ಪವಿತ್ರಾ, ನಿಮ್ಮನ್ನು ನೋಡಿ ಬಿದ್ರಾ? ನಿಮ್ಮ ಆಸ್ತಿ ನೋಡಿ ಬಿದ್ರಾ? ಒಟ್ಟಿಗೆ ಇರ್ತಾರಾ ಅಂತ ಏನು ಗ್ಯಾರೆಂಟಿ?

ತೆಲುಗಿನ 'ಮಳ್ಳಿ ಪೆಳ್ಳಿ' ಸಿನಿಮಾ ರಿಲೀಸ್ ಡೇಟ್ ಹತ್ತಿರ ಬರ್ತಿದೆ. ಕನ್ನಡದಲ್ಲೂ ಈ ಸಿನಿಮಾ ಡಬ್ ಆಗಿ ಬರ್ತಿದೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ತಮ್ಮೇ ಲವ್‌ಸ್ಟೋರಿಯನ್ನು ಈ ಚಿತ್ರದಲ್ಲಿ ಹೇಳ್ತಿದ್ಧಾರೆ. ಚಿತ್ರದ ಪ್ರಮೋಷನ್ ವೇಳೆ ಜೋಡಿಯಾ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ನಾವಿಬ್ಬರು ಲವ್‌ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದೀವಿ ಅಂದು ಕೂಡ ಹೇಳಿದ್ದಾರೆ.

ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಿದೆ. ತಮ್ಮದೇ ಜೀವನದ ಕಥೆಯನ್ನು ನರೇಶ್ ತೆರೆಮೇಲೆ ಹೇಗೆ ತಂದಿದ್ದಾರೆ ಎನ್ನುವ ಕುತೂಹಲ ಕೆಲವರನ್ನು ಕಾಡುತ್ತಿದೆ. ಇನ್ನು ಸಿನಿಮಾ ಜೊತೆ ಜೊತೆಗೆ ನರೇಶ್- ಪವಿತ್ರಾ ರಿಲೇಶನ್‌ಶಿಪ್‌ ಬಗ್ಗೆಯೂ ಭಾರೀ ಚರ್ಚೆ ಆಗುತ್ತಿದೆ. ಪ್ರಮೋಷನ್‌ ವೇಳೆ ಮಾಧ್ಯಮಗಳ ನೇರಾನೇರ ಪ್ರಶ್ನೆಗಳಿಗೆ ಜೋಡಿ ಉತ್ತರ ಕೊಡುತ್ತಾ ಬರ್ತಿದ್ದಾರೆ. ಸದ್ಯ ಟಿವಿ9 ತೆಲುಗು ವಾಹಿನಿಗೆ ಇಬ್ಬರು ಸಂದರ್ಶನ ನೀಡಿದ್ದಾರೆ. ಬೋಲ್ಡ್ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.

Malli Pelli Promotions: Naresh And Pavitra Lokesh interesting comments about their relationship

ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ತಮ್ಮ ದಾಂಪತ್ಯದಲ್ಲಿ ಬಿರುಕು ಮೂಡಲು ನಟಿ ಪವಿತ್ರಾ ಲೋಕೇಶ್ ಕಾರಣ ಎಂದು ಆರೋಪ ಮಾಡಿದ್ದರು. ಅವರ ಆರೋಪಗಳಿಗೆ ನರೇಶ್- ಪವಿತ್ರಾ ತಿರುಗೇಟು ನೀಡಿದ್ದರು. ನಂತರ ಈ ಆರೋಪ ಪ್ರತ್ಯಾರೋಪ ತಾರಕ್ಕೇರಿತ್ತು. ನರೇಶ್- ಪವಿತ್ರಾ ಮೈಸೂರಿನ ಹೋಟೆಲ್‌ ಕೋಣೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಅಲ್ಲಿಂದ ಮುಂದೆ ಇವರಿಬ್ಬರ ರಿಲೇಷನ್‌ಶಿಪ್‌ ಬಗ್ಗೆ ಚರ್ಚೆ ಹೆಚ್ಚಾಯಿತು. ಕೊನೆಗೆ ತಮ್ಮದೇ ಕಥೆಯನ್ನು ಸಿನಿಮಾ ಮಾಡಲು ಮುಂದಾದರು.

ಇವರಿಬ್ಬರು ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ ಎನ್ನುವ ಗುಸುಗುಸು ಶುರುವಾಗುತ್ತಿದ್ದಂತೆ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾದರು. ಈ ವಯಸ್ಸಿನಲ್ಲಿ ಇವರಿಗೆ ಇದೆಲ್ಲಾ ಬೇಕಾ? ನರೇಶ್ ಆಸ್ತಿ ನೋಡಿ ಪವಿತ್ರಾ ಬಿದ್ದಿದ್ದಾರಾ? ಒಂದೊಳ್ಳೆ ಸಂಸಾರ ಹಾಳು ಮಾಡಿದ್ದು ಸರೀನಾ? ಮುಂದೆ ಇಬ್ಬರು ದೂರಾಗುವುದಿಲ್ಲ ಅಂತ ಏನು ಗ್ಯಾರೆಂಟಿ? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕೆಲವರು ಕೇಳಲು ಶುರು ಮಾಡಿದರು. ಇದೇ ಪ್ರಶ್ನೆಗಳನ್ನು ಸಂದರ್ಶನದಲ್ಲಿ ನರೇಶ್ ಹಾಗೂ ಪವಿತ್ರಾ ಮುಂದೆ ಇಡಲಾಗಿದೆ. ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.

