ಮುತ್ತಿನ ಮಳೆ ಸುರಿಸಿದ ನರೇಶ್- ಪವಿತ್ರಾ: ಆಕಾಶ ಮೇಲೆ ಬಿದ್ರು ಭೂಮಿ ಬಾಯಿ ಬಿಟ್ರು ಒಟ್ಟಿಗಿರ್ತೀವಿ ಎಂದ ಜೋಡಿ
ತೆಲುಗು ನಟ ನರೇಶ್ ಹಾಗೂ ಕನ್ನಡ ನಟಿ ಪವಿತ್ರಾ ಲೋಕೇಶ್ ಇಬ್ಬರು ರಿಲೇಷನ್‌ಶಿಪ್‌ನಲ್ಲಿರೋದು ಗೊತ್ತೇಯಿದೆ. ತಮ್ಮದೇ ಕಥೆಯನ್ನು ಈಗ 'ಮಳ್ಳಿ ಪೆಳ್ಳಿ' ಚಿತ್ರದಲ್ಲಿ ತೆರೆಗೆ ತರುತ್ತಿದ್ದಾರೆ. ತಮ್ಮ ತಮ್ಮ ಪಾತ್ರಗಳಲ್ಲಿ ತಾವೇ ನಟಿಸಿದ್ದಾರೆ. ಮೇ 26ಕ್ಕೆ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಸದ್ಯ ಚಿತ್ರದ ಪ್ರಚಾರದಲ್ಲಿ ಇಬ್ಬರು ಬ್ಯುಸಿಯಾಗಿದ್ದಾರೆ.
ಇತ್ತೀಚೆಗೆ ರಿಲೀಸ್ ಆಗಿರುವ 'ಮಳ್ಳಿ ಪೆಳ್ಳಿ' ಚಿತ್ರದ ಟೀಸರ್ ಹಾಗೂ ಟ್ರೈಲರ್ ಗಮನ ಸೆಳೆದಿದೆ. ನರೇಶ್ ತಮ್ಮ 3ನೇ ಪತ್ನಿ ರಮ್ಯಾ ರಘುಪತಿ ಅವರನ್ನು ಟಾರ್ಗೆಟ್ ಮಾಡಿ 'ಮಳ್ಳಿ ಪೆಳ್ಳಿ' ಸಿನಿಮಾ ಮಾಡಿರೋದು ಗೊತ್ತಾಗ್ತಿದೆ. ತೆಲುಗು ಕಿರುತೆರೆಯ 'ಸಿಕ್ಸ್ತ್ ಸೆನ್ಸ್' ಶೋನಲ್ಲಿ ಇಬ್ಬರೂ ಭಾಗಿ ಆಗಿದ್ದಾರೆ. ಈ ವೇಳೆ ಇಬ್ಬರು ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಪರಸ್ಪರ ಒಬ್ಬರಿಗೊಬ್ಬರು ಮುತ್ತಿನ ಮಳೆ ಸುರಿಸಿದ್ದಾರೆ. ತಮ್ಮಿಬ್ಬರ ರಿಲೇಷನ್‌ಶಿಪ್ ಸ್ಟೇಟಸ್ ಬಗ್ಗೆ ಮಾತನಾಡಿದ್ದಾರೆ.

ಕಳೆದ ವರ್ಷ ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಗಂಭೀರ ಆರೋಪಗಳನ್ನು ಮಾಡಿದ್ದರು. ನಮ್ಮ ಸಂಸಾರದಲ್ಲಿ ಹುಳಿ ಹಿಂಡಿದ್ದು ಪವಿತ್ರಾ ಲೋಕೇಶ್ ಎಂದಿದ್ದರು. 3 ಜನ ಆರೋಪ, ಪ್ರತ್ಯಾರೋಪಗಳಲ್ಲಿ ಮುಳುಗಿದ್ದರು. ಮೊದಲಿಗೆ ನಾವಿಬ್ಬರು ಬರೀ ಫ್ರೆಂಡ್ಸ್ ಎಂದು ಹೇಳಿದ್ದ ನರೇಶ್ ಹಾಗೂ ಪವಿತ್ರಾ ನಂತರ ವರಸೆ ಬದಲಿಸಿದ್ದರು. ಮೈಸೂರಿನ ಹೋಟೆಲ್‌ವೊಂದರ ಕೋಣೆಯಲ್ಲಿ ರಮ್ಯಾ ರಘುಪತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಹೋಟೆಲ್‌ನಲ್ಲಿ ಭಾರೀ ಹಂಗಾಮಾ ಆಗಿ ಆ ವಿಡಿಯೋ ವೈರಲ್ ಆಗಿತ್ತು.
'ಮಳ್ಳಿ ಪೆಳ್ಳಿ' ಪ್ರಚಾರದ ಗಿಮಿಕ್
ಇನ್ನು ನರೇಶ್ ತಮ್ಮ 3ನೇ ಪತ್ನಿ ರಮ್ಯಾ ರಘುಪತಿಯಿಂದ ಡಿವೋರ್ಸ್ ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ರಮ್ಯಾ ಇದಕ್ಕೆ ಒಪ್ಪುತ್ತಿಲ್ಲ. ಇದೆಲ್ಲದರ ನಡುವೆ ಹೊಸ ವರ್ಷದ ಸಂಭ್ರಮದಲ್ಲಿ ನರೇಶ್ ಹಾಗೂ ಪವಿತ್ರಾ ಲಿಪ್‌ಲಾಕ್ ವಿಡಿಯೋ ಹರಿಬಿಟ್ಟಿದ್ದರು. ಶೀಘ್ರದಲ್ಲೇ ಮದುವೆ ಆಗುವುದಾಗಿ ವಿಡಿಯೋದಲ್ಲಿ ತಿಳಿಸಲಾಗಿತ್ತು. ನಂತರ ಮತ್ತೊಂದು ದಿನ ಮದುವೆ ಆಗಿರುವ ವಿಡಿಯೋ, ಹನಿಮೂನ್‌ಗೆ ಹೋಗಿ ಬಂದ ವಿಡಿಯೋ ಅಂತೆಲ್ಲಾ ಭಾರೀ ಹಂಗಾಮ ಕ್ರಿಯೇಟ್ ಮಾಡಿದರು. ಕೊನೆಗೆ ಅದು 'ಮಳ್ಳಿ ಪೆಳ್ಳಿ' ಸಿನಿಮಾ ಪ್ರಚಾರದ ಗಿಮಿಕ್ ಎನ್ನುವುದು ಗೊತ್ತಾಯಿತು.

