಲುಗು ಡಬ್ಬಿಂಗ್ ಇಂದಿಗೂ ಸಹ ಅಮೆಜಾನ್ ಪ್ರೈಮ್ ವಿಡಿಯೋ ಓಟಿಟಿಯಲ್ಲಿ ಲಭ್ಯವಿದೆ. ಹೀಗೆ ತಮ್ಮದೇ ಭಾಷೆಗೆ ಈಗಾಗಲೇ ಡಬ್ ಆಗಿರುವ ಮಲಯಾಳಂ ಸಿನಿಮಾವನ್ನು ರಿಮೇಕ್ ಮಾಡಿ ಮತ್ತೆ ಅದನ್ನು ಮಲಯಾಳಂಗೆ ಡಬ್ ಮಾಡಿ ಥೀಯೇಟರ್‌ನಲ್ಲಿ ಬಿಡುಗಡೆಯ ಮಾಡುವ ಮಹಾ ಸಾಹಸಕ್ಕೆ ಕೈಹಾಕಿದೆ ಗಾಡ್‌ಫಾದರ್ ಚಿತ್ರತಂಡ.

  English summary
  Malayalm Lucifer's Telugu remake Godfather is going to be dubbed and release in Malayalam
  Sunday, September 25, 2022, 18:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X