Malli Pelli Promotions: Naresh And Pavitra Lokesh interesting comments about their relationship

ನಿಮ್ಮ ಆಸ್ತಿ ನೋಡಿ ಪವಿತ್ರಾ ಬಂದ್ರಾ?

ಪವಿತ್ರಾ ನಿಮ್ಮ ಆಸ್ತಿ ನೋಡಿ ನಿಮ್ಮ ಹಿಂದೆ ಬಂದಿದ್ದಾರೆ ಎನ್ನುವ ಕೆಲವರ ಪ್ರಶ್ನೆಗೆ ನಿಮ್ಮ ಉತ್ತರ ಏನು? ಎನ್ನುವ ಪ್ರಶ್ನೆ "ನನಗೆ ಆಸ್ತಿ ಇಲ್ಲದೇ ಇದ್ದಾಗ ಬಿಟ್ಟು ಹೋದವರು ಇದ್ದಾರೆ. ಆಸ್ತಿಗಾಗಿ ಬಂದವರು ಇದ್ದಾರೆ. ಇದನ್ನೆಲ್ಲಾ ನೋಡಿರುವ ಪುಸ್ತಕ ನಾನು. ವ್ಯಾಮೋಹಕ್ಕೂ ಪ್ರೀತಿಗೂ ವ್ಯತ್ಯಾಸವಿದೆ. ನಾನು, ಪವಿತ್ರಾ ಪರಿಚಯ ಆದಮೇಲೆ ಬಹಳ ಸಮಯ ಸ್ನೇಹಿತರಾಗಿ ಇದ್ದೆವು. ಲವ್, ಮದುವೆ ಬಿಟ್ಟು ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಿದ್ದೆವು."

"ಇದನ್ನೆಲ್ಲಾ ನೋಡಿದ ಮೇಲೆ ನನಗೆ ಆಕೆಯಲ್ಲಿ ಇಷ್ಟವಾಗಿದ್ದು ಏನು ಅಂದ್ರೆ, ನಿಶ್ವಾರ್ಥ. ನಮ್ಮ ತಂದೆ ತಾಯಿ ಕೂಡ ಅದೇ ರೀತಿ ಇದ್ದರು. ಅವರಿಬ್ಬರು ಬಹಳ ಅನ್ಯೋನ್ಯವಾಗಿ, ನಂಬಿಕೆಯಿಂದ ಬಾಳಿ ಬದುಕಿದರು. ನಮ್ಮಿಬ್ಬರ ಬಂಧದ ಬಗ್ಗೆ ಕೇಳಿದ್ರೆ, ನಿಸ್ವಾರ್ಥ ಅನ್ನೋದು ನಮ್ಮನ್ನು ಒಂದು ಮಾಡಿದೆ" ಎಂದಿದ್ದಾರೆ.

Malli Pelli Promotions: Naresh And Pavitra Lokesh interesting comments about their relationship

ನರೇಶ್ ಬಳಿ ಆಸ್ತಿ ಬರೆಸಿಕೊಂಡುಬಿಡಿ

ಇಷ್ಟೆಲ್ಲಾ ಚರ್ಚೆ ಆಗುತ್ತಿರುವುದು ಆಸ್ತಿ ವಿಚಾರಕ್ಕೆ. ನರೇಶ್ ಬಳಿ ಏನಾದರೂ ಆಸ್ತಿ ಬರೆಸಿಕೊಳ್ಳಿ, ಆಗ ನಿಮ್ಮನ್ನು ಬಿಟ್ಟು ಹೋಗಲ್ಲ ಎನ್ನುವ ಪ್ರಶ್ನೆಗೆ "ನಾನೇ ಆಕೆಗೆ ಆಸ್ತಿ" ಎಂದು ನರೇಶ್ ನಕ್ಕಿದ್ದಾರೆ. "ಇನ್ನು ಮುಂದೆ ನರೇಶ್ ಯಾರನ್ನು ನೋಡಲ್ಲ. ನನ್ನನ್ನು ಮಾತ್ರ ನೋಡ್ತಾರೆ. ಬೇಕಿದ್ದರೆ ನೀವು ಕೇಳಿ ನೋಡಿ" ಎಂದಿದ್ದಾರೆ.

ಒಟ್ಟಿಗೆ ಇರ್ತೀವಿ ಅಂತ ಗ್ಯಾರೆಂಟಿ ಕೊಡ್ತೀರಾ?