ಲೇಟ್ ಏಜ್ ಲವ್ ಸ್ಟೋರಿ
ಎಂ. ಎಸ್ ರಾಜು 'ಮಳ್ಳಿ ಪೆಳ್ಳಿ' ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ನರೇಶ್ ಚಿತ್ರ ನಿರ್ಮಿಸಿ ನಟಿಸಿದ್ದಾರೆ. 15 ಕೋಟಿ ವೆಚ್ಚದಲ್ಲಿ ಸಿನಿಮಾ ಮಾಡಿದ್ದೀನಿ ಎಂದಿದ್ದಾರೆ. ಮೈಸೂರಿನ ಹೋಟೆಲ್ ಸನ್ನಿವೇಶವನ್ನು ರೀಕ್ರಿಯೇಟ್ ಮಾಡಲಾಗಿದೆ. ಚಿತ್ರದಲ್ಲಿ ರಮ್ಯಾ ರಘುಪತಿ ಪಾತ್ರ ಕೂಡ ಇದೆ. ವನಿತಾ ವಿಜಯ್ ಕುಮಾರ್ ಆ ಪಾತ್ರ ನಿಭಾಯಿಸಿದ್ದಾರೆ. ಜೀವನದಲ್ಲಿ ತಮ್ಮ ಸಂಗಾತಿಗಳಿಂದ ಬೇಸತ್ತ ಮಧ್ಯ ವಯಸ್ಸಿನ ಇಬ್ಬರ ನಡುವೆ ಪ್ರೀತಿ ಹುಟ್ಟುವುದೇ ಸಿನಿಮಾ ಕಥೆ. ಇದೊಂದು ಲೇಟ್ ಏಜ್ ಲವ್ ಸ್ಟೋರಿ ಸಿನಿಮಾ ಎನ್ನಬಹುದು.
ರಿಲೇಷನ್‌ಶಿಪ್ ಸ್ಟೇಟಸ್ ಏನು?
'ಸಿಕ್ಸ್ತ್ ಸೆನ್ಸ್' ಶೋನಲ್ಲಿ ಭಾಗಿ ಆಗಿರುವ ಜೋಡಿ ತಮ್ಮ ರಿಲೇಷನ್ ಶಿಪ್ ಬಗ್ಗೆ ಮಾತನಾಡಿದ್ದಾರೆ. ಪವಿತ್ರಾ ಅವರನ್ನು ಮುದ್ದಾಗಿ ಅಮ್ಮುಲು ಎಂದು ಕರೆಯುತ್ತೇನೆ. ಇನ್ನು ಪ್ರೀತಿ ಹೆಚ್ಚಾದರೆ ಅಮ್ಮು ಎಂದು ಕರೆಯುವುದಾಗಿ ನರೇಶ್ ಹೇಳಿದ್ದಾರೆ. ಇದಕ್ಕೆ ಪವಿತ್ರಾ ನಾಚಿ ನೀರಾಗಿದ್ದಾರೆ. ಇನ್ನು ನಿಮ್ಮ ರಿಲೇಷನ್‌ಶಿಪ್‌ನ ಸದ್ಯದ ಸ್ಟೇಟಸ್ ಏನು ಎನ್ನುವ ಪ್ರಶ್ನೆಗೆ "ಆಕಾಶ ಮೇಲೆ ಬಿದ್ರು ಭೂಮಿ ಬಾಯಿ ಬಿಟ್ರು ಒಟ್ಟಿಗಿರ್ತೀವಿ" ಎಂದು ನರೇಶ್ ಹೇಳಿದ್ದಾರೆ. ಅದಕ್ಕೆ ಪವಿತ್ರಾ ಕೂಡ ಸಹಮತ ಸೂಚಿಸಿದ್ದಾರೆ. ಸದ್ಯ ಈ ಪ್ರೋಮೊ ವೈರಲ್ ಆಗಿದೆ.


Click it and Unblock the Notifications