ನೀವಿಬ್ಬರು ಒಟ್ಟಿಗೆ ಇರ್ತೀವಿ ಎಂದು ಗ್ಯಾರೆಂಟಿ ಕೊಡ್ತೀರಾ. ಪವಿತ್ರಾ ಜಾಗದಲ್ಲಿ ಒಬ್ಬ ಸಾವಿತ್ರಿನೋ, ನರೇಶ್ ಜಾಗದಲ್ಲಿ ಮತ್ತೊಬ್ಬ ಸುರೇಶ್ ಬರಲ್ಲ ಅಂತ ಗ್ಯಾರೆಂಟಿ ಕೊಡ್ತೀರಾ? ಎನ್ನುವ ಪ್ರಶ್ನೆಗೆ "ನಾನು ನರೇಶ್ ಭೇಟಿ ಆಗುವವರೆಗೂ ಅವ್ರು ಯಾರು ಅಂತ ಗೊತ್ತಿರಲಿಲ್ಲ. ಆಮೇಲೆ ಅವರ ಬಗ್ಗೆ ತಿಳಿದುಕೊಂಡೆ" ಎಂದು ಮಾತು ಬದಲಿಸಿದ್ದಾರೆ. ನರೇಶ್ ಮಾತನಾಡಿ "ಆಕೆ ನನ್ನ ಆಸ್ತಿ ಬೇಕಿಲ್ಲ. ನನಗೆ ಆಕೆಯ ಆಸ್ತಿ ಬೇಕಿಲ್ಲ. ಆಕೆ ಕೂಡ ದೊಡ್ಡ ನಟಿ. ಅವರ ತಂದೆ ಕನ್ನಡದಲ್ಲಿ ಒಳ್ಳೆ ನಟರಾಗಿದ್ದರು. ಆಕೆ ಸಹ ಸಂಪಾದಿಸಿದ್ದಾಳೆ"

"ನಾವು ಇನ್ನೊಬ್ಬರನ್ನು ನೋಡಬಾರದು ಎನ್ನುವ ಮನೋಭಾವ ಯಾವಾಗ ಬರುತ್ತದೆ ಅಂದ್ರೆ, ಸರ್ವಸ್ವವನ್ನು ಒಬ್ಬರಿಗೆ ಅರ್ಪಿಸಿಕೊಂಡಾಗ. ಆಕೆಯ ಅಂದ ಎನ್ನುವುದು ಆಕೆಯ ವರ್ಚಸ್ಸು. ಒಬ್ಬ ಪುರುಷ, ಮಹಿಳೆ ಬಳಿ ಬಯಸುವುದು ನಂಬಿಕೆ. ನನ್ನನ್ನು ಬಿಟ್ಟು ಬೇರೆಯವರನ್ನು ನೋಡಲ್ಲ ಅಂತ. ಆ ನಂಬಿಕೆ ನನಗಿದೆ. ಆಕೆ ನನಗೆ ಎಲ್ಲವನ್ನು ಕೊಟ್ಟಿದ್ದಾಳೆ. ಆಕೆ ನನ್ನ ಹಿನ್ನೆಲೆ ಎಲ್ಲಾ ಗೊತ್ತಿದ್ದೂ ಬಂದಿರುವಾಗ ಒಬ್ಬ ಪುರುಷನಾಗಿ ನಾನು ಜೊತೆಗೆ ನಿಲ್ಲಬೇಕು. ನಾವಿಬ್ಬರು ಜೀವನದಲ್ಲಿ ಅಷ್ಟೇ ಕಷ್ಟ ಅನುಭವಿಸ, ಈ ವಯಸ್ಸಿನಲ್ಲಿ ಒಂದಾಗಿರುವಾಗ ಉಳಿದ ಜೀವನವನ್ನು ಸಂತೋಷವಾಗಿ ಕಳೆಯಬೇಕು" ಎಂದಿದ್ದಾರೆ.

"ಎಲ್ಲವೂ ಚೆನ್ನಾಗಿ ಇರುವಾಗ ನಾವು ಯಾಕೆ ಬೇರೆಯವರನ್ನು ನೋಡಬೇಕು. ಬೇರೆ ಆಕರ್ಷಣೆಗೆ ಒಳಗಾಗುವುದಕ್ಕೆ ನಾವು ಚಿಕ್ಕವಯಸ್ಸಿನವರಲ್ಲ, ನಮಗೆ ಅನುಭವ ಇದೆ. ನಮ್ಮ ರಿಲೇಶನ್‌ಶಿಪ್‌ನಲ್ಲಿ ಎಲ್ಲವೂ ಇರುವಾಗ ಮತ್ತೊಬ್ಬರ ಕಡೆ ನೋಡುವ ಪ್ರಮೇಯ ಬರಲ್ಲ" ಎಂದು ಪವಿತ್ರಾ ಹೇಳಿದ್ದಾರೆ.

More from Filmibeat

English summary
Malli Pelli Promotions: Naresh And Pavitra Lokesh interesting comments about their relationship. the movie will hit the screens on May 26, 2023. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X